Advertisement

ಅಪ್ರಾಪ್ತ ಬಾಲಕರಿಗೆ ಮುತ್ತಿಡುವುದು, ಮುದ್ದಾಡುವುದು ಅಸ್ವಾಭಾವಿಕ ಅಪರಾಧವಲ್ಲ; ಹೈಕೋರ್ಟ್

04:10 PM May 15, 2022 | Team Udayavani |

ಮುಂಬೈ: ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ರ ಅಡಿಯಲ್ಲಿ ತುಟಿಗಳಿಗೆ ಮುತ್ತಿಡುವುದು ಮತ್ತು ಮುದ್ದಾಡುವುದು ಅಸ್ವಾಭಾವಿಕ ಅಪರಾಧವಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಪ್ರಾಪ್ತ ವಯಸ್ಕ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿದೆ.

Advertisement

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ, 14 ವರ್ಷದ ಬಾಲಕನ ತಂದೆ ನೀಡಿದ ದೂರಿನ ಮೇರೆ ಕಳೆದ ವರ್ಷ ಬಂಧಿಸಲಾಗಿದ್ದ ವ್ಯಕ್ತಿಗೆ ಜಾಮೀನು ಮಂಜೂರು ಮಾಡಿದರು.

ಏನಿದು ಘಟನೆ: ಹುಡುಗನ ತಂದೆ ಅವರ ಕಪಾಟಿನಲ್ಲಿರಿಸಿದ್ದ ಸ್ವಲ್ಪ ಹಣ ಕಾಣೆಯಾಗಿತ್ತು. ಈ ಬಗ್ಗೆ ವಿಚಾರಿಸಿದಾಗ ಬಾಲಕು ತಾನು ಆಡುತ್ತಿದ್ದ ‘ಓಲಾ ಪಾರ್ಟಿ’ ಎಂಬ ಆನ್‌ಲೈನ್ ಗೇಮ್ ಅನ್ನು ರೀಚಾರ್ಜ್ ಮಾಡಲು ಮುಂಬೈನ ಉಪನಗರದಲ್ಲಿರುವ ಆರೋಪಿಯ ಅಂಗಡಿಗೆ ತಾನು ಭೇಟಿ ನೀಡುತ್ತಿದ್ದೆ. ಆತನಿಗೆ ರೀಚಾರ್ಜ್ ಮಾಡಲು ತಾನು ಹಣ ನೀಡಿದ್ದಾಗಿ ಹೇಳಿಕೊಂಡಿದ್ದಾನೆ.

ಒಂದು ದಿನ, ಅವರು ರೀಚಾರ್ಜ್ ಮಾಡಲು ಹೋದಾಗ ಆರೋಪಿಗಳು ಅವನ ತುಟಿಗಳಿಗೆ ಮುತ್ತಿಟ್ಟರು ಮತ್ತು ಅವರ ಖಾಸಗಿ ಭಾಗಗಳನ್ನು ಮುಟ್ಟಿದರು ಎಂದು ಹುಡುಗ ಆರೋಪಿಸಿದ್ದಾನೆ.

ಪರಿಣಾಮ ಪೊಲೀಸರನ್ನು ಸಂಪರ್ಕಿಸಿದ ಬಾಲಕನ ತಂದೆ, ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ತಡೆಗಟ್ಟುವಿಕೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 377 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

Advertisement

ಇದನ್ನೂ ಓದಿ:ಸಂಶೋಧನಾತ್ಮಕ ಅಧ್ಯಯನಕ್ಕೆ ಯಕ್ಷಗಾನ ಕ್ಷೇತ್ರದಲ್ಲಿ ಹೆಚ್ಚು ಅವಕಾಶ: ಜಿಎಸ್‌ಬಿ

ಆರೋಪಿಗೆ ಜಾಮೀನು ಮಂಜೂರು ಮಾಡುವಾಗ ನ್ಯಾಯಮೂರ್ತಿ ಪ್ರಭುದೇಸಾಯಿ, ಬಾಲಕನ ವೈದ್ಯಕೀಯ ಪರೀಕ್ಷೆಯು ಲೈಂಗಿಕ ದೌರ್ಜನ್ಯದ ಹೇಳಿಕೆಯನ್ನು ಬೆಂಬಲಿಸಲಿಲ್ಲ ಎಂದು ಅಭಿಪ್ರಾಯ ಪಟ್ಟರು. ಆರೋಪಿಯ ವಿರುದ್ಧ ವಿಧಿಸಲಾದ ಪೋಕ್ಸೋ ಸೆಕ್ಷನ್‌ಗಳು ಗರಿಷ್ಠ ಐದು ವರ್ಷಗಳ ಶಿಕ್ಷೆ ಮತ್ತು ಜಾಮೀನಿಗೆ ಅರ್ಹವಾಗಿದೆ ಎಂದು ಅವರು ಹೇಳಿದರು.

ಪ್ರಸ್ತುತ ಪ್ರಕರಣದಲ್ಲಿ, ಅಸ್ವಾಭಾವಿಕ ಲೈಂಗಿಕತೆಯ ಅಂಶವು ಪ್ರಾಥಮಿಕವಾಗಿ ಅನ್ವಯಿಸುವುದಿಲ್ಲ ಎಂದು ನ್ಯಾಯಮೂರ್ತಿ ಪ್ರಭುದೇಸಾಯಿ ಹೇಳಿದರು.

“ಸಂತ್ರಸ್ತರ ಹೇಳಿಕೆ ಮತ್ತು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರಾಥಮಿಕ ಮುಖಾಂತರ ಅರ್ಜಿದಾರರು ಸಂತಸ್ತರ ಖಾಸಗಿ ಭಾಗಗಳನ್ನು ಸ್ಪರ್ಶಿಸಿದ್ದಾರೆ ಮತ್ತು ಅವನ ತುಟಿಗಳಿಗೆ ಮುತ್ತಿಟ್ಟಿದ್ದಾರೆ ಎಂದು ಸೂಚಿಸುತ್ತದೆ. ನನ್ನ ಅಭಿಪ್ರಾಯದಲ್ಲಿ ಇದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ರ ಅಡಿಯಲ್ಲಿ ಅಪರಾಧವಾಗುವುದಿಲ್ಲ.” ನ್ಯಾಯಾಧೀಶರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next