Advertisement

“ಉಗ್ರ ಪಟ್ಟಿ’ಯಿಂದ ಕೈಬಿಡಬೇಕಂತೆ!

07:35 AM Nov 29, 2017 | Team Udayavani |

ಲಾಹೋರ್‌: ತನ್ನನ್ನು “ಜಾಗತಿಕ ಉಗ್ರ’ರ ಪಟ್ಟಿಯಿಂದ ಕೈಬಿಡಬೇಕೆಂದು ಕೋರಿ ಮುಂಬೈ ದಾಳಿ ಮಾಸ್ಟರ್‌ವೆುçಂಡ್‌, ಜೆಯುಡಿ ಉಗ್ರ ಹಫೀಜ್‌ ಸಯೀದ್‌ ವಿಶ್ವಸಂಸ್ಥೆಗೆ ಮನವಿ ಮಾಡಿದ್ದಾನೆ. ಗೃಹಬಂಧನದಿಂದ ಬಿಡುಗಡೆ ಯಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Advertisement

ಪಾಕಿಸ್ತಾನದ ನ್ಯಾಯಾಲಯಗಳಲ್ಲಿ ಭಯೋತ್ಪಾದನೆ ಸೇರಿದಂತೆ ಯಾವುದೇ ಪ್ರಕರಣಗಳಲ್ಲೂ ನನ್ನ ವಿರುದ್ಧದ ಆರೋಪವು ಸಾಬೀತಾಗಿಲ್ಲ. ಹೀಗಾಗಿ, ಭಯೋತ್ಪಾದಕರ ಪಟ್ಟಿಯಿಂದ ನನ್ನ ಹೆಸರನ್ನು ತೆಗೆದುಹಾಕಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ. ಹಫೀಜ್‌ ಪರ ಲಾಹೋರ್‌ ಮೂಲದ ಮಿರ್ಜಾ ಆ್ಯಂಡ್‌ ಮಿರ್ಜಾ ಲಾ ಅಸೋಸಿಯೇಟ್ಸ್‌ ಎಂಬ ಸಂಸ್ಥೆ ಯು ಈ ಮನವಿಯನ್ನು ಸಲ್ಲಿಸಿದೆ. ಈಗಾಗಲೇ ಜಾಗತಿಕ ಉಗ್ರ ಎಂದು ಕರೆಸಿಕೊಂಡಿರುವ ಹಫೀಜ್‌ ತಲೆಗೆ ಅಮೆರಿಕವು 10 ದಶಲಕ್ಷ ಡಾಲರ್‌ ಬಹುಮಾನವನ್ನೂ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next