Advertisement

ಕೇರಳ: ಬಿಜೆಪಿಗೆ ಮೂರೇ ವೋಟು!

11:42 PM Aug 13, 2021 | Team Udayavani |

ತಿರುವನಂತಪುರ: ಕೇರಳದ ಕೊಟ್ಟಾಯಂ ಜಿಲ್ಲೆಯ ವಾರ್ಡ್‌ ಒಂದಕ್ಕೆ ಇತ್ತೀಚೆಗೆ ಉಪಚುನಾವಣೆ ನಡೆದಿದ್ದು, ಅದರಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ 3 ಮತ ಪಡೆದಿದ್ದಾರೆ.

Advertisement

ಈ ಹಿಂದೆ ಕೊಟ್ಟಾಯಂನ ಎಲಿಕುಲಂ ಗ್ರಾಮ ಪಂಚಾಯತ್‌ ಎಲಮಗುಲಂ ವಾರ್ಡ್‌ನಲ್ಲಿ ಎರಡೇ ಮತ ಪಡೆದಿದ್ದೆವು ಎಂದು ಪಕ್ಷ ಹೇಳಿಕೊಂಡಿದೆ. ಕ್ಷೇತ್ರದಲ್ಲಿ 2020ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಗೆದ್ದಿದ್ದ ಕಾಂಗ್ರೆಸ್‌ ಅಭ್ಯರ್ಥಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆಸಲಾಗಿತ್ತು. ಇದರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ 512 ಮತ ಪಡೆದು ಗೆದ್ದಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಎಡ ಪಕ್ಷವು 353 ಮತ ಪಡದಿದೆ. ಬಿಜೆಪಿ ಅಭ್ಯರ್ಥಿ ಜಯಪ್ರಕಾಶ್‌ಗೆ 3 ಮತ ಸಿಕ್ಕಿದೆ. ಜಯಪ್ರಕಾಶ್‌ ಆ ಕ್ಷೇತ್ರದ ನಿವಾಸಿ ಅಲ್ಲವಾದ ಕಾರಣ ಅವರು ಮತದಾನ ಮಾಡಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next