Advertisement

ಉಗ್ರರಿಂದ 200 ಮಂದಿಯ ಹಿಟ್‌ ಲಿಸ್ಟ್‌!

09:47 PM Oct 16, 2021 | Team Udayavani |

ನವದೆಹಲಿ: ಪಾಕಿಸ್ತಾನದಲ್ಲಿರುವ ಉಗ್ರವಾದಿ ಸಂಘಟನೆಗಳು ಹೊಸತಾದ, ಇನ್ನೂ ಹೆಸರಿಡದ ಹೊಸ ಸಂಘಟನೆಯೊಂದನ್ನು ಹುಟ್ಟುಹಾಕಿದ್ದು, ಜಮ್ಮು ಕಾಶ್ಮೀರದಲ್ಲಿ ಮುಂದೆ ನಡೆಯಬಹುದಾದ ಎಲ್ಲಾ ವಿಧ್ವಂಸಕ ಕೃತ್ಯಗಳ ಹೊಣೆಯನ್ನು ಇದೇ ಸಂಘಟನೆಗೆ ನೀಡಲಾಗಿದೆ ಎಂಬ ಮಹತ್ವದ ವಿಚಾರವನ್ನು ಭಾರತೀಯ ಗುಪ್ತಚರ ಇಲಾಖೆ ಕಲೆಹಾಕಿದೆ.

Advertisement

ಇವರಿಂದ ಮುಂದೆ, ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಭದ್ರತಾ ಪಡೆಗಳು, ಸರ್ಕಾರಿ ಸಿಬ್ಬಂದಿ ಹಾಗೂ ಸರ್ಕಾರಕ್ಕೆ ಆಪ್ತರಾದವರು, ಮಾಹಿತಿದಾರರು, ಕಾಶ್ಮೀರಿ ಪಂಡಿತರು, ಆಡಳಿರೂಢ ಪಕ್ಷದ ನಾಯಕರು, ಕೈಗಾರಿಕೋದ್ಯಮಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ಗುರಿಯಾಗಿಸಿ ದಾಳಿಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಇದರ ಜೊತೆಗೆ, ಜಮ್ಮು ಕಾಶ್ಮೀರದ ಸುಮಾರು 200 ವ್ಯಕ್ತಿಗಳ ಮಾಹಿತಿ ಹಾಗೂ ಅವರ ವಾಹನಗಳ ಸಂಖ್ಯೆಗಳುಳ್ಳ ಹಿಟ್‌ ಲಿಸ್ಟ್‌ ಅನ್ನು ಐಎಸ್‌ಐ ಬೆಂಬಲಿತ ಕೆಲವು ಉಗ್ರ ಸಂಘಟನೆಗಳು ತಯಾರಿಸಿವೆ ಎನ್ನಲಾಗಿದೆ.

ಇದನ್ನೂ ಓದಿ:ಮುಂಗಾರಿನಲ್ಲಿ ಮಳೆ ಅಬ್ಬರ ಜೋರಾಗಿದ್ದರೂ ವಾಡಿಕೆಗಿಂತ ಶೇ.8ರಷ್ಟು ಕಡಿಮೆ ಮಳೆ

ಹೊಸ ಸಂಘಟನೆ ಏಕೆ?:
ಕಳೆದ ತಿಂಗಳ 21ರಂದು ಪಾಕಿಸ್ತಾನದ ಗುಪ್ತಚರ ಇಲಾಖೆಯ ಅಧಿಕಾರಿಗಳು ಹಾಗೂ ಅಲ್ಲಿರುವ ಪ್ರಮುಖ ಉಗ್ರ ಸಂಘಟನೆಗಳ ಮುಖಂಡರ ನಡುವೆ ಪಾಕ್‌ ಆಕ್ರಮಿತ ಕಾಶ್ಮೀರ ಮುಜಫ‌ರಾಬಾದ್‌ನಲ್ಲಿ ರಹಸ್ಯ ಸಭೆ ನಡೆದಿತ್ತು. ಅದರಲ್ಲಿ ಜಮ್ಮು ಕಾಶ್ಮೀರದಲ್ಲಿ ಹೆಚ್ಚು ನಾಗರಿಕರ ಹತ್ಯೆಗಳನ್ನು ನಡೆಸಬೇಕು. ಈ ದಾಳಿಗಳನ್ನು ಭಾರತೀಯ ಭದ್ರತಾ ಪಡೆಗಳ ನಿಗಾದಲ್ಲಿ ಇರದ ಉಗ್ರವಾದಿಗಳಿಂದಲೇ ನಡೆಸಬೇಕು ಎಂದು ತೀರ್ಮಾಸಲಾಗಿತ್ತು. ಅದರ ಭಾಗವಾಗಿಯೇ ಹೊಸ ಸಂಘಟನೆಯನ್ನು ಹುಟ್ಟುಹಾಕಿರಬಹುದೇ ಎಂಬ ಗುಮಾನಿ ಎದ್ದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next