Advertisement
ಇಬ್ಬರೂ ಭಾರತ ತಂಡದೊಂದಿಗೆ ಮಂಗಳವಾರ ಸುದೀರ್ಘ ಅಭ್ಯಾಸ ನಡೆಸಿದರು. ಜುರೆಲ್ ಗಲ್ಲಿ ವಿಭಾಗ ದಲ್ಲಿ, ಸರ್ಫ್‌ರಾಜ್ ಮೊದಲ ಸ್ಲಿಪ್‌ನಲ್ಲಿ ಫೀಲ್ಡಿಂಗ್ ನಡೆಸಿದ್ದು ಕಂಡುಬಂತು. ಅಬುಧಾಬಿಯಿಂದ ಆಗಮಿಸಿದ ಇಂಗ್ಲೆಂಡ್ ಕ್ರಿಕೆಟಿಗರೂ ಮೊದಲ ಸುತ್ತಿನ ಅಭ್ಯಾಸ ನಡೆಸಿದರು.
ವಿಶಾಖಪಟ್ಟಣದಲ್ಲಿ ಶತಕ ಬಾರಿ ಸಿದ ಶುಭಮನ್ ಗಿಲ್ ಅಭ್ಯಾಸಕ್ಕೆ ಇಳಿಯಲಿಲ್ಲ. ದ್ವಿತೀಯ ಪಂದ್ಯದಲ್ಲಿ ಕ್ಷೇತ್ರರಕ್ಷಣೆ ನಡೆಸುತ್ತಿದ್ದಾಗ ಗಿಲ್ ಅವರ ಬಲಗೈ ತೋರುಬೆರಳಿಗೆ ಗಾಯವಾ ಗಿತ್ತು. ಹೀಗಾಗಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಫೀಲ್ಡಿಂಗ್‌ಗೆ ಇಳಿದಿರಲಿಲ್ಲ. ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟಿರುವುದರಿಂದ ಹಾಗೂ ಕೆ.ಎಲ್. ರಾಹುಲ್ ತಂಡದಿಂದ ಬೇರ್ಪಟ್ಟ ಕಾರಣ ಸರ್ಫ್‌ರಾಜ್ ಖಾನ್ ಅವರ ಹಾದಿ ಸುಗಮಗೊಂಡಿದೆ. ಅವರ ಸುದೀರ್ಘ ಕಾಯುವಿಕೆಗೊಂದು ಅಂತ್ಯ ಲಭಿಸಲಿದೆ. ಹಾಗೆಯೇ ಕೀಪರ್ ಕೆ.ಎಸ್. ಭರತ್ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಕೂಡ ದಟ್ಟವಾಗಿದೆ. ಸತತ 7 ಟೆಸ್ಟ್‌ಗಳಲ್ಲಿ ಇವರಿಂದ ಒಂದೂ ಅರ್ಧ ಶತಕ ಬಾರಿಸಲು ಸಾಧ್ಯವಾಗಿಲ್ಲ. ಕೀಪಿಂಗ್ ಕೂಡ ಗಮನಾರ್ಹ ಮಟ್ಟದಲಿಲ್ಲ. ಹೀಗಾಗಿ ಧ್ರುವ ಜುರೆಲ್‌ಗೆ ಟೆಸ್ಟ್ ತಂಡದ ಬಾಗಿಲು ತೆರೆಯುವ ಎಲ್ಲ ಸಾಧ್ಯತೆ ಇದೆ.
Related Articles
ಗಾಯಾಳಾಗಿದ್ದ ರವೀಂದ್ರ ಜಡೇಜ ಚೇತರಿಸಿಕೊಂಡಿದ್ದು, ಮಂಗಳವಾರ ಅಭ್ಯಾಸ ನಡೆಸಿದರು. ಹೀಗಾಗಿ ಈ ಸವ್ಯಸಾಚಿ ತವರಿನ ಟೆಸ್ಟ್ ಆಡುವುದು ಬಹುತೇಕ ಖಾತ್ರಿಯಾಗಿದೆ. ಇಲ್ಲವಾ ದರೆ ಈ ಸ್ಥಾನ ಅಕ್ಷರ್ ಪಟೇಲ್ ಪಾಲಾಗಲಿದೆ.
Advertisement
ವಿಶಾಖಪಟ್ಟಣದಲ್ಲಿ ಟೆಸ್ಟ್ ಪದಾ ರ್ಪಣೆ ಮಾಡಿದ ರಜತ್ ಪಾಟಿದಾರ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲವಾದರೂ ತಂಡದಿಂದ ಬೇರ್ಪಡುವ ಸಾಧ್ಯತೆ ಇಲ್ಲ. ಇವರಿಗೆ ಇನ್ನೊಂದು ಅವಕಾಶ ನೀಡುವ ಯೋಜನೆ ಆಡಳಿತ ಮಂಡಳಿ ಯದ್ದು. ಹೀಗಾಗಿ ರಾಹುಲ್ ಸ್ಥಾನಕ್ಕೆ ಬಂದ ಕರ್ನಾಟಕದ ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ಟೆಸ್ಟ್‌ಕ್ಯಾಪ್ ಧರಿಸುವ ಸಾಧ್ಯತೆ ತೀರಾ ಕಡಿಮೆ.
ರೋಹಿತ್, ಜೈಸ್ವಾಲ್, ಗಿಲ್, ಪಾಟಿದಾರ್, ಸರ್ಫ್‌ರಾಜ್, ಜಡೇಜ, ಜುರೆಲ್… ಹೀಗೆ ಭಾರತದ ಬ್ಯಾಟಿಂಗ್ ಲೈನ್‌ಅಪ್ ಗೋಚರಿಸುವ ಸಾಧ್ಯತೆ ಇದೆ. ಬೌಲಿಂಗ್ ವಿಭಾಗದಲ್ಲಿ ಅಶ್ವಿನ್, ಬುಮ್ರಾ, ಕುಲದೀಪ್ ಜತೆಗೆ ಸಿರಾಜ್ ಮರಳುವ ಸಾಧ್ಯತೆ ಇದೆ.
ಜಸ್‌ಪ್ರೀತ್ ಬುಮ್ರಾ, ದೇವದತ್ತ ಪಡಿಕ್ಕಲ್ ಮತ್ತು ಆಕಾಶ್ ದೀಪ್ ಮಂಗಳವಾರ ಸಂಜೆ ತಂಡವನ್ನು ಕೂಡಿಕೊಂಡರು.