Advertisement

400 ವರ್ಷಗಳ ಬಳಿಕ ಇಂದು ಗುರು-ಶನಿ ಗ್ರಹ ಅತೀ ಸಮೀಪ

01:24 AM Dec 21, 2020 | mahesh |

ನ್ಯೂಯಾರ್ಕ್‌: 2020ರ ಡಿಸೆಂಬರ್‌, ಬಾಹ್ಯಾಕಾಶದ ಹಲವು ವಿಸ್ಮಯಗಳಿಗೆ ಸಾಕ್ಷಿಯಾಗಿದೆ. ಜೆಮಿನಿಡ್ಸ್‌ ಉಲ್ಕಾಪಾತ, ಸಂಪೂರ್ಣ ಸೂರ್ಯಗ್ರಹಣ… ಇದರ ಬೆನ್ನಲ್ಲೇ ಸೋಮವಾರದಂದು ಸೌರವ್ಯೂಹದ 2 ದೈತ್ಯ ಗ್ರಹಗಳಾದ ಗುರು ಮತ್ತು ಶನಿ ಅತೀ ಹತ್ತಿರದಲ್ಲಿ ಹಾದುಹೋಗಲಿವೆ!

Advertisement

ಗುರು- ಶನಿಯ “ಮಹಾ ಸಂಯೋಗ’ ಇದಾಗಿದ್ದು, ನಾಸಾ ಇದನ್ನು ಈ ವರ್ಷದ “ಕ್ರಿಸ್ಮಸ್‌ ಸ್ಟಾರ್‌’ಗೆ ಹೋಲಿಸಿದೆ. ಖಗೋಳ ವಿಜ್ಞಾನದ ಈ ವಿದ್ಯಮಾನ ಸುಮಾರು 400 ವರ್ಷಗಳ ಅನಂತರ ಘಟಿಸುತ್ತಿದೆ. 1623ರಲ್ಲಿ ಗುರು- ಶನಿ ಗ್ರಹಗಳ ಮಹಾ ಸಂಯೋಗ ನಡೆದಿತ್ತು.

ಅದರಲ್ಲೂ ಚಳಿಗಾಲ ಋತುವಿನ ಅತ್ಯಂತ ದೀರ್ಘ‌ ದಿನ ಡಿ.21ರಂದೇ ಈ ಅಪರೂಪದ ವಿದ್ಯಮಾನ ಘಟಿಸುತ್ತಿರುವುದು ವಿಜ್ಞಾನಿಗಳ ಕುತೂಹಲ ನೂರ್ಮ ಡಿಗೊಳಿಸಿದೆ. ಈ ವರ್ಷ ಮಹಾ ಸಂಯೋಗ ವೀಕ್ಷಣೆ ತಪ್ಪಿಸಿಕೊಂಡರೆ, ಮತ್ತೆ ಇದರ ವೀಕ್ಷಣೆಗೆ 60 ವರ್ಷ ಕಾಯಬೇಕು. 2080ರಲ್ಲಿ ಮತ್ತೆ ಗುರು- ಶನಿ ಅತ್ಯಂತ ಸಮೀಪದಲ್ಲಿ ಗೋಚರಿಸಲಿವೆ.

ವಿಜ್ಞಾನಿಗಳಿಗೇಕೆ ಕುತೂಹಲ?
1623ರಲ್ಲಿ ಗುರು- ಶನಿ ಮಹಾ ಸಂಯೋಗ ವಾಗಿ ಕೇವಲ 13 ವರ್ಷದಲ್ಲಿ ವಿಜ್ಞಾನಿ ಗೆಲಿ ಲಿಯೊ ಗೆಲಿಲಿ ಮೊತ್ತಮೊದಲ ದೂರದರ್ಶಕ ಕಂಡುಹಿಡಿದಿದ್ದರು. ಗುರುವಿನ ಕಕ್ಷೆಯಲ್ಲಿ ಸುತ್ತುವ 4 ಉಪಗ್ರಹ, ಶನಿಯ ಉಂಗುರ, ಸೂರ್ಯನ ಕಲೆಗಳನ್ನು ಆ ವೇಳೆ ಗುರುತಿಸಿ ದ್ದರು. ಪ್ರಸ್ತುತ, ಗುರು- ಶನಿ ವಾತಾವರಣಗಳ ಇನ್ನಷ್ಟು ರಹಸ್ಯಗಳನ್ನು ಬೆಳಕಿಗೆ ತರಲು “ಮಹಾ ಸಂಯೋಗ’ ಕಾರಣವಾಗಲಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next