Advertisement

ಕುಸ್ತಿ: ಮಾನ್ಸಿ, ನವೀನ್‌ಗೆ ಬೆಳ್ಳಿ

10:40 AM Jul 22, 2018 | Team Udayavani |

ಹೊಸದಿಲ್ಲಿ: ಏಶ್ಯನ್‌ ಕಿರಿಯರ ಕುಸ್ತಿ ಕೂಟದಲ್ಲಿ ನವೀನ್‌ ಮತ್ತು ಮಾನ್ಸಿ ಅಹ್ಲಾವತ್‌ ಬೆಳ್ಳಿ ಪದಕ ಗೆದ್ದಿದ್ದಾರೆ. ಮಾನ್ಸಿ ವನಿತಾ 57 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಜಪಾನಿನ ಅಕೆಯ್‌ ಹೆನಾಯ್‌ ವಿರುದ್ಧ 10-0 ಅಂತರದ ಆಘಾತಕಾರಿ ಸೋಲುಂಡರು. ನವೀನ್‌ 57 ಕೆ.ಜಿ. ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಉಜ್ಬೆಕಿಸ್ಥಾನದ ಗುಲೊಮೊನ್‌ ಅಬ್ದುಲ್ಲಾ ವಿರುದ್ಧ ಸೋತರು.

Advertisement

“10-0 ಅಂತರದಿಂದ ಸೋಲುತ್ತೇನೆ ಎಂದು ಕನಸಿನಲ್ಲೂ ಅಂದು ಕೊಂಡಿರಲಿಲ್ಲ. ನನ್ನ ತಂದೆ ಹಾಗೂ ಕೋಚ್‌ ನಾನು ಚಿನ್ನ ಗೆಲ್ಲುವ ಭರವಸೆ ಇಟ್ಟುಕೊಂಡಿದ್ದೆ. ಆದರೆ ಫೈನಲ್‌ನಲ್ಲಿ ಭಾರೀ ಆಘಾತ ಎದುರಾಯಿತು’ ಎಂದು ಮಾನ್ಸಿ ಪಂದ್ಯದ ಬಳಿಕ ಬೇಸರ ವ್ಯಕ್ತಪಡಿಸಿದ್ದಾರೆ. 70 ಕೆ.ಜಿ. ವಿಭಾಗದಲ್ಲಿ ವಿಶಾಲ್‌  ಕಂಚಿನ ಪದಕ ಗೆದ್ದರು.

Advertisement

Udayavani is now on Telegram. Click here to join our channel and stay updated with the latest news.

Next