Advertisement

ಜೂನಿಯರ್‌ ವರ್ಲ್ಡ್ ಶೂಟಿಂಗ್‌: ಭಾರತದ ಟ್ರ್ಯಾಪ್‌ ತಂಡಕ್ಕೆ ಬೆಳ್ಳಿ

12:28 AM Jul 24, 2023 | Team Udayavani |

ಹೊಸದಿಲ್ಲಿ: ಕೊರಿಯಾದ ಚಾಂಗ್ವೊನ್‌ನಲ್ಲಿ ನಡೆ ಯು ತ್ತಿರುವ ಐಎಸ್‌ಎಸ್‌ಎಫ್ ವರ್ಲ್ಡ್ ಜೂನಿಯರ್‌ ಶೂಟಿಂಗ್‌ ಚಾಂಪಿ ಯನ್‌ಶಿಪ್‌ನ ಪುರುಷರ ಟ್ರ್ಯಾಪ್‌ ವಿಭಾಗದಲ್ಲಿ ಭಾರತ ಬೆಳ್ಳಿ ಪದಕ ಜಯಿಸಿದೆ. ಇದು ಈ ಕೂಟ ದಲ್ಲಿ ಭಾರತಕ್ಕೆ ಒಲಿದ 15ನೇ ಪದಕವಾಗಿದೆ.

Advertisement

ಬಿ. ಮಾಲೆಕ್‌, ಶಾರ್ದೂಲ್‌ ವಿಹಾನ್‌ ಮತ್ತು ಆರ್ಯವಂಶ್‌ ತ್ಯಾಗಿ ಅವರ ನ್ನೊಳಗೊಂಡ ಭಾರತದ ಟ್ರ್ಯಾಪ್‌ ತಂಡ ಫೈನಲ್‌ನಲ್ಲಿ ಇಟಲಿ ವಿರುದ್ಧ ಹಿನ್ನಡೆ ಕಂಡಿತು. 356-346 ಅಂತರದಿಂದ ಪರಾಭವಗೊಂಡಿತು. ಭಾರತದ ಟ್ರ್ಯಾಪ್‌ ಶೂಟರ್ ವಿಶ್ವ ಜೂನಿಯರ್‌ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ ತಲುಪಿದ ಮೊದಲ ನಿದರ್ಶನ ಇದಾಗಿದೆ.

ವನಿತಾ ಟ್ರ್ಯಾಪ್‌ ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಅಶಿಮಾ ಅಹ್ಲಾವತ್‌ 6ನೇ ಸ್ಥಾನದೊಂದಿಗೆ ಫೈನಲ್‌ ತಲುಪಿದರೂ ಇಲ್ಲಿಯೂ 6ನೇ ಸ್ಥಾನಕ್ಕೇ ತೃಪ್ತಿಪಟ್ಟರು. ವನಿತಾ ಟ್ರ್ಯಾಪ್‌ ತಂಡ ಸ್ಪರ್ಧೆಯಲ್ಲಿ ಪ್ರೀತಿ, ಭವ್ಯಾ, ಆದ್ಯಾ ತ್ರಿಪಾಠಿ ಅವರನ್ನೊಳಗೊಂಡ ಭಾರತ ತಂಡ ಕಂಚಿನ ಪದಕ ಗೆಲ್ಲಲು ವಿಫ‌ಲವಾಯಿತು. ಇದು ಚೀನಕ್ಕೆ ಒಲಿಯಿತು (314 ಅಂಕ). ಭಾರತ 312 ಅಂಕ ಗಳಿಸಿತು. ಯುಎಸ್‌ಎಗೆ ಚಿನ್ನ, ಇಟಲಿಗೆ ಬೆಳ್ಳಿ ಲಭಿಸಿತು.

Advertisement

Udayavani is now on Telegram. Click here to join our channel and stay updated with the latest news.

Next