Advertisement
ಖುಷಿ ಅವರ ಈ ಪದಕದಿಂದಾಗಿ ಭಾರತದ ಪದಕಗಳ ಸಂಖ್ಯೆ 15ಕ್ಕೇರಿದೆ. ಇದರಲ್ಲಿ 10 ಚಿನ್ನ, ಒಂದು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕ ಸೇರಿದ್ದು ಪದಕಪಟ್ಟಿದಲ್ಲಿ ಅಗ್ರಸ್ಥಾನದಲ್ಲಿದೆ.
ಖುಷಿ ಅವರ ಪದಕ ಗೆಲ್ಲುವ ದಾರಿ ಸುಲಭವಾಗಿರಲಿಲ್ಲ. ಅರ್ಹತಾ ಸುತ್ತಿನಲ್ಲಿ ಖುಷಿ ಜತೆ ಇತರ ನಾಲ್ವರು ತಲಾ 585 ಅಂಕ ಗಳಿಸಿದ್ದರು. ಆಬಳಿಕ ಇನ್ನೆರಡು ಅರ್ಹತಾ ಪ್ರಯತ್ನದಲ್ಲಿ ಖುಷಿ ಮತ್ತು ಇಟೆಲಿಯ ಅನ್ನಾ ಶಿಯಾವೋನ್ ತಲಾ 29 ಅಂಕ ಪಡೆದರು. ಆಬಳಿಕದ ಪ್ರಯತ್ನದಲ್ಲಿ ಅನ್ನಾ ಅವರನ್ನು ಹಿಂದಿಕ್ಕಿದ ಖುಷಿ ಫೈನಲಿಗೇರಿದರು. ಫೈನಲ್‌ನಲ್ಲಿಯೂ ಅವರು ಇತರ ಸ್ಪರ್ಧಿಗಳೊಂದಿಗೆ ತೀವ್ರ ಹೋರಾಡಿ ಕಂಚಿನ ಪದಕ ಗೆಲ್ಲಲು ಯಶಸ್ವಿಯಾದರು.