Advertisement

Junior World Cup of Hockey:ಜರ್ಮನಿಯೆದುರು ಭಾರತಕ್ಕೆ ಸೋಲು

12:18 AM Dec 15, 2023 | Team Udayavani |

ಕೌಲಾಲಂಪುರ: ಪೆನಾಲ್ಟಿ ಕಾರ್ನರ್‌ ಅವಕಾಶ ದಲ್ಲಿ ಭಾರತದ ಕಳಪೆ ನಿರ್ವಹಣೆ ಮುಂದುವರಿದಿದೆ. ಇದರಿಂದಾಗಿ ಭಾರತ ತಂಡವು ಗುರುವಾರ ನಡೆದ ಜೂನಿಯರ್‌ ವಿಶ್ವಕಪ್‌ ಹಾಕಿ ಕೂಟದ ಸೆಮಿಫೈನಲ್‌ ಪಂದ್ಯದಲ್ಲಿ ಬಲಿಷ್ಠ ಜರ್ಮನಿ ವಿರುದ್ಧ 1-4 ಗೋಲುಗಳಿಂದ ಸೋಲನ್ನು ಕಂಡಿದೆ.

Advertisement

ಆರು ಬಾರಿಯ ಚಾಂಪಿಯನ್‌ ಜರ್ಮನಿ ಈ ಪಂದ್ಯದಲ್ಲಿ ಕೇವಲ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶ ಪಡೆ ದಿತ್ತು. ಎರಡೂ ಬಾರಿಯೂ ಗೋಲು ದಾಖಲಿಸಿದ್ದ ಜರ್ಮನಿ ಒಟ್ಟಾರೆ 4-1 ಗೋಲುಗಳಿಂದ ಜಯಭೇರಿ ಬಾರಿಸಿದೆ. ಆಕ್ರಮಣಕಾರಿ ಆಟದ ಪ್ರದರ್ಶನ ನೀಡಿದ ಭಾರತ ಅಮೋಘವಾಗಿ ಹೋರಾಡಿತು.

12 ಪೆನಾಲ್ಟಿ ಕಾರ್ನರ್‌ ಅವಕಾಶ ಪಡೆದರೂ ಒಮ್ಮೆಯೂ ಗೋಲು ಹೊಡೆ ಯಲು ಭಾರತಕ್ಕೆ ಸಾಧ್ಯವಾಗಲೇ ಇಲ್ಲ. ಇದರಿಂದ ಭಾರತ ಸೋತು ನಿರಾಶೆಗೆ ಒಳಗಾಯಿತು. ವಿಶ್ವಕಪ್‌ನಂತಹ ಕೂಟದಲ್ಲಿಯೂ ಭಾರತೀಯ ಆಟ ಗಾರರು ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು ದಾಖಲಿಸಲು ವಿಫ‌ಲವಾಗುತ್ತಿರುವುದು ಗಂಭೀರವಾದ ವಿಷಯವಾಗಿದೆ.

ಈ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು ದಾಖಲಿಸುವ ನಿಟ್ಟಿನಲ್ಲಿ ಭಾರತೀಯರು ಕಠಿನ ಪ್ರಯತ್ನ ನಡೆಸಬೇಕಾದ ಅಗತ್ಯವಿದೆ. ಜರ್ಮನಿ ತಂಡವು ಫೈನಲ್‌ನಲ್ಲಿ ಫ್ರಾನ್ಸ್‌ ಅಥವಾ ಸ್ಪೇನ್‌ ತಂಡವನ್ನು ಎದುರಿಸಲಿದೆ. ಭಾರತ ಇನ್ನು ಕಂಚಿನ ಪದಕಕ್ಕಾಗಿ ಶನಿವಾರ ಹೋರಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next