Advertisement
ಈ ವರೆಗಿನ 12 ವಿಶ್ವಕಪ್ ಕೂಟಗಳಲ್ಲಿ ಅತ್ಯಧಿಕ 4 ಸಲ ಚಾಂಪಿಯನ್ ಆದ ಹೆಗ್ಗಳಿಕೆ ಭಾರತದ್ದು. 2000, 2008, 2012 ಮತ್ತು 2018ರಲ್ಲಿ ಭಾರತದ ಕಿರಿಯರ ಪಡೆ ಕಿರೀಟ ಏರಿಸಿಕೊಂಡು ಮೆರೆದಿತ್ತು. ಮೊಹಮ್ಮದ್ ಕೈಫ್, ವಿರಾಟ್ ಕೊಹ್ಲಿ, ಉನ್ಮುಕ್¤ ಚಂದ್ ಮತ್ತು ಪೃಥ್ವಿ ಶಾ ವಿಶ್ವವಿಜೇತ ಭಾರತದ ನಾಯಕರೆಂಬ ಹೆಗ್ಗಳಿಕೆ ಹೊಂದಿದ್ದಾರೆ.
ಈ ಬಾರಿ ಉತ್ತರಪ್ರದೇಶದ ಬ್ಯಾಟ್ಸ್‌ಮನ್ ಪ್ರಿಯಂ ಗರ್ಗ್ ಸಾರಥ್ಯದಲ್ಲಿ ಭಾರತ ಅದೃಷ್ಟಪರೀಕ್ಷೆಗೆ ಇಳಿಯಲಿದೆ. ನ್ಯೂಜಿಲ್ಯಾಂಡ್, ಶ್ರೀಲಂಕಾ ಮತ್ತು ಜಪಾನ್ ತಂಡಗಳೊಂದಿಗೆ “ಎ’ ವಿಭಾಗದಲ್ಲಿರುವ ಭಾರತ, ಜ. 19ರಂದು ಶ್ರೀಲಂಕಾ ವಿರುದ್ಧ ತನ್ನ ಮೊದಲ ಲೀಗ್ ಪಂದ್ಯವಾಡಲಿದೆ. ಸಾಕಷ್ಟು ಮುಂಚಿತವಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳಿರುವ ಭಾರತ, ಅಭ್ಯಾಸ ಪಂದ್ಯ ಹಾಗೂ ಚತುಷೊRàನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿತ್ತು. ಹೀಗಾಗಿ ಪ್ರಿಯಂ ಗರ್ಗ್ ಪಡೆಯ ಮೇಲೆ ಎಲ್ಲರೂ ಭಾರೀ ವಿಶ್ವಾಸ ಇರಿಸಿದ್ದಾರೆ.
ಬ್ಯಾಟಿಂಗ್‌ನಲ್ಲಿ ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ಧ್ರುವ ಜುರೆಲ್, ದಿವ್ಯಾಂಶ್ ಸಕ್ಸೇನಾ ಅವರೆಲ್ಲ ತಂಡದ ಆಧಾರಸ್ತಂಭಗಳಾಗಿದ್ದಾರೆ.
Related Articles
ಬೌಲಿಂಗ್‌ನಲ್ಲಿ ಭಾರತ ಘಾತಕವಾಗಿ ಪರಿಣಮಿಸುವ ಎಲ್ಲ ಸಾಧ್ಯತೆ ಇದೆ. ಉಡುಪಿ ಮೂಲದ ಎಡಗೈ ಸ್ಪಿನ್ನರ್ ಶುಭಾಂಗ್ ಹೆಗ್ಡೆ, ರಾಯಚೂರಿನ ಮಧ್ಯಮ ವೇಗಿ ವಿದ್ಯಾಧರ ಪಾಟೀಲ್, ಮುಂಬಯಿಯ ಲೆಗ್‌ಸ್ಪಿನ್ನರ್ ಅಥರ್ವ ಅಂಕೋಲೆಕರ್ ಅವರೆಲ್ಲ ಆಫ್ರಿಕಾ ಟ್ರ್ಯಾಕ್‌ಗಳಲ್ಲಿ ಮ್ಯಾಜಿಕ್ ಮಾಡುವ
ನಿರೀಕ್ಷೆ ಇದೆ.
Advertisement
ಕೂಟದ ಮಾದರಿಇದು ಗ್ರೂಪ್ ಮಾದರಿಯ ಪಂದ್ಯಾವಳಿ. 16 ತಂಡಗಳನ್ನು 4 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತೀ ಗುಂಪಿನಲ್ಲಿ ಅಗ್ರಸ್ಥಾನ ಪಡೆದ 2 ತಂಡಗಳು ಸೂಪರ್ ಲೀಗ್‌ನಲ್ಲಿ ಆಡುತ್ತವೆ. ಕೊನೆಯ ತಂಡಗಳೆರಡು ಪ್ಲೇಟ್ ವಿಭಾಗದಲ್ಲಿ ಸ್ಪರ್ಧಿಸುತ್ತವೆ. ಬಳಿಕ ಎರಡೂ ವಿಭಾಗಗಳಲ್ಲಿ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಹಾಗೂ ಫೈನಲ್ ಹಣಾಹಣಿ ನಡೆಯಲಿದೆ.