Advertisement

ಜೂನ್‌ ತಿಂಗಳ ಪಡಿತರ ಬಿಡುಗಡೆ

08:15 AM Jun 13, 2020 | Suhan S |

ಶಿವಮೊಗ್ಗ: ನಗರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರಾಜ್ಯ ಸರ್ಕಾರದ ಪಡಿತರ ಧಾನ್ಯ ಹಂಚಿಕೆ ಹಾಗೂ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆಯಡಿ ಜೂನ್‌ -2020ರ ಪಡಿತರ ಧಾನ್ಯವನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಿ ಬಿಡುಗಡೆ ಮಾಡಿದೆ.

Advertisement

ಅಂತ್ಯೋದಯ ಪಡಿತರ ಚೀಟಿದಾರರ ಕುಟುಂಬಕ್ಕೆ ಎನ್‌ಎಫ್‌ಎಸ್‌ಎ ಯೋಜನೆಯಡಿ ಪ್ರತಿ ಕುಟುಂಬಕ್ಕೆ 35 ಕೆ.ಜಿ. ಅಕ್ಕಿ ಹಾಗೂ ಕುಟುಂಬದ ಪ್ರತಿ ಸದಸ್ಯರಿಗೆ ಪಿಎಂಜಿಕೆಎವೈ ಯೋಜನೆಯಡಿ 5 ಕೆ.ಜಿ. ಅಕ್ಕಿ ಹಾಗೂ 2 ಕೆ.ಜಿ. ತೊಗರಿಬೇಳೆ ನೀಡಲು ನಿಗದಿಪಡಿಸಲಾಗಿದೆ. ಆದ್ಯತಾ ಕುಟುಂಬ (ಪಿಎಚ್‌ಎಚ್‌) ಪಡಿತರ ಚೀಟಿಯಲ್ಲಿನ ಪ್ರತಿ ಸದಸ್ಯರಿಗೆ ಎನ್‌ಎಫ್‌ಎಸ್‌ಎ ಹಂಚಿಕೆ 5 ಕೆ.ಜಿ.ಅಕ್ಕಿ ಮತ್ತು ಪಿಎಂಜಿಕೆಎವೈ ಯೋಜನೆಯಡಿ ಕುಟುಂಬದ ಪ್ರತಿ ಸದಸ್ಯರಿಗೆ 5 ಕೆ.ಜಿ.ಅಕ್ಕಿ ಒಟ್ಟು 10 ಕೆಜಿ ಅಕ್ಕಿ ಹಾಗೂ ಪ್ರತಿ ಕುಟುಂಬಕ್ಕೆ 2 ಕೆ.ಜಿ. ತೊಗರಿಬೇಳೆಯನ್ನು ಉಚಿತವಾಗಿ ನೀಡಲಾಗುವುದು. ಆದ್ಯತೇತರ (ಎನ್‌ಪಿಹೆಚ್‌ಹೆಚ್‌) ಪಡಿತರ ಚೀಟಿದಾರರಿಗೆ ಏಕ ಸದಸ್ಯರಿಗೆ ರೂ. 15/- ದರದಲ್ಲಿ 5 ಕೆ.ಜಿ., 2 ಮತ್ತು ಹೆಚ್ಚಿನ ಕುಟುಂಬದ ಸದಸ್ಯರಿಗೆ 10 ಕೆ.ಜಿ. ಅಕ್ಕಿಯನ್ನು ವಿತರಿಸಲಾಗುವುದು.

ಕೆಲವು ಪಡಿತರ ಚೀಟಿದಾರರು ಪಡೆದ ಪಡಿತರವನ್ನು ದಿನಸಿ ಅಂಗಡಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ದೂರುಗಳು ಬಂದಿದ್ದು, ಸರಕಾರ ವಿತರಿಸಿದ ಉಚಿತ ಅಕ್ಕಿ ಮಾರಾಟ ಮಾಡುವುದು ಹಾಗೂ ಪಡಿತರ ಚೀಟಿದಾರರಿಂದ ಅಕ್ಕಿ ಖರೀದಿಸುವುದು ಅಪರಾಧವಾಗಿದೆ. ಇದಕ್ಕೆ ಸಂಬಂಧಿಸಿ ಪಡಿತರ ಚೀಟಿ ರದ್ದುಪಡಿಸುವುದಲ್ಲದೇ ಕರ್ನಾಟಕ ಅಗತ್ಯ ವಸ್ತುಗಳ ಕಾಯ್ದೆ 1855 ರನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪಡಿತರ ಅಕ್ಕಿ ಮಾರಾಟ ಹಾಗೂ ಖರೀದಿ ಕಂಡುಬಂದಲ್ಲಿ ಸಾರ್ವಜನಿಕರು ಕಚೇರಿಯ ಗಮನಕ್ಕೆ ತರುವಂತೆ ತಹಶೀಲ್ದಾರ್‌ ಡಾ|ನಾಗರಾಜ್‌ ಎನ್‌. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next