Advertisement
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಇತ್ತೀಚೆಗೆ ನಡೆದ ಕಾಮನ್ವೆಲ್ತ್ ಶೈಕ್ಷಣಿಕ ಸಮಾವೇಶ ಮತ್ತು ವರ್ಲ್ಡ್ ಎಜುಕೇಷನ್ ಫೋರಂ (ಡಬ್ಲ್ಯುಇಎಫ್) ಅಧಿವೇಶನದಲ್ಲಿ ಭಾಗವಹಿಸಲು ತೆರಳಿದ್ದ ಸಚಿವರು, ಅಲ್ಲಿನ ಫಲಶ್ರುತಿ ಬಗ್ಗೆ ವಿವರಿಸಿದರು.
Related Articles
Advertisement
ರಾಜ್ಯ ನಿಯೋಗವು ಅಲ್ಲಿನ ಎಡಿನ್ಬರ್ಗ್ ವಿ.ವಿ.ಯ ರಾಯಲ್ ಸೊಸೈಟಿ, ದಂಡೀ ಯೂನಿವರ್ಸಿಟಿ, ಗ್ಲಾಸ್ಗೋ ಯೂನಿವರ್ಸಿಟಿ ಮತ್ತು ಯೂನಿವರ್ಸಿಟಿ ಆಫ್ ವೆಸ್ಟ್ ಆಫ್ ಸ್ಕಾಟ್ಲೆಂಡ್ ಗಳಿಗೆ ಭೇಟಿ ನೀಡಿತ್ತು. ಇಲ್ಲಿ ಕ್ರಮವಾಗಿ ಬಹುಶಿಸ್ತೀಯ ಅಧ್ಯಯನ ಕೇಂದ್ರ, ಜೀವವಿಜ್ಞಾನ ಸಂಶೋಧನೆ ಮತ್ತು ಸೈಬರ್ ಸೆಕ್ಯುರಿಟಿ, ಸಾಮಾಜಿ ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ನವೀಕರಿಸಬಹುದಾದ ಇಂಧನಗಳು ಹಾಗೂ ಸೆಮಿಕಂಡಕ್ಟರ್ಸ್ ಕ್ಷೇತ್ರಗಳ ಅಧ್ಯಯನ ಸಂರಚನೆಯ ಬಗ್ಗೆ ತಿಳಿದುಕೊಳ್ಳಲಾಯಿತು ಎಂದು ವಿವರಿಸಿದರು.
ಎನ್ಇಪಿ ಮೂಲಕ ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಒತ್ತು ಕೊಡಲಾಗುತ್ತಿದೆ. ನಮ್ಮ ಶಿಕ್ಷಣವನ್ನು ವಿಶ್ವದರ್ಜೆಯದನ್ನಾಗಿ ಮಾಡಲು ಇದು ಅಗತ್ಯವಾಗಿದೆ. ಇದರ ಭಾಗವಾಗಿ ಪಠ್ಯಕ್ರಮದಲ್ಲೇ ಕೌಶಲ್ಯ ಕಲಿಕೆಗೂ ಆದ್ಯತೆ ಕೊಡಲಾಗುತ್ತಿದೆ. ಇದರಿಂದ ದೇಶದ ಉತ್ಪಾದಕತೆಯೂ ಹೆಚ್ಚುತ್ತದೆ. ಹೀಗಾಗಿ, ಎಡಿನ್ಬರ್ಗ್ ವಿ.ವಿ.ಯ ಒಂದು ಕ್ಯಾಂಪಸ್ಸನ್ನು ಬೆಂಗಳೂರಿನಲ್ಲಿ ತರೆಯುವಂತೆ ಕೋರಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಚಿವರೊಂದಿಗೆ ಯುನೈಟೆಡ್ ಕಿಂಗ್ಡಂಗೆ ತೆರಳಿದ್ದ ರಾಜ್ಯ ನಿಯೋಗದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನ ಕುಲಪತಿ ಪ್ರೊ.ಭಾನುಮತಿ, ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಶಿ ಮತ್ತು ಆಡಳಿತಾಧಿಕಾರಿ ಡಾ.ಟಿ.ಎನ್. ತಾಂಡವ ಗೌಡ ಇದ್ದರು.
ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರನಾಯಕ್, ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಜೋಷಿ ಇದ್ದರು.