Advertisement

ದೇಶದ ಒಂದೇ ಒಂದು ಇಂಚು ಭೂಮಿ ಬಿಟ್ಟುಕೊಡುವುದಿಲ್ಲ ಎಂಬ ಪ್ರಧಾನಿ ಮಾತಿಗೆ ಪ್ರತಿಕ್ರಿಯೆಯೇನು?

05:43 PM Jun 21, 2020 | keerthan |

ಮಣಿಪಾಲ: ದೇಶದ ಒಂದೇ ಒಂದು ಇಂಚು ಭೂಮಿಯನ್ನು ಯಾರೋಬ್ಬರಿಗೂ ಬಿಟ್ಟುಕೊಡುವುದಿಲ್ಲ ಎಂಬ ಪ್ರಧಾನಿ ಮೋದಿಯವರ ಖಡಕ್ ಮಾತಿಗೆ ನಿಮ್ಮ ಪ್ರತಿಕ್ರಿಯೆಯೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ಸೊನ್ನೆಗೌಡ ಎನ್ ಯಲುವಹಳ್ಳಿ: ನಮ್ಮನ್ನಾಳುವ ಎಲ್ಲರೂ ಇದನ್ನೇ ಹೇಳೋದು, ಮುಂದೆಯೂ ಇದನ್ನೇ ಹೇಳ್ತಾರೆ.

ಮಂಜುನಾಥ್ ದಂಡಗಿ: ಮೊದಲು 20 ಜನ ನಮ್ಮ ಸೈನಿಕರ ಸಾವಿಗೆ ಯಾರು ಹೊಣೆ ಅದನ್ನು ಹೇಳಲಿ. ಈ ಹಿಂದೆ 40 ಸೈನಿಕರು ವೀರ ಮರಣ ಹೊಂದಿದರು, ಯಾರನ್ನಾದರೂ ಇಲ್ಲಿಯ ವರೆಗೆ ಬಂಧನ ಆಗಿದೆಯಾ

ಕೆ ಟಿ ತಿಮ್ಮಾ ರೆಡ್ಡಿ: ನಮ್ಮ ಯೋಧರು ಸಾವನ್ನು ಅಪ್ಪಿದ್ದು ಮತ್ತು 70-80 ಯೋಧರು ಗಾಯಾಳುಗಳಾಗಿದ್ದು ಎಲ್ಲಿ? ನಮ್ಮ ಎಲ್ಲೆಯಲ್ಲಿಯೇ? ಅಥವ ಅವರ ಜಾಗದಲ್ಲಿಯೇ? 10 ಯೋದರನ್ನು ಸೆರೆ ಹಿಡಿದು ಬಿಡುಗಡೆ ಮಾಡಿದ್ದು ಹೇಗೆ? ಅವರು ಆಯುಧಗಳನ್ನು ಬಳಸಿದರೇ? ನಾವು ಒಬ್ಬರನ್ನೂ ಸೆರೆ ಹಿಡಿಯಲಿಲ್ಲವೇ?

ನಾಗರಾಜ್ ಎಲ್ ವೆರ್ನಾಕರ್: ಮೋದಿ ಜೀ. ನಮ್ಮ ದೇಶದ ಭೂಮಿ ಯನ್ನು ಕಿತ್ತುಕೋಳ್ಳವ ಧೈರ್ಯ ಯಾರಿಗೂ ಇಲ್ಲ. ಆದರೆ ನಮ್ಮ ದೇಶದವರೆ ಬೇರೆಯವರಿಗೆ ದಾನ ಮಾಡುತ್ತಾರೆ ಇಂತಹ ದೇಶದ್ರೊಹಿಗಳನ್ನು ಮೊದಲು ನಿಗ್ರಹಿಸು.

Advertisement

ಸುರೇಶ್ ಗೌಡ: ಚೀನಾ ಸೈನಿಕರು ಭಾರತದ ಗಡಿ ದಾಟಿ ಬಂದಿಲ್ಲ ಎಂದ ಮೋದಿಯ ಹೇಳಿಕೆ ಎಷ್ಟು ಸರಿ? ಅಂದರೆ ನಮ್ಮ ಸೈನಿಕರೇ ಅತಿಕ್ರಮಣ ಮಾಡಿ ತಪ್ಪು ಮಾಡಿದ್ದಾರೆ ಎಂದು ಒಪ್ಪಿಕೊಂಡಂತೆ ಆಯ್ತು, ಇಂಥಾ ಬೇಜವಬ್ದಾರಿ ಪ್ರಧಾನಮಂತ್ರಿಯನ್ನು ಪಡೆದಿದ್ದು ನಮ್ಮ ದೌರ್ಭಾಗ್ಯ

ಕೃಷ್ಣ ಎಸ್ ಕುಡ್ಕುಳಿ: ಅದು ಪ್ರತಿಯೊಬ್ಬ ರಾಷ್ಟ್ರಭಕ್ತನ ಆಶ್ರಯ ಹಾಗೂ ಅಪೇಕ್ಷೆ ಕೂಡ. ದೇಶದ ಪ್ರದಾನ ಮಂತ್ರಿಯ ಮಾತು ನಮ್ಮೆಲ್ಲರ ಮುಖ ವಾಣಿ

ಹೇಮನಾಥ್ ಕುಮಾರ್: ಚೀನಾದ ಆರ್ಥಿಕತೆಯನ್ನು ಬುಡಮೇಲು ಮಾಡಲು ನರೇಂದ್ರಮೋದಿ ಯವರನ್ನು 2 ವರ್ಷ ಚೀನಾದ ಪ್ರಧಾನ ಮಂತ್ರಿ ಮಾಡುದ್ರೆ ಸಾಕು,ಚೀನಾ ಅಧೋಗತಿ ಆಗುವುದು ಖಚಿತ.

ಹಿಮಕರ ಕಜೆ: ದೇಶದ ಹೊರಗಿನ ದ್ರೋಹಿಗಳನ್ನು ನಾಶಮಾಡಲು ನಮ್ಮ ಮೋದಿ ಮತ್ತು ನಮ್ಮ ಹೆಮ್ಮೆಯ ಸೈನಿಕರು ಸಮರ್ಥವಾಗಿದ್ದಾರೆ, ಆದರೆ ದೇಶದ ಒಳಗೆ ಇರುವ ದೇಶದ್ರೋಹಿಗಳದೆ ಅತಿಯಾಗಿದೆ ಸಮಸ್ಯೆ.

Advertisement

Udayavani is now on Telegram. Click here to join our channel and stay updated with the latest news.

Next