Advertisement

ಜೂ.1: ಹೊಟೇಲ್‌ ಉದ್ಯಮ ಕಾರ್ಯಾರಂಭ ?

02:46 AM May 30, 2020 | Sriram |

ಮಂಗಳೂರು/ಉಡುಪಿ: ಲಾಕ್‌ಡೌನ್‌ 4.0 ಮುಗಿಯುವ ಹಂತ ತಲುಪಿದ್ದು, ಅನಂತರ ರಾಜ್ಯದಲ್ಲಿ ಹೊಟೇಲ್‌ಗ‌ಳು ಕೂಡ ಗ್ರಾಹಕರ ಸೇವೆಗೆ ತೆರೆದುಕೊಳ್ಳುವ ನಿರೀಕ್ಷೆಯಿದೆ.

Advertisement

ಜೂ.1ರಿಂದ ಹೊಟೇಲ್‌ಗ‌ಳನ್ನು ತೆರೆಯುವ ಸಾಧ್ಯತೆ ಬಗ್ಗೆ ರಾಜ್ಯ ಸರಕಾರ ಈಗಾಗಲೇ ಸೂಚನೆ ನೀಡಿದ್ದರೂ, ಆ ಬಗ್ಗೆ ಕೇಂದ್ರ ಸರಕಾರದ ಆದೇಶವನ್ನು ಕಾಯಲಾಗುತ್ತಿದೆ.

“ಹೊಟೇಲ್‌ಗ‌ಳನ್ನು ಆರಂಭಿಸಲು ಅನುಮತಿ ನೀಡಬೇಕೆಂದು ಕೋರಿ ದ.ಕ. ಮತ್ತು ಉಡುಪಿ ಜಿಲ್ಲಾ ಹೊಟೇಲ್‌ ಮಾಲಕರ ಸಂಘವು ರಾಜ್ಯ ಸಂಘದ ಮೂಲಕ ಈಗಾಗಲೇ ಸಿಎಂ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದೆ. ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಈ ಬಗ್ಗೆ ಕೇಂದ್ರ ಸರಕಾರದ ಆದೇಶ ಬರಬೇಕಾಗಿದೆ ಎಂಬುದಾಗಿ ಪ್ರತಿಕ್ರಿಯಿಸಿದ್ದರು’ ಎಂದು ಜಿಲ್ಲಾ ಸಂಘದ ಅಧ್ಯಕ್ಷರಾದ ಕುಡ್ಪಿ ಜಗದೀಶ್‌ ಶೆಣೈ ಮತ್ತು ತಲ್ಲೂರು ಶಿವರಾಮ ಶೆಟ್ಟಿ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.

ಸರಕಾರ ಅನುಮತಿ ನೀಡಿದರೆ ಸರಕಾರ ಸೂಚಿಸುವ ಷರತ್ತು ಆಧರಿಸಿ ಹೊಟೇಲ್‌ ವ್ಯವಹಾರ ನಡೆಸಬೇಕಾಗುತ್ತದೆ. ಗ್ರಾಹಕರು ಕೂಡಾ ಈ ದಿಶೆಯಲ್ಲಿ ಸಹಕರಿಸಬೇಕಾಗುತ್ತದೆ ಎಂದವರು ವಿವರಿಸಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಕುಳಿತುಕೊಳ್ಳುವ ವ್ಯವಸ್ಥೆ, ಮಾಸ್ಕ್ ಧಾರಣೆ, ಶುಚಿತ್ವ ಮತ್ತು ಸ್ಯಾನಿಟೈಸರ್‌ ಮತ್ತಿತರ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಕಾರ್ಮಿಕರ ಸಮಸ್ಯೆ
ಅವಳಿ ಜಿಲ್ಲೆಯ ಹೊಟೇಲ್‌ಗ‌ಳಲ್ಲಿ ಸ್ಥಳೀಯ ಕಾರ್ಮಿಕರ ಸಂಖ್ಯೆ ಕಡಿಮೆ. ಪರ ಊರಿನ ಕಾರ್ಮಿಕರೇ ಜಾಸ್ತಿ ಇದ್ದರು. ಈಗ ಕಾರ್ಮಿಕರು ಅವರವರ ಊರಿಗೆ ತೆರಳಿದ್ದಾರೆ. ಅವರನ್ನು ವಾಪಸ್‌ ಕರೆಸಬೇಕಾಗಿದೆ. ಈ ಎಲ್ಲ ಸವಾಲುಗಳ ನಡುವೆ ಹೋಟೆಲ್‌ ಉದ್ಯಮ ಕಾರ್ಯಾರಂಭಿಸಬೇಕಾದ ಅನಿವಾರ್ಯತೆಯೂ ಇದೆ.

Advertisement

ಜೂ. 1 ರಿಂದ ಹೊಟೇಲ್‌ಗ‌ಳನ್ನು ತೆರೆಯಲು ಸರಕಾರ ಅನುಮತಿ ನೀಡಿದರೂ ಹೊಟೇಲ್‌ಗ‌ಳಲ್ಲಿ ವ್ಯವಹಾರ ಪುನರಾರಂಭಿಸಲು 2- 3 ದಿನ ಬೇಕಾಗಬಹುದು ಏಕೆಂದರೆ ಹೊಟೇಲ್‌ಗ‌ಳು ಬಂದ್‌ ಆಗಿ ಸುಮಾರು 3 ತಿಂಗಳಾಗಿದ್ದು, ಕಾರ್ಮಿಕರು ಅವರವರ ಊರಿಗೆ ಹೋಗಿದ್ದಾರೆ. ಅವರು ಬರ ಬೇಕಾದರೆ ಬಸ್‌ ಸಂಚಾರ ಪುನರಾರಂಭ ಆಗಬೇಕಾಗಿದೆ.
– ಕುಡ್ಪಿ ಜಗದೀಶ್‌ ಶೆಣೈ,
ದ.ಕ. ಹೊಟೇಲ್‌ ಮಾಲಕರ ಸಂಘದ ಅಧ್ಯಕ್ಷರು .

ಉಡುಪಿಯಲ್ಲಿ ಜೂ.1ರಿಂದ ಹೊಟೇಲ್‌ಗ‌ಳನ್ನು ಪ್ರಾರಂಭಿಸುವ ಬಗ್ಗೆ ಸಿದ್ಧತೆ ನಡೆಸಲಾಗುತ್ತಿದೆ. ಎಲ್ಲ ಹೊಟೇಲ್‌ಗ‌ಳು ಏಕಕಾಲದಲ್ಲಿ ಪುನಾರಂಭಿಸಲು ಸಾಧ್ಯವಿಲ್ಲ. ಹಂತ -ಹಂತವಾಗಿ ತರೆಯಲಾಗುತ್ತದೆ. ವ್ಯವಹಾರ ಮೊದಲಿನಂತಾಗಲು ಸಮಯ ತೆಗೆದುಕೊಳ್ಳಲಿದೆ.
– ತಲ್ಲೂರು ಶಿವರಾಮ ಶೆಟ್ಟಿ,
ಉಡುಪಿ ಜಿಲ್ಲಾ ಹೊಟೇಲ್‌ ಮಾಲಕರ ಸಂಘದ ಅಧ್ಯಕ್ಷರು .

Advertisement

Udayavani is now on Telegram. Click here to join our channel and stay updated with the latest news.

Next