Advertisement
ಉದ್ಯೋಗ ಸಲುವಾಗಿ ಕತಾರ್ ಸೇರಿದ ಯುವಕರು ಬಳಿಕ ಐಸಿಸ್ ಹಾಗೂ ಜುಂದ್ ಅಲ್ ಅಕ್ಸಾ ಸಂಘಟನೆಯಲ್ಲಿ ಸಕ್ರಿಯವಾಗಿರುವ ಹಲವರ ಸಂಪರ್ಕಕ್ಕೆ ಬಂದಿದ್ದು, ಅಂತಿಮವಾಗಿ 2013ರಲ್ಲಿ ಸಿರಿಯಾ ಪ್ರವೇಶಿಸಿ ಜುಂದ್ ಅಲ್ ಅಕ್ಸಾ ಸಂಘಟನೆಗೆ ಸೇರಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
Related Articles
Advertisement
ಇತರೆ ಉಗ್ರರ ಜತೆ ನಂಟು?ದುಬೈನಲ್ಲಿದ್ದು ಐಸಿಸ್ ಉಗ್ರ ಸಂಘಟನೆ ಪರ ಫೇಸ್‌ಬುಕ್, ವ್ಯಾಟ್ಸಾಪ್, ಟ್ವಿಟರ್ ಸೇರಿದಂತೆ ವ್ಯಾಪಕ ಪ್ರಚಾರ ನಡೆಸಿ ಸಾವಿರಾರು ಮಂದಿ ಯುವಕರನ್ನು ಐಸಿಸ್ ಸೇರಲು ಪ್ರೇರೆಪಿಸಿದ ಆರೋಪದಲ್ಲಿ 2016ರಲ್ಲಿ ಬಂಧಿತನಾಗಿರುವ ಶಂಕಿತ ಉಗ್ರ ಭಟ್ಕಳದ ಅದ್ನಾನ್ ಹಸ್ಸನ್ ಜತೆ ಜುಂದ್ ಅಲ್ ಅಕ್ಸಾ ಸಂಘಟನೆ ಸೇರಿರುವ ಯುವಕರಿಗೆ ನಂಟಿರುವ ಸಾಧ್ಯತೆಯಿದೆ. ದುಬೈನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅದ್ನಾನ್, ಸೌದಿಅರೆಬಿಯಾ, ಫಿಲಿಡೆಲ್ಫಿಯಾ, ಶ್ರೀಲಂಕಾ ಸೇರಿ ವಿವಿಧ ದೇಶಗಳ ಸಾವಿರಾರು ಯುವಕರ ಜತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದ. ಆತ ರಚಿಸಿದ್ದ ವ್ಯಾಟ್ಸಾಪ್ ಗ್ರೂಪ್‌ನಲ್ಲಿ ಕರ್ನಾಟಕದ ಹಲವು ಯುವಕರು ಇರುವ ಶಂಕೆಯನ್ನು ಎನ್‌ಐಎ ವ್ಯಕ್ತಪಡಿಸಿತ್ತು. ಅದೇ ಯುವಕರು ಮತ್ತೂಂದು ಜುಂದ್ ಅಲ್ ಅಕ್ಸಾ ಸೇರಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ವಿದೇಶಿ ಯುವಕರೇ ಟಾರ್ಗೆಟ್
ಐಸಿಸ್ ಉಗ್ರ ಸಂಘಟನೆಗೆ ಪರ್ಯಾಯವಾಗಿ ಸಲಾಫಿ ಜಿಹಾದಿಗಳು ಕಟ್ಟಿಕೊಂಡ ಸಂಘಟನೆ ಜುಂದ್- ಅಲ್- ಅಕ್ಸಾ ಸಿರಿಯಾ ನಾಗರಿಕ ಯುದ್ಧದ ವೇಳೆ ಬೆಳಕಿಗೆ ಬಂದಿತ್ತು. ಈ ಹಿಂದೆ ಇದೇ ಸಂಘಟನೆಯನ್ನು ಶರಿಯತ್ ಅಲ್ ಕೈದಾ ಎಂದು ಕರೆಯಲಾಗುತ್ತಿದ್ದು,ಅದರ ಅಂಗ ಸಂಸ್ಥೆಯಾಗಿ ಅಲ್- ನುಸ್ರಾ – ಫ್ರಂಟ್ ಕಾರ್ಯನಿರ್ವಹಿಸುತ್ತಿತ್ತು. ಸಿರಿಯಾದಲ್ಲಿ ಷರಿಯತ್ ಕಾನೂನು ಜಾರಿಗೊಳಿಸುವ ಗುರಿ ಸಂಘಟನೆಯದ್ದಾಗಿತ್ತು. ಈ ಸಂಘಟನೆ ವಿದೇಶಗಳ ಯುವಕರನ್ನು ಪ್ರಭಾವಿಸಿ ಅವರನ್ನು ತನ್ನ ಗುಂಪಿಗೆ ಸೇರಿಸಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ. – ಮಂಜುನಾಥ್ ಲಘುಮೇನಹಳ್ಳಿ