Advertisement

July; ದಾಖಲೆಯ 1.82 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

01:05 AM Aug 03, 2024 | Team Udayavani |

ಹೊಸದಿಲ್ಲಿ: ಜುಲೈ ತಿಂಗಳಲ್ಲಿ 1.82 ಲಕ್ಷ ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹವಾಗಿದೆ. ಆ ಮೂಲಕ ತೆರಿಗೆ ಸಂಗ್ರಹದಲ್ಲಿ ಶೇ.10.3ರಷ್ಟು ಹೆಚ್ಚಳವಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸರಕಾರವು, ಜಿಎಸ್‌ಟಿ ಜಾರಿಯಾದಾಗಿನಿಂದಲೂ ಜುಲೈ ತಿಂಗಳ ಜಿಎಸ್‌ಟಿ ಸಂಗ್ರಹವು 3ನೇ ಅತಿದೊಡ್ಡ ಸಂಗ್ರಹವಾಗಿದೆ ಎಂದು ಹೇಳಿದೆ. ಒಟ್ಟು 16,283 ಕೋಟಿ ರೂ. ರೀಫ‌ಂಡ್‌ ಮಾಡಲಾಗಿದೆ. ರೀಫ‌ಂಡ್‌ ಮೊತ್ತ ಕಳೆದ ಬಳಿಕ ನಿವ್ವಳ ಜಿಎಸ್‌ಟಿ ಸಂಗ್ರಹ ಮೊತ್ತವು 1.66 ಲಕ್ಷ ಕೋಟಿ ರೂ. ಆಗಿದ್ದು, ಶೇ.14.4ರಷ್ಟು ಬೆಳವಣಿಯಾಗಿದೆ ಎಂದು ತಿಳಿಸಿದೆ. 1.82 ಲಕ್ಷ ಕೋಟಿ ರೂ. ಸಂಗ್ರಹದ ಪೈಕಿ, ಸಿಜಿಎಸ್‌ಟಿ 32386 ಕೋಟಿ ರೂ. ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next