Advertisement
ಹಂತ ಹಂತವಾಗಿ ಹೋರಾಟ ತೀವ್ರ ಗೊಳಿಸಲು ಕ್ರಿಯಾ ಸಮಿತಿ ನಿರ್ಧರಿಸಿದ್ದು, ಪ್ರಥಮ ಹಂತದಲ್ಲಿ 9ರಂದು ಪ್ರತಿಭಟನೆ ನಡೆಸಲಿದೆ.ವ್ಯಾಪಾರಿಗಳು,ಆಟೋ-ಟ್ಯಾಕ್ಷಿ ಹಾಗೂ ಇತರ ವಾಹನ ಮಾಲಕರು,ಕಾರ್ಮಿಕರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.ರಸ್ತೆ ಅವ್ಯವಸ್ಥೆ ಬಗ್ಗೆ ಸಚಿವರು,ಸಂಸದ,ಶಾಸಕರು,ಅಧಿಕಾರಿ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದೆ.
ನಾಲ್ಕು ವರ್ಷಗಳಿಂದ ರಸ್ತೆ ಅವ್ಯವಸ್ಥೆಗೆ ತಲುಪಿದ್ದರೂ ದುರಸ್ತಿಗೆ ಮುಂದಾಗಿಲ್ಲ.ಇದರಿಂದ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಹೊಂಡ-ಗುಂಡಿಗಳಿಂದ ತುಂಬಿರುವ ರಸ್ತೆಯಲ್ಲಿ ಸಂಚಾರವೇ ದುಸ್ತರವಾಗುತ್ತಿದೆ. ಶಾಲೆ, ಮಸೀದಿ, ದೇವಸ್ಥಾನ, ಚರ್ಚ್,ಅಂಗನವಾಡಿ,ಗ್ರಾಮ ಕಚೇರಿ ಹಾಗೂ ಇತರ ಸಂಸ್ಥೆಗಳು, ದಿನಂಪ್ರತಿ ಸಾವಿರಾರು ಮಂದಿ ತೆರಳುವ ಈ ರಸ್ತೆ ಕುರಿತು ನಿರ್ಲಕ್ಷ್ಯದ ವಿರುದ್ಧ ನಾಗರಿಕರಿಂದ ಆಕ್ರೋಶ ಕೇಳಿ ಬರುತ್ತಿದ್ದು, ತೀವ್ರ ಹೋರಾಟಕ್ಕೆ ನಾಗರಿಕರು ಮುಂದಾಗುತ್ತಿದ್ದಾರೆ.