Advertisement
ಕ್ಯಾಂಪ್ಕೋ ಸಾಧನೆಚಾಕ್ಲೇಟ್ನ ಇತಿಹಾಸದಲ್ಲಿ ಕರ್ನಾಟಕ ಕರಾವಳಿ ಮೂಲದ ಕ್ಯಾಂಪ್ಕೋ ಸಂಸ್ಥೆಯದ್ದು ಸವಿಸವಿಯಾದ ಪುಟಗಳು. ಅಡಿಕೆ ಮತ್ತು ಕೋಕೋ ಬೆಳೆಗಾರರ ಹಿತರಕ್ಷಣೆಗೆ ಸ್ಥಾಪನೆಯಾದ ಕ್ಯಾಂಪ್ಕೋ ಸಂಸ್ಥೆ ದೇಶದ ಸಹಕಾರಿ ರಂಗದಲ್ಲಿ ಆದರ್ಶಯುತವಾದ ಹೆಸರು. ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕ್ಯಾಂಪ್ಕೋ ಚಾಕ್ಲೇಟ್ ತಯಾರಿ ಕ್ಷೇತ್ರವನ್ನು ಪ್ರವೇಶಿಸಿ, ಅಪೂರ್ವ ಸಾಧನೆಯನ್ನು ದಾಖಲಿಸಿದೆ.
Related Articles
ಚಾಕ್ಲೇಟ್ ಸ್ವಾದವು ದ್ರವ ಮತ್ತು ಘನ ಸ್ವರೂಪದಲ್ಲಿ ದೊರೆಯುತ್ತಾ, ಮನುಕುಲಕ್ಕೆ ಸಿಹಿ ಉಣ ಬಡಿಸುತ್ತಿದೆ. ಚಾಕ್ಲೇಟ್ ಸೇವನೆಯ ಅನೇಕ ಧನಾತ್ಮಕ ಕಾರಣಗಳಿಂದ ಅದನ್ನು ಇತಿಹಾಸ ಕಾಲದಲ್ಲಿ “ದೇವರ ಪಾನೀಯ’ ಎಂದು ಹೆಸರಿಸಿದ್ದರು! ಕೋಕೋ ಗಿಡದ ವೈಜ್ಞಾನಿಕ ಹೆಸರು: ಥಿಯೋಬ್ರೋಮಾ ಕಕಾವೊ. ಗ್ರೀಕ್ ಭಾಷೆಯಲ್ಲಿ ಥಿಯೋ ಅಂದರೆ ದೇವರು; ಬ್ರೋಮಾ ಅಂದರೆ ಪಾನೀಯ!
Advertisement
ಚಾಕ್ಲೇಟ್ ಎಂಬ ಉಚ್ಚಾರವೇ ಸಾಕು: ಆ ಪರಿಸರವೆಲ್ಲ ಸಿಹಿಯಾಗಿ ಪರಿವರ್ತನೆಯಾಗುತ್ತದೆ. ಇದು ಚಾಕ್ಲೇಟ್‌ನ ಮಹಿಮೆ. ಆಬಾಲವೃದ್ಧರಾಗಿ ಚಾಕ್ಲೇಟ್ ಸವಿಯುವವರೇ ಎಲ್ಲ; ಚಾಕ್ಲೇಟ್‌ನ ಸವಿಯ ರೋಮಾಂಚನವನ್ನು ಸವಿದವನೇ ಬಲ್ಲ! ಜಗತ್ತಿನಾದ್ಯಂತ ಪ್ರತೀ ವರ್ಷ ಜುಲೈ 7ನ್ನು ಚಾಕ್ಲೇಟ್ ದಿನವಾಗಿ ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಚಾಕ್ಲೇಟ್ ದಿನ ಎಂದು ಕೂಡಾ ಉಲ್ಲೇಖೀಸಲಾಗುತ್ತದೆ. 2009ರಿಂದ ಈ ಆಚರಣೆಯು ವಿಶ್ವದಾದ್ಯಂತ ನಡೆಯುತ್ತಿದೆ. ಹಾಗೆ ನೋಡಿದರೆ, ಜಗತ್ತಿನಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಬಳಕೆಯಾಗುವ ಸಿಹಿ ತಿಂಡಿ ಅಂದರೆ ಅದು ಚಾಕ್ಲೇಟ್. ಬಹುತೇಕ ಎಲ್ಲಾ ಆಚರಣೆಗಳಲ್ಲೂ ಚಾಕ್ಲೇಟ್‌ಗೆ ಮಹತ್ವದ ಸ್ಥಾನವಿದೆ.
ಸ್ನೇಹ ಸಂಬಂಧಗಳನ್ನು ಬೆಸೆಯುವಲ್ಲಿ ಕೂಡಾ ಚಾಕ್ಲೇಟ್‌ಗೆ ಅಗ್ರಸ್ಥಾನವಿದೆ. ಹೃದಯ ಹೃದಯಗಳನ್ನು ಬೆಸೆಯುವ ಪ್ರೇಮಾನುಬಂಧಗಳಲ್ಲಿ ಕೂಡಾ ಚಾಕ್ಲೇಟ್‌ನ ವಿನಿಮಯ ನಿರ್ಣಯಕ ಪಾತ್ರವನ್ನು ಹೊಂದಿರುತ್ತದೆ ಎಂಬ ಮಾತನ್ನು ಪ್ರಣಯಿಗಳು ತತ್‌ಕ್ಷಣಕ್ಕೇ ಒಪ್ಪಿಕೊಂಡಾರು!ಜಗತ್ತಿನಾದ್ಯಂತ ವೈಟ್ ಚಾಕ್ಲೇಟ್ ಡೇ ಮತ್ತು ಮಿಲ್ಕ್ ಚಾಕ್ಲೇಟ್ ಡೇ ಎಂಬ ಪ್ರತ್ಯೇಕ ಆಚರಣೆಗಳಿದ್ದರೂ ಜುಲೈ 7ರ ಆಚರಣೆಯೇ ಮುಖ್ಯವಾಗಿರುತ್ತದೆ. ಮನೋಹರ ಪ್ರಸಾದ್
ಬೇಬಿ ವನ್ಯ, ಮಂಗಳೂರು
ಸಹಕಾರ: ಮೊನಾರ್ಕ್ ಸ್ಟುಡಿಯೋ ಚಿತ್ರ: ಸತೀಶ್ ಇರಾ