Advertisement
ಕ್ರಿ.ಶ. 1804ರಲ್ಲಿ 100 ಕೋಟಿಯಷ್ಟಿದ್ದ ಪ್ರಪಂಚದ ಜನಸಂಖ್ಯೆ 1999ರಲ್ಲಿ 600 ಕೋಟಿ ತಲುಪಿ 2011ರಲ್ಲಿ 700 ಕೋಟಿ ದಾಟಿದೆ. 1947ರಲ್ಲಿ ಅಂದಾಜು 35 ಕೋಟಿಯಷ್ಟಿದ್ದ ಭಾರತದ ಜನಸಂಖ್ಯೆ 1951ರ ಜನಗಣತಿಯಲ್ಲಿ 36 ಕೋಟಿ. 2011ರ ಜನಗಣತಿ ಪ್ರಕಾರ 121 ಕೋಟಿಗಿಂತ ಮಿಕ್ಕಿ ಬೆಳೆದಿದೆ. ಪ್ರಪಂಚದಲ್ಲಿ ಕೇವಲ 10 ದೇಶಗಳು. ಚೀನ, ಭಾರತ, ಯು.ಎಸ್.ಎ., ಇಂಡೋನೇಶಿಯ, ಬ್ರೆಜಿಲ್ ಪಾಕಿಸ್ಥಾನ, ನೈಜೀರಿಯಾ, ಬಾಂಗ್ಲಾದೇಶ, ರಷ್ಯಾ, ಮೆಕ್ಸಿಕೋ ಪ್ರಪಂಚದ ಅರ್ಧಕ್ಕಿಂತಲೂ ಹೆಚ್ಚು ಜನಸಂಖ್ಯೆ ಹೊಂದಿದೆ.
Related Articles
Advertisement
ನಮ್ಮ ದೇಶದಲ್ಲಿ ತೀವ್ರಗತಿಯಲ್ಲಿ ಜನಸಂಖ್ಯೆ ಬೆಳೆಯುವುದಕ್ಕೆ ಸಾಮಾಜಿಕ, ಸಾಂಸ್ಕೃತಿಕ ಕಾರಣಗಳಲ್ಲದೇ ಕುಟುಂಬ ಕಲ್ಯಾಣ ಸೇವೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಇರುವುದು ಸಹ ಆಗಿದೆ. ಕುಟುಂಬ ಕಲ್ಯಾಣ ಯೋಜನೆಗಳು ಕೇವಲ ಸಂತಾನ ತಡೆಗಟ್ಟುವ ಕಾರ್ಯಕ್ರಮ ಎನ್ನುವ ತಪ್ಪು ಕಲ್ಪನೆ ಸಹ ಜನರಲ್ಲಿದೆ. ಕುಟುಂಬ ಕಲ್ಯಾಣ ಸೇವೆಗಳು ಮದುವೆಗೆ ಮುಂಚೆನೆ ಪ್ರಾರಂಭವಾಗುತ್ತವೆ. ಮದುವೆಯಾಗುವ ಗಂಡು ಹೆಣ್ಣಿನಲ್ಲಿ ಇರಬಹುದಾದ ಕಾಯಿಲೆಗಳು ಪರೀಕ್ಷೆ ಮತ್ತು ಅವರಿಂದ ಆನುವಂಶಿಕವಾಗಿ ಮಕ್ಕಳಿಗೆ ಬರಬಹುದಾದ ಅಂಶಗಳ ತುಲನೆ, ಲೈಂಗಿಕ ಶಿಕ್ಷಣ ಸಂತಾನೋತ್ಪತ್ತಿ ಆರೋಗ್ಯ, ಲೈಂಗಿಕ ಸೋಂಕುಗಳ ಬಗ್ಗೆ ಅರಿವು, ಮಕ್ಕಳ ನಡುವೆ ಅಂತರ ಕಾಯ್ದುಕೊಳ್ಳುವ ವಿಧಾನಗಳು ಮಕ್ಕಳಾಗದೇ ಇರುವುದಕ್ಕೆ ಚಿಕಿತ್ಸೆ. ಗಂಡು ಮಗು ಮಾತ್ರ ಸಾಕು ಎನ್ನುವ ಮನಃಸ್ಥಿತಿ ಬದಲಿಸುವ, ಮದುವೆ ಆಗದೇ ಇರುವ ತಾಯಂದಿರಿಗೆ ಇರುವ ಸೇವೆಗಳು ಸಹ ಒಳಗೊಂಡಿವೆ.
ಈಗ ನಮ್ಮ ಸಮಾಜದಲ್ಲಿ ಕಂಡುಬರುವ ಪ್ರಮುಖ ವಿರೋಧಾವಾಸಗಳೆಂದರೆ – ಕೆಲವು ಸಮುದಾಯಗಳಲ್ಲಿ ಮಹಿಳೆ 18 ವರ್ಷಕ್ಕಿಂತ ಮೊದಲೇ ಮದುವೆ ಆಗುವುದು ಹಾಗೂ ಅತೀ ಕಡಿಮೆ ಅಂತರದಲ್ಲಿ ಸರಾಸರಿ 5-6 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವಂಥದು. ಇನ್ನೊಂದೆಡೆ ಹೆಚ್ಚು ವಿದ್ಯಾಭ್ಯಾಸ, ಕಚೆೇರಿ ಕೆಲಸ ಮಾಡುವ ಮಹಿಳೆಯರು 28-30 ವರ್ಷಗಳು ಕಳೆದರೂ ಕೆಲಸ, ಕುಟುಂಬ ಒತ್ತಡಗಳಿಂದ ಮದುವೆ – ಮಕ್ಕಳು ಆಗದೇ ಇರುವುದು ಹಾಗೂ 30 ವರ್ಷಗಳು ನಂತರ ಗರ್ಭಿಣಿ ಮತ್ತು ಮಕ್ಕಳಿಗೆ ಜನನ ನೀಡುವುದು, ಅಂತಹ ಗರ್ಭಿಣಿಯನ್ನು ಹಾಗೂ ಮುಂದೆ ಹುಟ್ಟಿದ ಅಂತಹ ಮಕ್ಕಳಿಗೆ ಸಹ ಆರೋಗ್ಯ ಸಂಬಂಧ ತೊಂದರೆಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರಬಹುದು. ಮಹಿಳೆಗೆ ಮಕ್ಕಳನ್ನು ಪಡೆಯಲು 24ರಿಂದ 30 ವರ್ಷಗಳವರೆಗೆ ಸೂಕ್ತ ಕಾಲ ಹಾಗೂ 2 ಮಕ್ಕಳ ನಡುವೆ ಕನಿಷ್ಠ 3 ವರ್ಷಗಳ ಅಂತರ ನೀಡುವುದು ತಾಯಿ ಹಾಗೂ ಮಗುವಿನ ಆರೋಗ್ಯ ದೃಷ್ಟಿಯಲ್ಲಿ ಅತೀ ಅಗತ್ಯವಾದುದು.
ಇತ್ತೀಚೆಗೆ ದಂಪತಿಗಳುಅಳವಡಿಸಿಕೊಳ್ಳುತ್ತಿರುವುದು ಸಹ ಆತಂಕದ ವಿಷಯ. ಗಂಡು ಮಗುವಾದರೂ ಹೆಣ್ಣು ಮಗು ಆದರೂ ಸಹ ಒಂದೇ ಮಗುವಿನ ನಂತರ ಸಂತಾನ ನಿಯಂತ್ರಣಕ್ಕೊಳಪಡುವುದು ಇದರಿಂದಾಗಿ ಸಮಾಜದಲ್ಲಿ ಲಿಂಗಾನುಪಾತ ತಾರತಮ್ಯಗೊಳ್ಳಲಿದೆ.
ಈಗಾಗಲೇ ದೇಶದಲ್ಲಿ ಜನಿಸುವ ಪ್ರತಿ ಸಾವಿರ ಗಂಡು ಮಗುವಿಗೆ ಕೇವಲ 919 ಹೆಣ್ಣು ಮಗು ಹುಟ್ಟುತ್ತಿವೆ. ಕರ್ನಾಟಕದಲ್ಲಿ ಇದು ಕೇವಲ 910 ಇದೆ. ಇದು ಮುಂದೆ ಸಮಾಜದಲ್ಲಿ ಅರಾಜಕತೆಗೆ ಕಾರಣವಾಗಬಹುದು. ನಮ್ಮ ದೇಶದಲ್ಲಿ ಪ್ರತಿ ವರ್ಷ ಸರಿಸುಮಾರು 3 ಕೋಟಿ ಮಹಿಳೆಯರು ಗರ್ಭಿಣಿಯಾಗುತ್ತಿದ್ದು ಸಮೀಕ್ಷೆಗಳ ಪ್ರಕಾರ 10-20% ಗರ್ಭಧಾರಣೆ. ಅವರಿಗೆ ಕುಟುಂಬ ನಿಯಂತ್ರಣ ಸಾಧನಗಳ ಮಾಹಿತಿ ಇಲ್ಲದೇ ಇರುವುದು ಅಥವಾ ಅಂತಹ ಸಾಧನಗಳು ಕೈಗೆ ಸಿಗದೇ ಇರುವುದರಿಂದಾಗಿಯೋ ಅಥವಾ ಅಂತಹ ಸಾಧನೆಗಳ ವಿಫಲತೆಯಿಂದ ಆಗಿರುವುದು. ಪ್ರತೀ ದಿನ ನಮ್ಮ ದೇಶದಲ್ಲಿ 10 ಅಂತಹ ಮಹಿಳೆಯರು ಬೇಡವಾದ ಗರ್ಭವನ್ನು ಅವೈಜ್ಞಾನಿಕ ವಿಧವಾದ ಗರ್ಭಪಾತ ಮಾಡಿಸಿಕೊಳ್ಳುವಾಗ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಪ್ರತೀ ಮಹಿಳೆಗೆ ಕುಟುಂಬ ನಿಯಂತ್ರಣ ಸಾಧನಗಳ ಬಗ್ಗೆ ಅರಿವಿರುವುದು ಅತೀ ಆವಶ್ಯಕ. ಈ ಎಲ್ಲ ಕುಟುಂಬ ನಿಯಂತ್ರಣ ಸಾಧನಗಳು ಕುಟುಂಬ ಕಲ್ಯಾಣ ಯೋಜನೆಯಡಿಯಲ್ಲಿ ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಉಪಕೇಂದ್ರಗಳಲ್ಲಿ ಉಚಿತವಾಗಿ ಲಭ್ಯವಿದೆ.ಇವುಗಳಲ್ಲಿ ಮುಖ್ಯವಾದುದು
ಕೆಳಗಿನಂತಿವೆ.
1. Urine prognancy test- ಇದು ಅತೀ ಶೀಘ್ರವಾಗಿ ಆಶಾ ಕಾರ್ಯಕರ್ತರು ಜನರ ಮನೆ ಬಾಗಿಲಿನಲ್ಲಿ ಮಾಡುವ ಗರ್ಭಿಣಿ ಪರೀಕ್ಷೆ . ಮಹಿಳೆಗೆ ತಿಂಗಳ ಪಿರಿಯಡ್ಸ್ ನಿಂತ ಕೇವಲ 1 ವಾರದೊಳಗೆ ಈ ಮೂತ್ರ ಪರೀಕ್ಷೆಯ ಮೂಲಕ ಮಹಿಳೆ ಗರ್ಭಿಣಿಯಾಗಿರುವುದನ್ನು ಖಚಿತ ಪಡಿಸಿಕೊಳ್ಳಬಹುದು. 2.E-Pills – ಈ ತುರ್ತು ಗರ್ಭ ತಡೆ ಮಾತ್ರೆಗಳನ್ನು ಸಹ ಆಶಾ ಕಾರ್ಯಕರ್ತರು ಅಗತ್ಯ ಬಿದ್ದ ದಂಪತಿಗಳಿಗೆ ಸರಬರಾಜು ಮಾಡುತ್ತಾರೆ. ಅಸುರಕ್ಷಿತ ಲೈಂಗಿಕ ಕ್ರಿಯೆ (Unprotected sex) ಆದ 72 ಗಂಟೆ ಒಳಗೆ ಈ ಮಾತ್ರೆಗಳನ್ನು ವೈದ್ಯರ ಸಲಹೆಯಂತೆ ಸೇವಿಸಿದರೆ ಗರ್ಭಧಾರಣೆ ತಡೆಯಬಹುದು. 3. Condoms-ಈ ಸಾಧನಗಳು ಆಶಾ ಕಾರ್ಯಕರ್ತರಲ್ಲಿ ಹಾಗೂ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಜನನ ನಿಯಂತ್ರಣ ಹಾಗೂ ಲೈಂಗಿಕ ರೋಗಗಳ ತಡೆಗಟ್ಟುವುದಕ್ಕಾಗಿ ಉಚಿತವಾಗಿ ದೊರೆಯುತ್ತವೆ. 4. Oral Pills- ದಿನಕ್ಕೊಮ್ಮೆ (mala – D) ಅಥವಾ ವಾರಕ್ಕೊಮ್ಮೆ (Chaya) ಸಂತಾನ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಈ ಮಾತ್ರೆಗಳನ್ನು ವೈದ್ಯರಿಂದ ಪರೀಕ್ಷಿಸಿ ಪ್ರಾರಂಭಿಸಬೇಕು. ಮುಂದೆ ಈ ಮಾತ್ರೆಗಳನ್ನು ಪ್ರತೀ ತಿಂಗಳು ಗರ್ಭಧಾರಣೆ ಬೇಡದೆ ಇರುವವರಿಗೆ ಆಶಾ ಕಾರ್ಯಕರ್ತರಿಂದ ಪಡೆದು ತೆಗೆದುಕೊಳ್ಳಬಹುದು. 5. ANTHRA- ಈ ಒಂದು ಗರ್ಭಧಾರಣೆ ತಡೆಯುವ ಸೂಜಿ ಮದ್ದು (injection) 3 ತಿಂಗಳವರೆಗೆ ಗರ್ಭಧಾರಣೆಯಿಂದ ರಕ್ಷಣೆ ನೀಡುವುದು. ಪ್ರತೀ 3 ತಿಂಗಳಿಗೊಮ್ಮೆ ವೈದ್ಯರ ಸಲಹೆಯಂತೆ ತೆಗೆದುಕೊಳ್ಳುವುದು ಉತ್ತಮ. 6.PPIUCD-ಪ್ರಸವ ಅನಂತರ ಎರಡು ಗಂಟೆ ಒಳಗೆ ಅಳವಡಿಸುವ ವಂಕಿಧಾರಣೆ. ಇದು 5 ವರ್ಷಗಳಿಂದ 10 ವರ್ಷಗಳವರೆಗೂ ವೈದ್ಯರ ನಿಗದಿತ ತಪಾಸಣೆಯೊಂದಿಗೆ ಗರ್ಭತಡೆಗೆ ಬಳಸಬಹುದು. 7. IUCD- ವಂಕಿಧಾರಣೆ ಯಾವುದೇ ತಿಂಗಳು ಮಹಿಳೆಯ ಪೀರೇಡ್ಸ್‌ನ 5ನೇ ದಿನದಿಂದ ವೈದ್ಯರ ಸಲಹೆಯಂತೆ ಅಳವಡಿಸುವಂಥದ್ದು. ಇದು 3ರಿಂದ 5 ವರ್ಷಗಳ ವರೆಗೆ ಗರ್ಭಧಾರಣೆ ತಡೆಯಬಹುದು. 8. ಶಾಶ್ವತ ವ್ಯವಸ್ಥೆಗಳಾದ ಸ್ತ್ರೀಯರಿಗೆ
ಉದರ ದರ್ಶಕ ಶಸ್ತ್ರ ಚಿಕಿತ್ಸೆ ಮತ್ತು ಟ್ಯುಬೆಕ್ಟಮಿ, ಪುರುಷರಿಗೆ ವ್ಯಾಸೆಕ್ಟಮಿ.ಈ ಎಲ್ಲ ಜನಸಂಖ್ಯಾ ನಿಯಂತ್ರಣ
ಸಲಹೆ ಸಲಕರಣೆಗಳನ್ನು ಪ್ರತಿಯೊಬ್ಬರು ಅರಿತು ಜನಸಂಖ್ಯಾ ನಿಯಂತ್ರಣದ ಸೂತ್ರಗಳಂತೆ ಕೇವಲ 2 ಮಕ್ಕಳು 3 ವರ್ಷಗಳ ಅಂತರದಲ್ಲಿ 30 ವರ್ಷಗಳ ಒಳಗೆ ಪಡೆದು ಹೆಚ್ಚು ಜನಸಂಖ್ಯೆಯಿಂದ ಸಮಾಜಕ್ಕೆ , ದೇಶಕ್ಕೆ ಆಗುವ ಆಹಾರ, ವಸತಿ, ಶಿಕ್ಷಣ, ನಿರುದ್ಯೋಗ ಸಮಸ್ಯೆಗಳನ್ನು ಸಂಪನ್ಮೂಲಗಳ ಕೊರತೆಗಳನ್ನು ನೀಗಿಸಬಹುದು. ಸುರಕ್ಷಿತ ಹಾಗೂ ಪರಿಣಾಮಕಾರಿ ಗರ್ಭ ನಿರೋಧಕಗಳ ಬಳಕೆಯಿಂದ ಆಗುವ ಲಾಭಗಳು ಅನೇಕ. ಕಡಿಮೆ ಮರಣದರ (Death rate) ಹೊಂದುವುದು ದೇಶದ ಆರೋಗ್ಯ ಸ್ಥಿತಿಯನ್ನು ಬಿಂಬಿಸಿದರೆ ಜನನ ದರ (Birth rate) ಕಡಿಮೆ ಕ್ರಮಬದ್ಧ ಮಾಡುವುದು ಪ್ರತೀ ನಾಗರಿಕರ ಪ್ರತೀ ಸರಕಾರದ ಗುರಿಯಾಗಿರಬೇಕು. – ಡಾ| ಅಶ್ವಿನಿ ಕುಮಾರ ಗೋಪಾಡಿ,
ಅಡಿಶನಲ್ ಪ್ರೊಫೆಸರ್
ಕಮ್ಯುನಿಟಿ ಮೆಡಿಸಿನ್ ಕೆ.ಎಂ.ಸಿ. ಮಣಿಪಾಲ