Advertisement

ಜೂಹಿಯ ಬ್ಯೂಟಿ ರಹಸ್ಯ!

07:50 AM Sep 13, 2017 | Team Udayavani |

ನಿಂಬೆ ಹಣ್ಣಿನಂಥ ಹುಡುಗಿಯೆಂದೇ ಕನ್ನಡಿಗರಿಗೆ ಪರಿಚಯವಾದ ಬೆಡಗಿ ಜೂಹಿ ಚಾವ್ಲಾ. “ಪ್ರೇಮಲೋಕ’ ಬಂದು 30 ವರ್ಷಗಳೇ ಆಗಿರಬಹುದು. ಆದರೆ ಆಗಿನ ಜೂಹಿ ಚಾವ್ಲಾಗೂ ಈಗಿನ ಜೂಹಿ ಚಾವ್ಲಾಗೂ ಹೆಚ್ಚಿನ ವ್ಯತ್ಯಾಸವೇನೂ ತಿಳಿಯುವುದಿಲ್ಲ. ಅದರ ಹಿಂದೆ ಅವರ ಆರೋಗ್ಯಕರ ದಿನಚರಿ ಮತ್ತು ಅಭ್ಯಾಸಗಳಿವೆ.  

Advertisement

ಹೆಂಗಸರ ವಯಸ್ಸು ಕೇಳಬಾರದು ಎನ್ನುತ್ತಾರೆ. ಆದರೆ ಕೆಲವರು ತಮ್ಮ ನಿಜ ವಯಸ್ಸು ಹೇಳಿದರೂ ಅದನ್ನು ನಂಬುವುದು ಕಷ್ಟ. ಅಷ್ಟರಮಟ್ಟಿಗೆ ಅವರು ಫಿಟ್‌ನೆಸ್‌ ಮತ್ತು ಸೌಂದರ್ಯವನ್ನು ಕಾಪಾಡಿಕೊಂಡಿರುತ್ತಾರೆ. ಅಂಥವರಲ್ಲೊಬ್ಬರು “ನಿಂಬೆ ಹಣ್ಣಿನಂಥ ಹುಡುಗಿ’ ಜೂಹಿ ಚಾವ್ಲಾ. ಆಕೆಯ ವಯಸ್ಸು ಐವತ್ತೆಂದರೆ ನಂಬುವುದು ಕಷ್ಟ. ಆದರೆ ಅದು ನಿಜ. ಅದಕ್ಕಿಂತ ಹೆಚ್ಚಾಗಿ ಈ ವಯಸ್ಸಿನಲ್ಲೂ ಅವರು ಚಿರಯೌವ್ವನೆಯಂತೆ ಕಂಗೊಳಿಸುತ್ತಿರುವುದೂ ಅಷ್ಟೇ ನಿಜ. ಬಾಲಿವುಡ್‌ನ‌ಲ್ಲಂತೂ ಜೂಹಿಗೆ ವಯಸ್ಸಾಗುವುದು ಎಂದೋ ನಿಂತು ಹೋಗಿದೆ ಎಂಬ ಜೋಕು ಚಾಲ್ತಿಯಲ್ಲಿದೆ. ಈಗಿನ ನಟಿಯರಿಗೇ ಸೆಡ್ಡು ಹೊಡೆಯುವಂತಿರುವ ಜೂಹಿ ಚಾವ್ಲಾ ಆ್ಯಂಟಿ ಏಜಿಂಗ್‌ ಗುಟ್ಟೇನು ಗೊತ್ತಾ? 

1. ಚರ್ಮದ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಜೂಹಿ ಮಾಯ್‌ಶ್ಚರೈಸರ್‌ ಕ್ರೀಂ ಬಳಸುತ್ತಾರೆ. ಚರ್ಮದ ಹೊಳಪಿನ ಬಗ್ಗೆ ಜಾಸ್ತಿ ಗಮನ ಹರಿಸುವ ಆಕೆ, ಮೇಕಪ್‌ ಹಾಕಿಕೊಂಡು ಮಲಗುವಂಥ ತಪ್ಪು ಯಾವತ್ತೂ ಮಾಡುವುದಿಲ್ಲವಂತೆ! ಶೂಟಿಂಗ್‌ ಮುಗಿಸಿ ಬಂದು ಅದೆಷ್ಟೇ ಸುಸ್ತಾಗಿದ್ದರೂ ಮುಖ ತೊಳೆದು, ಜಾನ್ಸನ್‌ ಬೇಬಿ ಆಯಿಲ್‌ ಹಚ್ಚಿಕೊಂಡೇ ಮಲಗುವುದು ಅನ್ನುತ್ತಾರೆ ಜೂಹಿ.  

2. ಬೆಳಗ್ಗೆ ಎದ್ದ ಕೂಡಲೇ 6-8 ಲೋಟ ನೀರು ಅಥವಾ ಲಿಂಬೂ ಜ್ಯೂಸ್‌ ಕುಡೀತೀನಿ. ಜ್ಯೂಸ್‌ಗೆ ಸಕ್ಕರೆಯ ಬದಲು ಜೇನು ಬಳಸ್ತೀನಿ. ಜೇನುತುಪ್ಪ ದೇಹದೊಳಗಿನ ಕಲ್ಮಶಗಳನ್ನು, ಕೊಬ್ಬಿನ ಅಂಶವನ್ನೂ ಕರಗಿಸುತ್ತದೆ ಗೊತ್ತಾ ಅನ್ನುತ್ತಾ ಕಣ್ಣು ಮಿಟುಕಿಸುತ್ತಾರೆ ಈಕೆ.

3. ಜೂಹಿಯ ಊಟ-ತಿಂಡಿ ತುಂಬಾ ಸಿಂಪಲ್‌. ಬೆಳಗ್ಗಿನ ತಿಂಡಿಗೆ ಬ್ರೆಡ್‌-ಟೋಸ್ಟ್‌, ಮೊಟ್ಟೆ ಮತ್ತು ಹಣ್ಣಿನ ರಸ ಸೇವಿಸಿದರೆ, ಮಧ್ಯಾಹ್ನದ ಊಟಕ್ಕೆ 2 ರೋಟಿ- ಸಲಾಡ್‌, ಹಣ್ಣು-ತರಕಾರಿ, ಕಾಳು ಇದ್ದರೆ ಮುಗಿಯಿತು. 

Advertisement

4. ಊಟಕ್ಕೆ, ಪಾಲಿಶ್‌ ಮಾಡದೇ ಇರುವ ಅಕ್ಕಿಯನ್ನೇ ಬಳಸುವುದು. ರಾತ್ರಿ ಊಟದಲ್ಲಿಯೂ ಸಾಕಷ್ಟು ತಾಜಾ ಹಣ್ಣು-ತರಕಾರಿ, ಮೊಳಕೆಕಾಳುಗಳಿರುತ್ತವೆ. ಕರಿದ ಪದಾರ್ಥ ಮತ್ತು ಮಾಂಸಾಹಾರ ಈ ಬೆಡಗಿಗೆ ಆಗಿ ಬರುವುದಿಲ್ಲವಂತೆ.  

5. ಪ್ರತಿನಿತ್ಯ ಬೆಳಗ್ಗೆ ಯೋಗ, ಪ್ರಾಣಾಯಾಮ, ಧ್ಯಾನ ಮತ್ತು ಟ್ರೆಡ್‌ಮಿಲ್‌ ವಾಕಿಂಗ್‌ಅನ್ನು ಜೂಹಿ ಮಿಸ್‌ ಮಾಡುವುದೇ ಇಲ್ಲ. 

– ಪ್ರಣೀತಾ

Advertisement

Udayavani is now on Telegram. Click here to join our channel and stay updated with the latest news.

Next