Advertisement

ವೆರಿ ಗುಡ್‌ಗೆ ಜೂಹಿ ಚಾವ್ಲಾ ಗಾಯನ!

05:12 PM Nov 09, 2017 | |

“ಪ್ರೇಮ ಲೋಕ’ದ ಸುಂದರಿ ಎಂದೇ ಕರೆಸಿಕೊಳ್ಳುವ ಬಾಲಿವುಡ್‌ ನಟಿ ಜೂಹಿಚಾವ್ಲಾ ಇತ್ತೀಚೆಗೆ ರಮೇಶ್‌ ಅರವಿಂದ್‌ ಅಭಿನಯದ “ಪುಷ್ಪಕ ವಿಮಾನ’ ಚಿತ್ರದ “ಜಲ್ಸಾ ಜಲ್ಸಾರೇ…’ ಹಾಡಿಗೆ ಸ್ಟೆಪ್‌ ಹಾಕಿದ್ದು ಗೊತ್ತೇ ಇದೆ.  ಅದಾದ ಬಳಿಕ ಅವರು ನಿರ್ದೇಶಕ ಯಶವಂತ್‌ ಸರದೇಶಪಾಂಡೆ ಅವರ “ವೆರಿ ಗುಡ್‌’ ಎಂಬ ಹೊಸ ಚಿತ್ರದ ಹಾಡೊಂದರಲ್ಲೂ ಹೆಜ್ಜೆ ಹಾಕಿದ್ದರು. ಇದಷ್ಟೇ ಅಲ್ಲ, “ವೆರಿ ಗುಡ್‌’ ಚಿತ್ರದಲ್ಲಿ ಸ್ವತಃ ಜೂಹಿ ಚಾವ್ಲಾ ಅವರೇ ಹಾಡಿದ್ದಾರೆ ಅನ್ನೋದೇ ಈ ಹೊತ್ತಿನ ಸುದ್ದಿ. 

Advertisement

ಹೌದು, ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಜೂಹಿ ಚಾವ್ಲಾ ಹಾಡಿದ್ದಾರೆ. “ವೆರಿ ಗುಡ್‌’ ಚಿತ್ರದಲ್ಲಿ ಜೂಹಿ ಚಾವ್ಲಾ ಅವರು ಸಂಗೀತ ಶಿಕ್ಷಕಿಯಾಗಿ ಹೆಜ್ಜೆ ಹಾಕಿದ್ದಲ್ಲದೆ, “ಕಲಿಸು ಗುರುವೇ ಕಲಿಸು …’ ಎಂಬ ಹಾಡಿಗೆ ದನಿಯಾಗಿದ್ದಾರೆ ಕೂಡ. ಈ ಹಿಂದೆ ಜೂಹಿ ಚಾವ್ಲಾ ಅವರು ಹಿಂದಿಯ “ಭೂತ್‌ನಾಥ್‌’ ಚಿತ್ರದಲ್ಲಿ ಅಮಿತಾಭ್‌ ಬಚ್ಚನ್‌ ಜತೆ ಹಾಡಿದ್ದರು. ಅದು ಬಿಟ್ಟರೆ, ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಹಾಡಿದ್ದಾರೆ. ರಂಗಾಯಣ ರಾಮನಾಥ್‌ ಅವರು ಬರೆದ ಈ ಹಾಡನ್ನು ಅರ್ಥಮಾಡಿಕೊಂಡು ಸತತ ಒಂದು ತಿಂಗಳ ಕಾಲ ಅಭ್ಯಾಸ ಮಾಡಿ, ಮುಂಬೈನ ಸ್ಟುಡಿಯೋದಲ್ಲಿ ಹಾಡಿದ್ದಾರೆ. ರಾಜು ಅನಂತಸ್ವಾಮಿ ಅವರು ಈ ಹಾಡಿಗೆ ಮೂಲ ರಾಗ ಸಂಯೋಜನೆ ಮಾಡಿದ್ದರು. ಈಗ ವಿ. ಮನೋಹರ್‌ ಅವರು ಅದಕ್ಕೆ ರೀಟ್ಯೂನ್‌ ಮಾಡಿದ್ದಾರೆ. ಇನ್ನು, ಸಂಗೀತ ನಿರ್ದೇಶಕ ವಿ. ಮನೋಹರ್‌ ಮತ್ತು ನಿರ್ದೇಶಕ ಸರದೇಶಪಾಂಡೆ ಅವರು ಜೂಹಿ ಚಾವ್ಲಾ ಅವರಿಂದಲೇ ಈ ಹಾಡನ್ನು ಹಾಡಿಸಬೇಕು ಎಂಬ ನಿರ್ಧಾರ ಮಾಡಿದ್ದರಂತೆ. ಅದೀಗ ಈಡೇರಿದ ಖುಷಿಯಲ್ಲಿ ನಿರ್ದೇಶಕರಿದ್ದಾರೆ.

ಇನ್ನೊಂದು ಹೊಸ ಸುದ್ದಿಯೆಂದರೆ, “ವೆರಿ ಗುಡ್‌’ ಚಿತ್ರ ಈಗ ಹೈದರಾಬಾದ್‌ನಲ್ಲಿ ನ. 8ರಿಂದ ನಡೆಯಲಿರುವ 20 ನೇ ಅಂತಾರಾಷ್ಟ್ರೀಯ ಮಕ್ಕಳ ಚಿತ್ರೋತ್ಸವಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ. ಚಿತ್ರೋತ್ಸವಕ್ಕೆ ಬಂದ 1402 ಮಕ್ಕಳ ಚಿತ್ರಗಳ ಪೈಕಿ, ಕನ್ನಡದ “ವೆರಿ ಗುಡ್‌’ ಆಯ್ಕೆಯಾಗಿರುವುದು ಸಹಜವಾಗಿಯೇ ನಿರ್ದೇಶಕರಿಗೆ ಖುಷಿಕೊಟ್ಟಿದೆ. ಇದರೊಂದಿಗೆ ರಷ್ಯಾದಲ್ಲಿ ನಡೆಯಲಿರುವ ಬ್ರಿಕ್ಸ್‌ ಚಿತ್ರೋತ್ಸವಕ್ಕೂ ಚಿತ್ರ ಆಯ್ಕೆಯಾಗಿದೆ. “ಬಾಲ ಎಕ್ಸ್‌ಪ್ರೆಸ್‌’ ಎಂಬ ಕ್ಯಾಂಪ್‌ ಶುರು ಮಾಡಿದ್ದ ಸರದೇಶಪಾಂಡೆ, ಆ ಕ್ಯಾಂಪ್‌ನ ಮಕ್ಕಳನ್ನೇ ಇಟ್ಟುಕೊಂಡು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ “ಟೆನ್‌ ಔಟ್‌ ಆಫ್ ಟೆನ್‌’ ಎಂಬ ಅಡಿಬರಹವೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next