Advertisement

ಶಾಸಕಾಂಗದಲ್ಲಿ ನ್ಯಾಯಾಂಗ ಹಸ್ತಕ್ಷೇಪ ಬೇಡ

07:14 PM Jan 12, 2023 | Team Udayavani |

ಜೈಪುರ: ಉಪರಾಷ್ಟ್ರಪತಿ ಮತ್ತು ರಾಜ್ಯಸಭೆ ಸಭಾಪತಿ ಜಗದೀಪ್‌ ಧನ್‌ಕರ್‌ ಮತ್ತು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ಶಾಸಕಾಂಗ ವ್ಯವಹಾರಗಳಲ್ಲಿ “ನ್ಯಾಯಾಂಗದ ಅತಿಕ್ರಮಣ’ದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ.

Advertisement

ಶಾಸಕಾಂಗಗಳು ಹೇಗೆ ನ್ಯಾಯಾಲಯದ ತೀರ್ಪುಗಳನ್ನು ಪ್ರಕಟಿಸಲು ಸಾಧ್ಯವಿಲ್ಲವೋ, ಅದೇ ರೀತಿ ನ್ಯಾಯಾಂಗ ಕೂಡ ಶಾಸಕಾಂಗದ ಕಾನೂನು ರಚನೆಯ ಕೆಲಸದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದಾರೆ.

ಪೀಠಾಸೀನಾಧಿಕಾರಿಗಳ 83ನೇ ಸಮ್ಮೇಳನದಲ್ಲಿ ಮಾತನಾಡಿದ ಧನ್‌ಕರ್‌, “1973ರ ಕೇಶವಾನಂದ ಭಾರತಿ ಪ್ರಕರಣದ ತೀರ್ಪಿನಲ್ಲಿ, ಸಂವಿಧಾನದ ಮೂಲ ಸ್ವರೂಪವನ್ನು ಬದಲಿಸುವ ಅಧಿಕಾರ ಸಂಸತ್‌ಗಿಲ್ಲ ಮತ್ತು ಸಂವಿಧಾನಕ್ಕೆ ತಿದ್ದುಪಡಿ ತರುವ ಸಂಸತ್‌ನ ಅಧಿಕಾರಕ್ಕೆ ನಿರ್ಬಂಧವಿದೆ ಎಂದು ಹೇಳಲಾಗಿತ್ತು. ಇದು ನ್ಯಾಯಾಂಗ ಪ್ರಾಬಲ್ಯವನ್ನು ಮೆರೆಯುವ ಉದ್ದೇಶದಿಂದ ಹಾಕಿದ ಕೆಟ್ಟ ಸಂಪ್ರದಾಯ. ಜನಾಭಿಪ್ರಾಯವನ್ನು ತಟಸ್ಥಗೊಳಿಸುವ ಅಧಿಕಾರ ಯಾವುದೇ ಸಂಸ್ಥೆಗಿಲ್ಲ’ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಸ್ಪೀಕರ್‌ ಓಂ ಬಿರ್ಲಾ, ನ್ಯಾಯಾಂಗವು ಶಾಸಕಾಂಗದ ಪಾವಿತ್ರ್ಯತೆಗೆ ಗೌರವ ಕೊಡಬೇಕು. ಸಾಂವಿಧಾನಿಕ ಸಂಸ್ಥೆಗಳು “ಹೋರಾಟ’ದ ಮನೋಭಾವದಿಂದ ದೂರವಿದ್ದು, ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next