Advertisement
ಪಾಟಾಜೆಯ ಸುಂದರ ಅವರ ಪತ್ನಿ ನಳಿನಿ ಅವರನ್ನು ಜೂ. 9ರ ರಾತ್ರಿ ಕುಡಿದ ಮತ್ತಿನಲ್ಲಿ ಕಲ್ಮಡ್ಕದ ಜಯಕುಮಾರ್ ಎಂಬಾತ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಬೆಳಗ್ಗೆ ಪರಾರಿಯಾಗಿದ್ದ. ತನಿಖೆ ಆರಂಭಿಸಿದ್ದ ಪೊಲೀಸರು ಮಂಗಳವಾರ ಆರೋಪಿಯನ್ನು ಬಂಧಿಸಿದ್ದರು. ಬಳಿಕ ಪೊಲೀಸರು ಆರೋಪಿಯ ಸ್ಥಳ ಮಹಜರು ನಡೆಸಿದ್ದರು. ಬುಧವಾರ ಆರೋಪಿಯನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Related Articles
Advertisement