Advertisement

ಭಾಷೆ ಬೆಳವಣಿಗೆಗೆ ಪೂರಕ ನಿರ್ಣಯ ಮಾಡಿ: ಸಚಿವ ಮಲ್ಲಿಕಾರ್ಜುನ್‌

12:42 PM Mar 06, 2017 | Team Udayavani |

ದಾವಣಗೆರೆ: ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತಿ, ಚಿಂತಕರು ನಾಡು, ನುಡಿ, ಸಂಸ್ಕೃತಿ ಉಳಿವು, ಬೆಳವಣಿಗೆಗೆ ಪೂರಕ ನಿರ್ಣಯ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ತಿಳಿಸಿದ್ದಾರೆ. ಭಾನುವಾರ ತಾಲೂಕಿನ ಹದಡಿ ಗ್ರಾಮದಲ್ಲಿ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ, ಮಾತನಾಡಿದರು.

Advertisement

ಇಂಗ್ಲಿಷ್‌ ಪ್ರಭಾವ ಮತ್ತು ಜಾಗತೀಕರಣದಿಂದ ನಮ್ಮ ನಾಡು,ನುಡಿಗೆ ಧಕ್ಕೆ ಬರುತ್ತಿರುವುದು ಆತಂಕದ ವಿಷಯವಾಗಿದೆ. ಉಸಿರುಗಟ್ಟಿದ ವಾತಾವರಣದಲ್ಲಿರುವ ಕನ್ನಡದ ಏಳಿಗೆಗೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇಂತಹ ಸಮ್ಮೇಳನಗಳು ಪೂರಕವಾಗಬೇಕು. ಸಮ್ಮೇಳನದಲ್ಲಿ ಸಾಹಿತಿಗಳು ಭಾಷೆ ಬೆಳೆಸಲು ಬೇಕಾದ ನಿರ್ಣಯ ಕೈಗೊಳ್ಳಬೇಕು. 

ತಹ ನಿರ್ಣಯಗಳನ್ನು ನಮ್ಮ ಸರ್ಕಾರ ಜಾರಿಮಾಡಲು ಬದ್ಧ ಆಗಿರುತ್ತದೆ ಎಂದರು. ಕನ್ನಡ, ಕರ್ನಾಟಕಕ್ಕೆ ಬಹು ಪ್ರಾಚೀನ ಇತಿಹಾಸವಿದೆ. ಗಂಗರು, ಕದಂಬರು, ಚಾಲುಕ್ಯರು, ಚೋಳರು, ಹೊಯ್ಸಳರು, ವಿಜಯನಗರದ ಅರಸರು ಆಳಿದ ನಾಡಿದು. ಜಲ, ನೆಲ, ವನ ಸಂಪತ್ತನ್ನು ಹೊಂದಿದ ಕರುನಾಡು ಇದು.

ಸುಮಾರು 2 ಸಾವಿರಕ್ಕೂ ಮಿಗಿಲಾದ ಭಾಷಾ ಇತಿಹಾಸವಿದ್ದು, ಪಂಪ, ಬಸವಣ್ಣ, ಕುಮಾರವ್ಯಾಸ, ಕನಕದಾಸ, ಕುವೆಂಪು, ಬೇಂದ್ರೆ ಮುಂತಾದವರ ತ್ಕೃಷ್ಟ ಸಾಹಿತ್ಯದಿಂದ ಶ್ರೀಮಂತವಾಗಿದೆ. ನಮ್ಮ ಜಿಲ್ಲೆಯ ಮಹಲಿಂಗರಂಗರು ಕನ್ನಡದ ಕುರಿತು ವಿಶೇಷವಾದ ಅರಿವನ್ನು ನೀಡಿದ್ದಾಗೆ ಎಂದು ಅವರು ತಿಳಿಸಿದರು. 

ಹದಡಿ ಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣ ಹಾಗೂ ಹದಡಿ ಕೆರೆಯನ್ನು ಅಭಿವೃದ್ಧಿ ಪಡಿಸಲು ನನ್ನ ಸಂಪೂರ್ಣ ಸಹಕಾರವಿದೆ ಹಾಗೂ ಇದಕ್ಕೆ ಗ್ರಾಮಸ್ಥರ ಸಹಕಾರವೂ ಅಗತ್ಯವಾಗಿದೆ.  ದಾವಣಗೆರೆ ಉತ್ತರ ಮತ್ತು ದಕ್ಷಿಣ ಎರಡೂ ಕ್ಷೇತ್ರ ಎರಡು ಕಣ್ಣುಗಳಿದ್ದಂತೆ ಇವೆರಡೂ ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಿವೆ ಎಂದು ಅವರು ಹೇಳಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next