Advertisement

ಸಿಜೆಐ ಸಣ್ಣ ವಿವಾದ; ಬಹಿರಂಗ ಮಾಡಬಾರದಿತ್ತು: ಬಾರ್‌ ಕೌನ್ಸಿಲ್‌

04:24 PM Jan 13, 2018 | udayavani editorial |

ಹೊಸದಿಲ್ಲಿ : ಭಾರತದ ಸರ್ವೋಚ್ಚ ನ್ಯಾಯಾಲಯದ ಶ್ರೇಷ್ಠ ನ್ಯಾಯಮೂರ್ತಿಯವರ ಕಾರ್ಯ ವೈಖರಿಯನ್ನು ಪ್ರಶ್ನಿಸಿರುವ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ತಮ್ಮ ಭಿನ್ನಮತವನ್ನು ತಮ್ಮೊಳಗೇ ಮಾತುಕತೆಯ ಮೂಲಕ ಪರಹರಿಸಿಕೊಳ್ಳಬಹುದಿತ್ತು; ಅದನ್ನು ಬಹಿರಂಗಕ್ಕೆ ತರುವ ಅಗತ್ಯಇರಲಿಲ್ಲ ಏಕೆಂದರೆ ಅದೊಂದು ಸಣ್ಣ ವಿಷಯವಾಗಿತ್ತು ಎಂದು ಭಾರತದ ಬಾರ್‌ ಕೌನ್ಸಿಲ್‌ ಹೇಳಿದೆ. 

Advertisement

ಬಾರ್‌ ಕೌನ್ಸಿಲ್‌ ಅಧ್ಯಕ್ಷರಾಗಿರುವ ಮನನ್‌ ಕುಮಾರ್‌ ಮಿಶ್ರಾ ಅವರು, “ಕೇಸುಗಳನ್ನು ಹಂಚಿ ಹಾಕುವ ವಿವಾದವು ಸಣ್ಣ ವಿಷಯವಾಗಿತ್ತು.ಅದನ್ನು ಮಾಧ್ಯಮದ ಮುಂದೆ ತಂದು ಬಹಿರಂಗ ಮಾಡಬೇಕಿರಲಿಲ್ಲ; ಒಂದೊಮ್ಮೆ ಸಿಜೆಐ ಜತೆಗೆ ಸಹಮತ ಏರ್ಪಡದಿದ್ದಲ್ಲಿ ಇತರ ನ್ಯಾಯಾಧೀಶರನ್ನು ಅಥವಾ ಬಾರ್‌ ಕೌನ್ಸಿಲ್‌ ಸದಸ್ಯರನ್ನು ಒಳಗೊಳಿಸಬಹುದಿತ್ತು; ಅದನ್ನು ಬಿಟ್ಟು ಇಷ್ಟೊಂದು ಸಣ್ಣ ವಿವಾದವನ್ನು ಬಹಿರಂಗಕ್ಕೆ ತಂದದ್ದು ತೀರ ನಿರಾಶಾದಾಯಕ; ದುಃಖಕರ’ ಎಂದು ಹೇಳಿದರು. 

ಬಾರ್‌ ಕೌನ್ಸಿಲ್‌ ಸದಸ್ಯರು ಈ ಬಗ್ಗೆ ಸಭೆಯೊಂದನ್ನು ನಡೆಸಿ ನಿಯೋಗವೊಂದನ್ನು ಸಿದ್ಧಪಡಿಸಿ ಸಿಜೆಐ ದೀಪಕ್‌ ಮಿಶ್ರಾ ಅವರನ್ನು ಕಾಣಲಿದ್ದಾರೆ ಮತ್ತು ಈ ಬಗೆಯ ಸನ್ನಿವೇಶಗಳು ಇನ್ನು ಭವಿಷ್ಯದಲ್ಲಿ ಎಂದೂ ತಲೆ ಎತ್ತದಂತೆ ಮಾಡುವ ಮಾರ್ಗೋಪಾಯಗಳನ್ನು ಚರ್ಚಿಸಲಿದ್ದಾರೆ ಎಂದು ಮನನ್‌ ಮಿಶ್ರಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next