Advertisement

ವರ್ಚುವಲ್‌ ಕಲಾಪದಲ್ಲಿ ವಕೀಲ ಅರೆಬೆತ್ತಲೆ ದರ್ಶನ!

06:22 PM Oct 28, 2020 | Nagendra Trasi |

ನವದೆಹಲಿ: ಕೊರೊನಾ ಆತಂಕ ಕಾರಣಕ್ಕಾಗಿ ಸುಪ್ರೀಂ ಕೋರ್ಟ್‌ ವರ್ಚುವಲ್‌ ಕಲಾಪಗಳನ್ನು ನಡೆಸುತ್ತಿದೆ. ಆದರೆ, ಸೋಮವಾರದ ಕಲಾಪವೊಂದರಲ್ಲಿ ಜಡ್ಜ್ಗಳು, ವಕೀಲರು, ಪತ್ರಕರ್ತರು ನಗೆಗಡಲಿನಲ್ಲಿ ತೇಲುವಂತಾಗಿತ್ತು! ವಿಡಿಯೊ ಕಾನ್ಫರೆನ್ಸ್‌ ವೇಳೆ ವಕೀಲರೊಬ್ಬರು ಅಂಗಿ ಧರಿಸದೆ ದರ್ಶನ ಕೊಟ್ಟರು! ಆದರೆ, ವಕೀಲರ ನಡೆಗೆ ಗರಂ ಆದ ನ್ಯಾ. ಇಂದು ಮಲ್ಹೋತ್ರಾ “ಅತ್ಯಂತ ಅನುಚಿತ ವರ್ತನೆ’ ಎಂದು ಅಸಮಾಧಾನ ಸೂಚಿಸಿದರು.

Advertisement

ಕೂಡಲೇ ನ್ಯಾ. ಡಿ.ವೈ.ಚಂದ್ರಚೂಡ್‌, ಸಾಲಿಸಿಟರ್‌ ಜನರಲ್‌ ಮತ್ತು ಇತರೆ ಹಿರಿಯ ವಕೀಲರಿಗೆ “ಆ ವಕೀಲರೊಂದಿಗೆ ಮಾತಾಡಿ, ಮತ್ತೆಂದೂ ಹೀಗೆ ನಡೆದುಕೊಳ್ಳದಂತೆ ಸೂಚಿಸಿ’ ಎಂದು ಆದೇಶಿಸಿದರು.

ಈ ಘಟನೆಯನ್ನು ವಿನೋದವಾಗಿ ಸ್ವೀಕರಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, “ಅಮೆರಿಕದ ಸುಪ್ರೀಂ ಕೋರ್ಟ್‌ ಯಾವುದೇ ಬಟ್ಟೆ ಧರಿಸಿಯೂ ಕಲಾಪದಲ್ಲಿ ಪಾಲ್ಗೊಳ್ಳಬಹುದು’ ಎಂದಿರುವ ಬಗ್ಗೆ ಉಲ್ಲೇಖೀಸಿ, ಚಟಾಕಿ ಹಾರಿಸಿದರು.

ಆಗಿದ್ದೇನು?: ಅರೆಬೆತ್ತಲೆಯಾಗಿ ದರ್ಶನ ನೀಡಿದ ವಕೀಲರ ಮನೆಯಲ್ಲಿ ವಿಜಯ ದಶಮಿ ಪೂಜೆ ನಡೆಯುತ್ತಿತ್ತು. ಕೇವಲ ಧೋತಿ ಧರಿಸಿ, ಪೂಜಾವಸ್ತ್ರದಲ್ಲಿದ್ದಾಗ, ವಿಡಿಯೊ ಕಾನ್ಫರೆನ್ಸಿಂಗ್‌ಗೆ ಇವರನ್ನು ಸೇರಿಸಲಾಗಿತ್ತು!

ಆರ್‌ಪಿಐ ಸೇರಿದ ಪಾಯಲ್
ನಿರ್ಮಾಪಕ ಅನುರಾಗ್‌ ಕಶ್ಯಪ್‌ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದ ಬಾಲಿವುಡ್‌ ನಟಿ ಪಾಯಲ್‌ ಘೋಷ್‌ ಸೋಮವಾರ ರಿಪಬ್ಲಿಕನ್‌ ಪಾರ್ಟಿ
ಆಫ್ ಇಂಡಿಯಾ ಅಠಾವಳೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

Advertisement

ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ರಾಮನಾಥ ಅಠಾವಳೆ ಘೋಷ್‌ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಜತೆಗೆ ಪಾಯಲ್‌ ಘೋಷ್‌
ಅವರನ್ನು ಮಹಿಳಾ ವಿಭಾಗದ ಉಪಾಧ್ಯಕ್ಷರನ್ನಾಗಿಯೂ ಅಠಾವಳೆ ನೇಮಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪಾಯಲ್‌ ಪಕ್ಷ ಸೇರ್ಪಡೆಗೆ ಅವಕಾಶ ಮಾಡಿಕೊಟ್ಟ ಕೇಂದ್ರ ಸಚಿವರಿಗೆ ಧನ್ಯವಾದ ಸಮರ್ಪಿಸುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next