Advertisement

ನನೆಗುದಿಯಲ್ಲಿ ನ್ಯಾಯಾಧೀಶರ ವಸತಿ ಗೃಹ

11:28 AM Jul 28, 2018 | Team Udayavani |

ನಗರ : ನಗರದ ದರ್ಬೆ ಪರಿಸರದಲ್ಲಿ ಕಳೆದ ಹಲವು ವರ್ಷಗಳಿಂದ ನ್ಯಾಯಾಧೀಶರ ವಸತಿಗೃಹಗಳು ಉಪಯೋಗವಿಲ್ಲದೆ ಜೀರ್ಣಾವಸ್ಥೆಯಲ್ಲಿದೆ. ಇದರ ನವೀಕರಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಚಿಕ್ಕಮುಟ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ಲೋಕೋಪಯೋಗಿ ಸಚಿವರಿಗೆ ಮತ್ತು ಪುತ್ತೂರಿನ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ.

Advertisement

ಹೊಸ ಕಟ್ಟಡ ರಚನೆಯ ನೀಲ ನಕ್ಷೆಗಳು, ಎಷ್ಟು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡುವುದು ಇತ್ಯಾದಿಗಳ ಬಗ್ಗೆ ಸ್ಪಷ್ಟವಾದ ನಿರ್ಧಾರ ಮತ್ತು ಕಟ್ಟಡ ನಿರ್ಮಾಣ ವಿನ್ಯಾಸದಲ್ಲಿ ಉಂಟಾದ ವ್ಯತ್ಯಾಸಗಳು ಅನುದಾನ ಬಿಡುಗಡೆಯ ವಿಳಂಬಕ್ಕೆ ಕಾರಣ. ಈ ವಿಳಂಬದ ಕಾರಣದಿಂದ ಹಳೇ ಕಟ್ಟಡಗಳ ಸಮಾಗ್ರಿಗಳು ಕಳ್ಳಕಾಕರ ಪಾಲಾಗುತ್ತಿವೆ. ಮಳೆ, ಬಿಸಿಲುಗಳಿಗೆ ಛಾವಣಿ ಸಾಮಾಗ್ರಿಗಳು ಕೆಟ್ಟು ಹೋಗುತ್ತಿವೆ. ಪಾಳು ಬಿದ್ದಿರುವ ಕಟ್ಟಡದಲ್ಲಿ ಅನೈತಿಕ ಚಟುವಟಿಗಳಿಗೆ ಅವಕಾಶಗಳಾಗುತ್ತಿವೆ. ಆದ್ದರಿಂದ ವಸತಿಗೃಹ ನಿರ್ಮಾಣಕ್ಕೆ ಆಗಿರುವ ಗೊಂದಲಗಳನ್ನು ನಿವಾರಿಸುವಲ್ಲಿ ಮತ್ತು ಅನುದಾನಗಳ ಬಿಡುಗಡೆಗೆ ಕ್ರಮಕೈಗೊಳ್ಳುವಂತೆ ಸಚಿವರಿಗೆ ನೀಡಿದ ಮನವಿಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next