Advertisement

ಪ್ರಜಾಪತಿಗೆ ಜಾಮೀನು ಕೊಟ್ಟ ಜಡ್ಜ್ ಸಸ್ಪೆಂಡ್‌!

11:06 AM Apr 30, 2017 | Team Udayavani |

ಲಕ್ನೋ: ಅತ್ಯಾಚಾರ ಆರೋಪಕ್ಕೆ ಗುರಿಯಾಗಿರುವ ಉತ್ತರಪ್ರದೇಶದ ಮಾಜಿ ಸಚಿವ, ಸಮಾಜವಾದಿ ಪಕ್ಷದ ನಾಯಕ ಗಾಯತ್ರಿ ಪ್ರಜಾಪತಿಗೆ ಜಾಮೀನು ನೀಡಿದ ನ್ಯಾಯಾಧೀಶರನ್ನೇ ಅಮಾನತು ಮಾಡಿ ಅಲಹಾಬಾದ್‌ ಹೈಕೋರ್ಟ್‌ ಅಚ್ಚರಿಯ ಆದೇಶ ಹೊರಡಿಸಿದೆ.

Advertisement

ಮಹಿಳೆ ಮತ್ತು ಆಕೆಯ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ನಡೆಸಿದ ಆರೋಪ ಪ್ರಜಾಪತಿ ಮೇಲಿದೆ. ಪ್ರಕರಣ ಸಂಬಂಧ ಮಂಗಳವಾರವಷ್ಟೇ ಲಕ್ನೋದ ಸ್ಥಳೀಯ ಕೋರ್ಟ್‌ನ ನ್ಯಾಯಾಧೀಶ ಓಂ ಪ್ರಕಾಶ್‌ ಮಿಶ್ರಾ ಅವರು ಪ್ರಜಾಪತಿಗೆ ಜಾಮೀನು ನೀಡಿದ್ದರು. ಇದನ್ನು ಪ್ರಶ್ನಿಸಿ ಯೋಗಿ ಸರಕಾರ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಶನಿವಾರ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌, “ಅವಸರ ಅವಸರವಾಗಿ, ಸರಿಯಾಗಿ ವಿಚಾರಣೆ ನಡೆಸದೇ ಪ್ರಜಾಪತಿಗೆ ಜಾಮೀನು ನೀಡಲಾಗಿದೆ. ಹೀಗಾಗಿ, ನ್ಯಾ.ಮಿಶ್ರಾ ಅವರನ್ನು ಅಮಾನತು ಮಾಡುತ್ತಿದ್ದೇವೆ’ ಎಂದು ಹೇಳಿದೆ. ಜತೆಗೆ, ಪ್ರಜಾಪ್ರತಿಗೆ ನೀಡಿದ್ದ ಜಾಮೀನನ್ನೂ ರದ್ದು ಮಾಡಿದೆ. ವಿಶೇಷವೆಂದರೆ, ನ್ಯಾ| ಮಿಶ್ರಾ ಅವರು ರವಿವಾರವಷ್ಟೇ (ಎ.30) ನಿವೃತ್ತಿಯಾಗುವವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next