Advertisement
ಶನಿವಾರ ನಗರದ ಕರ್ನಾಟಕ ಕಾನೂನು ಸಂಸ್ಥೆಯ ಅಮೃತ ಮಹೋತ್ಸವ ಮತ್ತು ರಾಜಾ ಲಖಮನಗೌಡ ಕಾನೂನು ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
ಸಂಗೀತದಲ್ಲಿ ಬೆಳಗಾವಿಯ ಕೊಡುಗೆ ಅನನ್ಯವಾಗಿದೆ. ದೇಶ ಇಂದು ಸ್ವಾಮಿ ವಿವೇಕಾನಂದರು ಶಿಕಾಗೋದ ಧರ್ಮ ಸಂಸತ್‌ನಲ್ಲಿ ಭಾಷಣ ಮಾಡಿದ 150ನೇ ವರ್ಷಾಚರಣೆಯಲ್ಲಿದೆ.ಅವರು ಶಿಕಾಗೋದಲ್ಲಿ ಭಾಷಣ ಮಾಡಲು ತೆರಳುವ ಮುನ್ನ 1892ರಲ್ಲಿ ಬೆಳಗಾವಿಗೆ ಭೇಟಿ ನೀಡಿದ್ದರು.ಹೀಗಾಗಿ, ಸ್ವಾಮಿ ವಿವೇಕಾನಂದರ ಶಿಕಾಗೋ ಭಾಷಣ ಬೆಳಗಾವಿಯಿಂದ ಆರಂಭವಾಗಿದೆ.
Advertisement
ಅದೇ ರೀತಿ 1916ರಲ್ಲಿ ಲೋಕಮಾನ್ಯ ತಿಲಕ್ ಅವರು ತಮ್ಮ ಹೋಮ್ ರೂಲ್ ಚಳವಳಿಯನ್ನು ಬೆಳಗಾವಿಯಿಂದ ಆರಂಭಿಸಿರುವುದು ಐತಿಹಾಸಿಕ ಸಂಗತಿ. ಇಂತಹ ಇತಿಹಾಸವುಳ್ಳ ನೆಲಕ್ಕೆ ಬಂದಿರುವದು ನನ್ನ ಸೌಭಾಗ್ಯ ಎಂದರು.
ನ್ಯಾಯಾಧೀಶರು ಸಾರ್ವಕಾಲಿಕ ಅಭಿಯಂತರರು: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮಾತನಾಡಿ, ವ್ಯಕ್ತಿಯ ಶ್ರೇಯೋಭಿವೃದ್ಧಿ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಜ್ಞಾನ ಬಹಳ ಮುಖ್ಯ. ಇಂತಹ ಜ್ಞಾನಮೂರ್ತಿಗಳಾದ ನ್ಯಾಯವಾದಿಗಳು ಹಾಗೂ ನ್ಯಾಯಾಧೀಶರು ಆರೋಗ್ಯಕರ ಸಮಾಜ ನಿರ್ಮಾಣದ ಸಾರ್ವಕಾಲಿಕ ಅಭಿಯಂತರರಾಗಿದ್ದಾರೆ. ಈ ಶಿಲ್ಪಿಗಳನ್ನು, ಜ್ಞಾನವಂತರನ್ನು ಬೆಳಗಾವಿಯ ಕರ್ನಾಟಕ ಕಾನೂನು ಸಂಸ್ಥೆನೀಡಿರುವುದು ಹೆಮ್ಮೆಯ ಸಂಗತಿ ಎಂದರು. ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ ಮಾತನಾಡಿದರು. ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ನ್ಯಾಯಮೂರ್ತಿ ವಿ.ಎಸ್. ಮಳೀಮಠ ಹಾಗೂ ಎಸ್.ವಿ.ವೆಂಕಟರಾಮಯ್ಯ ಅವರ ಭಾವಚಿತ್ರಗಳನ್ನು ರಾಜ್ಯಪಾಲ ವಜೂಭಾಯಿ ವಾಲಾ ಅನಾವರಣಗೊಳಿಸಿದರು. ಸಿಎಂ ಕುಮಾರಸ್ವಾಮಿ ಅವರು ಕೆ.ಕೆ.ವೇಣುಗೋಪಾಲ್ ಆಡಿಟೋರಿಯಂ ಉದ್ಘಾಟಿಸಿದರು. ನ್ಯಾಯಮೂರ್ತಿ ಗಳಾದ
ಮೋಹನ ಶಾಂತನಗೌಡರ, ಎಸ್.ಅಬ್ದುಲ್ ನಜೀರ, ವಿನೀತ ಸರಣ್, ಸಂಸದ ಸುರೇಶ ಅಂಗಡಿ, ಕೆಎಲ್ ಎಸ್ ಅಧ್ಯಕ್ಷ ಅನಂತ ಮಂಡಗಿ ಉಪಸ್ಥಿತರಿದ್ದರು. ಆತ್ಮೀಯ ಸ್ವಾಗತ
ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಷ್ಟ್ರಪತಿ ಹಾಗೂ ಅವರ ಪತ್ನಿಗೆ ಆತ್ಮೀಯ ಸ್ವಾಗತ ಕೋರಲಾಯಿತು. ರಾಜ್ಯಪಾಲ ವಜೂಭಾಯಿ ವಾಲಾ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಪುಷ್ಪಗುತ್ಛ ನೀಡಿ ಸ್ವಾಗತಿಸಿದರು. ಮಹಾ ಪೌರ ಬಸಪ್ಪ ಚಿಕ್ಕಲದಿನ್ನಿ, ಸಂಸದ ಸುರೇಶ ಅಂಗಡಿ, ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ, ಡೀಸಿಜಿಯಾವುಲ್ಲಾ, ಐಜಿಪಿ ಅಲೋಕ್ ಕುಮಾರ್ ಇದ್ದರು.