Advertisement

ಜು. 20-ಅ. 19: ಪ್ರೊ ಕಬಡ್ಡಿ ಸಂಭ್ರಮ

12:46 AM Jun 22, 2019 | Sriram |

ಮುಂಬಯಿ: ಪ್ರೊ ಕಬಡ್ಡಿ 7ನೇ ಆವೃತ್ತಿ ಜು. 20ರಿಂದ ಹೈದರಾ ಬಾದ್‌ನಲ್ಲಿ ಆರಂಭವಾಗಲಿದೆ. ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ ದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ತಂಡವನ್ನು ಯು ಮುಂಬಾ ಎದುರಿಸಲಿದೆ.

Advertisement

ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡವನ್ನು ಬಲಿಷ್ಠ ಪಾಟ್ನಾ ಪೈರೇಟ್ಸ್‌ ಎದುರಿಸಲಿದೆ ಎಂದು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘಟಕರು ತಿಳಿಸಿದ್ದಾರೆ.

12 ತಂಡಗಳ ನಡುವೆ ಒಟ್ಟು 3 ತಿಂಗಳ ಕಾಲ ಈ ಪಂದ್ಯಾವಳಿ ಸಾಗಲಿದ್ದು, ಅಕ್ಟೋಬರ್‌ 19ರಂದು ಪ್ರಶಸ್ತಿ ಕಾಳಗ ಏರ್ಪಡಲಿದೆ.

ಎಲ್ಲ ತಂಡಗಳಿಗೆ ತವರಿನಲ್ಲಿ 4 ಪಂದ್ಯ ಆಡಲು ಅವಕಾಶ ಸಿಗಲಿದೆ. ಗುಂಪು ಹಂತದಲ್ಲಿ ಪ್ರತಿ ತಂಡ 2 ಸಲ ಮುಖಾಮುಖೀಯಾಗಲಿವೆ. ಅಗ್ರ 6 ತಂಡಗಳು ಕೂಟದ ಪ್ಲೇ-ಆಫ್ ಹಂತ ಪ್ರವೇಶಿಸಲಿವೆ.

ಬೆಂಗಳೂರಿಗೆ ಸಿಕ್ಕಿದ್ದೇ ಭಾಗ್ಯ
ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿರುವ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರೊ ಕಬಡ್ಡಿ ಆಯೋಜನೆಗೆ ಅವಕಾಶವೇ ಸಿಕ್ಕಿರಲಿಲ್ಲ. ಇದರಿಂದಾಗಿ ಪ್ರೊ ಕಬಡ್ಡಿ ಬೆಂಗಳೂರು ಚರಣದ ಪಂದ್ಯಗಳು 2017ರಲ್ಲಿ ನಾಗ್ಪುರಕ್ಕೆ ಹಾಗೂ 2018ರಲ್ಲಿ ಪುಣೆಗೆ ಸ್ಥಳಾಂತರಗೊಂಡಿದ್ದವು.

Advertisement

ಆದರೆ ಈ ಸಲ ಸಂತಸದ ಸುದ್ದಿ ಲಭಿಸಿದೆ. ಆ.31ರಿಂದ ಸೆ. 6ರ ತನಕ ಬೆಂಗಳೂರು ಚರಣದ ಪಂದ್ಯಗಳು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿಯೇ ನಡೆಯಲಿವೆ ಎನ್ನುವುದನ್ನು “ಉದಯವಾಣಿ’ಗೆ ಬುಲ್ಸ್‌ ಮೂಲಗಳು ಖಚಿತಪಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next