Advertisement

ಒಲಿಂಪಿಕ್ಸ್‌: ಭಾರತ ತಂಡಕ್ಕೆ ಜೆಎಸ್‌ಡಬ್ಲ್ಯು ಪ್ರಾಯೋಜಕತ್ವ

10:31 PM Jun 25, 2021 | Team Udayavani |

ಹೊಸದಿಲ್ಲಿ : ಟೋಕಿಯೊ ಒಲಿಂಪಿಕ್ಸ್‌ಗೆ ತೆರಳುವ ಭಾರತದ ಆ್ಯತ್ಲೀಟ್‌ಗಳಿಗೆ ಜೆಎಸ್‌ಡಬ್ಲ್ಯು ಗ್ರೂಪ್‌ (ಜಿಂದಾಲ್‌) ಪ್ರಾಯೋಜಕತ್ವ ಲಭಿಸಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಒಲಿಂಪಿಕ್‌ ಸಂಸ್ಥೆಯೊಂದಿಗೆ (ಐಒಎ) ಒಪ್ಪಂದ ಮಾಡಿಕೊಂಡಿದೆ.

Advertisement

ಇಂಡಿಯನ್‌ ಸೂಪರ್‌ ಲೀಗ್‌ ಫ‌ುಟ್‌ಬಾಲ್‌ ಬೆಂಗಳೂರು ಎಫ್ಸಿ ತಂಡದ ಮಾಲಕತ್ವವನ್ನು ಹೊಂದಿರುವ ಜೆಎಸ್‌ಡಬ್ಲ್ಯು ಕಂಪೆನಿ, ಐಒಎ ಜತೆ ಒಂದು ಕೋಟಿ ರೂ. ಮೊತ್ತದ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಿದೆ.

ನಮ್ಮ ಆ್ಯತ್ಲೀಟ್‌ಗಳಿಗೆ ಜೆಎಸ್‌ಡಬ್ಲ್ಯು ಗ್ರೂಪ್‌ ಪ್ರಾಯೋಜಕತ್ವ ಲಭಿಸಿರುವುದು ಖುಷಿಯ ಸಂಗತಿ ಎಂದು ಐಒಎ ಅಧ್ಯಕ್ಷ ನರೀಂದರ್‌ ಬಾತ್ರಾ ಹೇಳಿದ್ದಾರೆ.

ಇದನ್ನೂ ಓದಿ :ಪಾಕಿಸ್ಥಾನ್‌ ಸೂಪರ್‌ ಲೀಗ್‌ ಪಂದ್ಯಾ : ಮುಲ್ತಾನ್‌ ಸುಲ್ತಾನ್ಸ್‌ ಗೆ ಪ್ರಶಸ್ತಿ

Advertisement

Udayavani is now on Telegram. Click here to join our channel and stay updated with the latest news.

Next