Advertisement

ಜುಲೈ 23-24 ರಂದು ಜೆ.ಪಿ ನಡ್ಡಾ ಗೋವಾಕ್ಕೆ ಭೇಟಿ

04:34 PM Jul 21, 2021 | Team Udayavani |

ಪಣಜಿ: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ರವರು ಜುಲೈ 23 ಮತ್ತು 24 ರಂದು ಗೋವಾಕ್ಕೆ ಆಗಮಿಸಲಿದ್ದು, 2022 ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜೆ.ಪಿ.ನಡ್ಡಾ ರವರ ಭೇಟಿ ಮಹತ್ವ ಪಡೆದುಕೊಂಡಿದೆ.

Advertisement

ಜುಲೈ 23 ಮತ್ತು 24 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರವರೊಂದಿಗೆ ಬಿಜೆಪಿ ರಾಷ್ಟ್ರೀಯ ನಾಯಕ ಬಿ.ಎಲ್ರ.ಸಂತೋಷ ಮತ್ತು ಗೋವಾ ಪ್ರಭಾರಿ ಸಿ.ಟಿ ರವಿ ರವರು ಕೂಡ ಗೋವಾಕ್ಕೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ರವರು ಜುಲೈ 12 ಮತ್ತು 13 ರಂದು ಗೋವಾಕ್ಕೆ ಆಗಮಿಸುವವರಿದ್ದರು. ಆದರೆ ಕಾರಣಾಂತರಗಳಿಂದ ಅವರ ಗೋವಾ ಭೇಟಿ ರದ್ದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next