Advertisement

ವಿಐಪಿ ವಿಮಾನದಲ್ಲಿ ನೋಟು ಸಾಗಣೆ?

06:00 AM Sep 01, 2018 | Team Udayavani |

ನವದೆಹಲಿ: ವಿಶೇಷ ವಿಮಾನಗಳು ಗಣ್ಯ ವ್ಯಕ್ತಿಗಳನ್ನು ಹೊತ್ತೂಯ್ಯುವುದರ ಜೊತೆಗೆ ಅಕ್ರಮ ನಗದು ಸಾಗಣೆಯಲ್ಲೂ ತೊಡಗಿವೆಯೇ ಎಂಬ ಅನುಮಾನ ಈಗ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಉಂಟಾಗಿದೆ. ಇತ್ತೀಚೆಗಷ್ಟೇ ಅಕ್ರಮ ಹಣ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಪತ್ರಕರ್ತ ಹಾಗೂ ಉದ್ಯಮಿ ಉಪೇಂದ್ರ ರೈಯನ್ನು ಬಂಧಿಸಿದ್ದು, ವಿಶೇಷ ವಿಮಾನಗಳಲ್ಲಿ ಹಣ ಅಕ್ರಮ ವಹಿವಾಟಿನಲ್ಲಿ ಇವರ ಕೈವಾಡದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

Advertisement

ರೈ ಅಕ್ರಮವಾಗಿ ವಿಮಾನ ನಿಲ್ದಾಣಗಳಿಗೆ ಯಾವುದೇ ವಿಮಾನ ನಿಲ್ದಾಣಕ್ಕೆ ಅವರು ತಪಾಸಣೆ ಇಲ್ಲದೇ ಪ್ರವೇಶಿಸಬಹುದಾಗಿರುವುದರಿಂದ  ಮೇಲ್ನೋಟಕ್ಕೆ ಕಾಣಿಸದಂಥ ಬಾಕ್ಸ್‌ಗಳಲ್ಲಿ ಅಕ್ರಮ ಹಣ ಸಾಗಣೆ ಮಾಡಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಏರ್‌ ಒನ್‌ ಎಂಬ ವಿಮಾನಯಾನ ಸಂಸ್ಥೆಯ ವಿಮಾನಗಳು ದುಬೈನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಮಯದ ವರೆಗೆ ನಿಲ್ಲುತ್ತಿತ್ತು. ಈ ವಿಮಾನಗಳು ಹೆಚ್ಚು ತಪಾಸಣೆ ನಡೆಸದ ಅಲ್‌ ಮಕೌ¤ಮ್‌ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next