Advertisement

ಪತ್ರಕರ್ತ, ಮಾಜಿ ಶಾಸಕ ಬಾಬುರೆಡ್ಡಿ ತುಂಗಳ ನಿಧನ

06:35 AM Nov 10, 2018 | |

ಜಮಖಂಡಿ: ಬಾಗಲಕೋಟೆ ಜಿಲ್ಲೆಯ ಹಿರಿಯ ಪತ್ರಕರ್ತ, ಬೀಳಗಿ ಕ್ಷೇತ್ರದ ಮಾಜಿ ಶಾಸಕ ಬಾಬುರೆಡ್ಡಿ ವೆಂಕರೆಡ್ಡಿ ತುಂಗಳ (84) ಗುರುವಾರ ಮಧ್ಯರಾತ್ರಿ 1:30ಕ್ಕೆ ಹೃದಯಾಘಾತದಿಂದ ನಿಧನರಾದರು.

Advertisement

ಕಳೆದೊಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಪುತ್ರಿ ಡಾ| ವಿಜಯಲಕ್ಷ್ಮೀ ತುಂಗಳರ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಜಮಖಂಡಿ ತಾಲೂಕಿನ ಬಿದರಿ ಅವರ ಸ್ವಗ್ರಾಮದಲ್ಲಿ ಶುಕ್ರವಾರ ಅಂತ್ಯಕ್ರಿಯೆ ನೆರವೇರಿತು. ಸ್ಥಳೀಯ ಕನ್ನಡ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ, ಪುರಸಭೆ ಸದಸ್ಯರಾಗಿ, ಶಾಸಕರಾಗಿ, ಪತ್ರಕರ್ತರಾಗಿ ಅನೇಕ ಸಾಮಾಜಿಕ ಕೆಲಸ-ಕಾರ್ಯದಲ್ಲಿ ಗುರುತಿಸಿಕೊಂಡಿದ್ದರು. 

ರೈತರೇ ನಿರ್ಮಿಸಿದ್ದ ಚಿಕ್ಕಪಡಸಲಗಿಯ ಕೃಷ್ಣಾತೀರ ರೈತ ಸಂಘದ ಅಧ್ಯಕ್ಷರಾಗಿದ್ದ ಇವರು, ಸರ್ಕಾರದ ಯಾವುದೇ ಅನುದಾನವಿಲ್ಲದೇ ಬ್ಯಾರೇಜ್‌ ನಿರ್ಮಿಸುವಲ್ಲಿ ದಿ| ಸಿದ್ದು ನ್ಯಾಮಗೌಡ ಅವರೊಂದಿಗೆ ಮುಂಚೂಣಿಯಲ್ಲಿದ್ದರು. 1985ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬೀಳಗಿ ಮತಕ್ಷೇತ್ರದಿಂದ ಜನತಾ ಪಕ್ಷದಿಂದ ಸ್ಪ ರ್ಧಿಸಿ ಗೆದ್ದಿದ್ದರು. 40 ವರ್ಷಗಳ ಕಾಲ ನಿರಂತರವಾಗಿ ತಮ್ಮ ಹರಿತ ಲೇಖನಿಯಿಂದ “ಕುರುಕ್ಷೇತ್ರ’ ಎಂಬ ವಾರಪತ್ರಿಕೆ ಹೊರಡಿಸುತ್ತಿದ್ದರು. ಕನ್ನಡ ಚಳವಳಿ, ಗಡಿಭಾಗದ ರಕ್ಷಣೆಗೆ ಹೋರಾಟ ಮಾಡಿ ಅನೇಕ ಬಾರಿ ಜೈಲುವಾಸ ಅನುಭವಿಸಿದ್ದರು.

ಅಂತ್ಯಕ್ರಿಯೆ:
ಬಾಬುರೆಡ್ಡಿ ತುಂಗಳ ಅವರ ಸ್ವಗ್ರಾಮ ಬಿದರಿಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಕೊಣ್ಣೂರು ವಿಶ್ವಪ್ರಭು ಶ್ರೀ, ಬಿದರಿಯ ಕುಮಾರೇಶ್ವರ ಶ್ರೀ, ಮುತ್ತಿನಕಂತಿಮಠದ ಶಿವಲಿಂಗ ಶ್ರೀ, ಮಾಜಿ ಶಾಸಕ ಜೆ.ಟಿ. ಪಾಟೀಲ, ಎಸ್‌.ಆರ್‌. ಪಾಟೀಲ, ಶಾಸಕರಾದ ಆನಂದ ನ್ಯಾಮಗೌಡ, ಮುರುಗೇಶ ನಿರಾಣಿ, ಪಿ.ಎಚ್‌. ಪೂಜಾರಿ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಜಿ.ಎಸ್‌. ನ್ಯಾಮಗೌಡ, ಅಪ್ಪು ಪಟ್ಟಣಶೆಟ್ಟಿ, ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಎಸ್‌.ಎಸ್‌. ದೇವರವರ, ಉಮೇಶ ಮಹಾಬಳಶೆಟ್ಟಿ, ಶಿವಕುಮಾರ ಮಲಘಾಣ, ಎಂ.ಸಿ. ಗೊಂದಿ, ವಿ.ವಿ.ತುಳಸಿಗೇರಿ ಸೇರಿದಂತೆ ಗಣ್ಯರು ಹಾಗೂ ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next