Advertisement
ಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಬಹು ಮಾಧ್ಯಮ ನಿರ್ಮಾಣಕೇಂದ್ರದ ಸಹಯೋಗದಲ್ಲಿ ಕಿರುಚಿತ್ರಗಳ ಪ್ರಸ್ತುತತೆ ಮತ್ತು ಸವಾಲುಗಳು ವಿಶೇಷ ಉಪನ್ಯಾಸ, ಸರ್ಕಾರಕ್ಕೆ ಹಾಳು ಕಿರುಚಿತ್ರ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಪ್ಪತ್ತು ಸಾವಿರ ವಿದ್ಯಾರ್ಥಿಗಳಲ್ಲಿ ಮೂರರಿಂದ ನಾಲ್ಕು ಸಾವಿರ ವಿದ್ಯಾರ್ಥಿಗಳ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು. ಎಲ್ಲ ವಿಭಾಗಗಳಲ್ಲಿ ಶಿಕ್ಷಕರ ಕೊರತೆಯಿದೆ. ಈ ವಿಶ್ವವಿದ್ಯಾಲಯದಲ್ಲಿ ಅಗತ್ಯ 120 ಹುದ್ದೆಗಳಿವೆ 90 ಉಪನ್ಯಾಸಕರು ಮಾತ್ರ ಇದ್ದಾರೆ. ಮುಂದಿನ ದಿನಗಳಲ್ಲಿ ಉಪನ್ಯಾಸಕರ ಆಯ್ಕೆ ಮಾಡಲಾಗುತ್ತದೆ. ಈ ಕುರಿತು ಸರ್ಕಾರಕ್ಕೆ ಅನೇಕ ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಅನುಮತಿ ದೊರೆಯುವ ಸಾಧ್ಯತೆಗಳಿವೆ. ಪತ್ರಿಕೋದ್ಯಮದಲ್ಲಿ ಒಂದು ಸೆಮಿಸ್ಟರ್‌ನಲ್ಲಿ ಎರಡು ಉಪನ್ಯಾಸ ಮಾಲೆಗಳನ್ನು ಏರ್ಪಡಿಸಿರಿ. ಈ ವಿಶ್ವವಿದ್ಯಾಲಯ ಅವರಣದಲ್ಲಿ 25 ಕಿ.ಮೀ ವ್ಯಾಪ್ತಿಯಲ್ಲಿ ಪ್ರಸಾರವಾಗುವ ಆಕಾಶವಾಣಿ ಕೇಂದ್ರವನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಹೇಳಿದರು.
Related Articles
Advertisement
ಮುಖ್ಯ ಅಥಿಯಾಗಿದ್ದ ಪತ್ರಕರ್ತ ವಾದಿರಾಜ ವ್ಯಾಸಮುದ್ರ ಮಾತನಾಡಿ, ಪತ್ರಿಕೋದ್ಯಮ ವಿಭಾಗಕ್ಕೆ ಹತ್ತು ವರ್ಷಗಳುತುಂಬಿವೆ. ಈ ವಿಭಾಗ ಸೊರಗಿದ್ದು ಉಂಟು, ಆಗಾಗ ಶಕ್ತಿ ಪಡೆದದ್ದು ಉಂಟು. ಈಗ ಪತ್ರಿಕೋದ್ಯಮ ವಿಭಾಗಕ್ಕೆ ತುಂಬಾ ಬಲ ಬಂದಿದೆ ಎಂದರು. ಗುಲಬರ್ಗಾ ವಿಶ್ವವಿದ್ಯಾಲಯದ ಎಂಜೆಎಂಸೆ ವಿಭಾಗದ ಪ್ರಥಮ ಸಂಯೋಜನಾಧಿಕಾರಿ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಪ್ರೊ| ಬಿ. ಎಸ್. ಮಹೇಶ್ವರಪ್ಪ ಮಾತನಾಡಿ, ವಿವಿಯಲ್ಲಿ ಪತ್ರಿಕೋದ್ಯಮ ವಿಭಾಗ ಸ್ಥಾಪನೆ ಮಾಡಿ ಹಲವಾರು ಸಮಸ್ಯೆಗಳು ಎದುರಾದವು. ಆಗ ಇದ್ದ ಕುಲಪತಿ ಪ್ರೊ| ಬಿ.ಜಿ. ಮೂಲಿಮನಿ ಅವರಿಗೆ ಪತ್ರಿಕೋದ್ಯಮ ಸ್ಥಾಪನೆ ಶ್ರೇಯಸ್ಸು ಸಲ್ಲಬೇಕು. ಮೊದಲಿಗೆ ಮಾಹಿತಿ ತಂತ್ರಜ್ಞಾನ ಗುರುಗಳು ಬೋಧನೆ ಮಾಡುತ್ತಿದ್ದರು. ನಂತರ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲಾಯಿತು. ಈ ಹತ್ತು ವರ್ಷಗಳಲ್ಲಿ ಹಲವಾರು ಸುಧಾರಣೆಗಳು ಕಂಡು ಬಂದಿವೆ. ವಿದ್ಯಾರ್ಥಿಗಳು ಭಕ್ತಿ, ಶ್ರದ್ಧೆಯಿಂದ ವಿಷಯ ಕಲಿಯಬೇಕು ಎಂದರು. ವಿಶೇಷ ಉಪನ್ಯಾಸಕರಾಗಿ ರಾಯಚೂರು ದೂರದರ್ಶನ ಕೇಂದ್ರದ ಅಭಿಯಾಂತ್ರಿಕ ಸಹಾಯಕ ಪ್ರಭು ನಿಷ್ಠಿ ಕಿರುಚಿತ್ರಗಳ ಪ್ರಸ್ತುತತೆ ಮತ್ತು ಸವಾಲುಗಳು ವಿಷಯ ಕುರಿತು ಉಪನ್ಯಾಸ ನೀಡಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿಭಾಗದ ಸಂಯೋಜನಾಧಿಕಾರಿ ಪ್ರೊ| ಎನ್. ಪಾರ್ವತಮ್ಮ ಅಧ್ಯಕ್ಷತೆ ವಹಿಸಿದ್ದರು. ಪ್ರೊ| ವಾಸುದೇವ ಸೇಡಂ, ಹಿರಿಯ ಪತ್ರಕರ್ತ ರಾಮಕೃಷ್ಣ ಬಡಶೇಷಿ, ವಿಶ್ವಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಡಾ| ದೇವೆಂದ್ರಪ್ಪ ತೇಲ್ಕರ್, ಸಿಂಡಿಕೇಟ್ ಸದಸ್ಯರಾದ ಈಶ್ವರ್ ಇಂಗಿನ್, ಸಾಯಿಬಣ್ಣ ಕೆಂಗೂರಿ, ವಿಭಾಗದ ಶಿಕ್ಷಕರಾದ ಡಾ| ಕೆ.ಎಂ. ಕುಮಾರಸ್ವಾಮಿ, ವೆಂಕಟೇಶ ಕಡೂನ, ಚಂದ್ರಲೇಖಾ, ರೀತು ತಳವಾರ, ಹನುಮಂತ ಶೇರಿ, ಕಾನೂನು ವಿಭಾಗದ ಡೀನ್ ಪ್ರೊ| ದೇವಿದಾಸ ಮಾಲೆ, ಕಲಾ ನಿಕಾಯದ ಡೀನ್ ಪ್ರೊ| ವಿಜಯ ತೆಲಂಗ, ಮಲ್ಲಿಕಾರ್ಜುನ ಅಪಚಂದ, ಕಿರು ಚಿತ್ರದ ನಿರ್ದೇಶಕ ರಾಹುಲ್ ಮೈಸೂರು, ಚಿತ್ರ ತಂಡದ ಕಲಾವಿದರು ಹಾಜರಿದ್ದರು.