Advertisement

ಕನ್ನಡದ ಯಾವ ಧಾರಾವಾಹಿಯೂ ಮಾಡದ ದಾಖಲೆಯನ್ನು ‘ಜೊತೆಜೊತೆಯಲಿ’ ಮಾಡಿದೆ

05:59 PM Apr 21, 2021 | Team Udayavani |

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಇದೀಗ ಹೊಸ ದಾಖಲೆ ಬರೆದಿದೆ. ಅನಿರುದ್ಧ್ ಜಟ್ಕರ್ ಮತ್ತು ಮೇಘಾ ಶೆಟ್ಟಿ ನಟನೆಯ ಈ ಜನಪ್ರಿಯ ಧಾರಾವಾಹಿ 400 ಸಂಚಿಕೆಗಳನ್ನು ಪೂರ್ಣಗೊಳಿಸಿದೆ. ಮತ್ತೊಂದು ವಿಶೇಷ ಅಂದ್ರೆ ಜೊತೆ ಜೊತೆಯಲಿ ಧಾರಾವಾಹಿಯ ಟೈಟಲ್ ಸಾಂಗ್ ಯೂಟ್ಯೂಬ್​ನಲ್ಲಿ 2.4 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ.

Advertisement

ಇಲ್ಲಿಯವರೆಗೆ ಕನ್ನಡದ ಯಾವ ಧಾರಾವಾಹಿಯ ಟೈಟಲ್ ಸಾಂಗ್ ಕೂಡ ಯೂಟ್ಯೂಬ್ ನಲ್ಲಿ ಇಷ್ಟೊಂದು ವೀಕ್ಷಣೆ ಪಡೆದಿರಲಿಲ್ಲ. ಪ್ರೀತಿಗೆ ವಯಸ್ಸಿನ, ಸಂಪತ್ತಿನ ಅಂತರವಿಲ್ಲ ಎಂಬುದನ್ನು ಜೊತೆಜೊತೆ ಧಾರಾವಾಹಿ ತಿಳಿಸಿದೆ. ಮಧ್ಯವಯಸ್ಕ ಯಶಸ್ವಿ ಉದ್ಯಮಿ ಆರ್ಯವರ್ಧನ್, ಯುವತಿ ಅನು ಸಿರಿಮನೆ ಪ್ರೇಮಕಥೆ ಧಾರಾವಾಹಿಯ ಮುಖ್ಯ ಕಥಾನಕ. ಇವರಿಬ್ಬರ ಪ್ರೇಮಕಥೆ ಶುರುವಾಗಿ ಹಲವು ಅಡ್ಡಿ ಆತಂಕಗಳನ್ನು ಎದುರಿಸಿ ಗೆಲ್ಲುತ್ತದೆ.

ಸದ್ಯ ಧಾರಾವಾಹಿಯಲ್ಲಿ ಆರ್ಯವರ್ಧನ್ ನನ್ನು ಮದುವೆಯಾಗಲು ಅನು ಸಿರಿಮನೆ ಒಪ್ಪಿದ್ದಾಳೆ. ಆದ್ರೆ ಅವರ ಮದುವೆಗೆ ಹಲವು ಅಡ್ಡಿಗಳು ಬರುತ್ತಿವೆ. ಇಷ್ಟೆಲ್ಲ ಕೂದ್ರೂ ಕೂಡ ಅನು ಮತ್ತು ಆರ್ಯನ ಮದುವೆ ನಡೆಯುತ್ತಾ ಎಂಬುದು ವೀಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.

ಜೊತೆ ಜೊತೆಯಲಿ ಧಾರಾವಾಹಿಯನ್ನು ಆರೂರು ಜಗದೀಶ್ ನಿರ್ದೇಶ ಮಾಡಿದ್ದಾರೆ. ಈ ಧಾರಾವಾಹಿಯ ಮೂಲಕ ನಟಿ ವಿಜಯಲಕ್ಷ್ಮಿ ಸಿಂಗ್ ಮೊಟ್ಟಮೊದಲ ಬಾರಿಗೆ ಕಿರುತೆರೆಯಲ್ಲಿ ಬಣ್ಣ ಹಚ್ಚಿದ್ದಾರೆ. ಆರ್ಯನ ತಾಯಿ ಶಾರದಾ ದೇವಿ ಪಾತ್ರದಲ್ಲಿ ವಿಜಯಲಕ್ಷ್ಮಿ ಕಾಣಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next