Advertisement

England vs West Indies: ವೆಸ್ಟ್‌ ಇಂಡೀಸ್‌ಗೆ ಮೊದಲ ಇನ್ನಿಂಗ್ಸ್‌ ಮುನ್ನಡೆ

08:48 PM Jul 20, 2024 | Team Udayavani |

ನಾಟಿಂಗಂ: ಕಾವೆಮ್‌ ಹಾಜ್‌ ಅವರ ಆಕರ್ಷಕ ಶತಕ ಹಾಗೂ ಅಲಿಕ್‌ ಅಥನಾಜ್‌ ಮತ್ತು ಜೋಶುವ ಡ ಸಿಲ್ವ ಅವರ ಉತ್ತಮ ಆಟದಿಂದಾಗಿ ಪ್ರವಾಸಿ ವೆಸ್ಟ್‌ಇಂಡೀಸ್‌ ತಂಡವು ಇಂಗ್ಲೆಂಡ್‌ ತಂಡದೆದುರಿನ ದ್ವಿತೀಯ ಟೆಸ್ಟ್‌ ಪಂದ್ಯದ ಮೂರನೇ ದಿನ 457 ರನ್ನಿಗೆ ಆಲೌಟಾಯಿತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 41 ರನ್ನುಗಳ ಮುನ್ನಡೆ ಸಾಧಿಸಿತು.

Advertisement

5 ವಿಕೆಟಿಗೆ 351 ರನ್ನುಗಳೊಂದಿಗೆ ಮೂರನೇ ದಿನದ ಆಟ ಮುಂದುವರಿಸಿದ ವೆಸ್ಟ್‌ಇಂಡೀಸ್‌ ತಂಡವು ಊಟದ ವಿರಾಮದ ವೇಳೆಗೆ  ಆಲೌಟಾಯಿತು. ಇನ್ನೆರಡು ದಿನಗಳ ಆಟ ಬಾಕಿ ಉಳಿದಿದ್ದು ಪಂದ್ಯ ಡ್ರಾಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಇಂಗ್ಲೆಂಡ್‌ ಆಕ್ರಮಣಕಾರಿ ರೀತಿಯಲ್ಲಿ ಆಡಿದರೆ ಗೆಲುವು ದಾಖಲಿಸಲು ಪ್ರಯತ್ನಿಸುವ ನಿರೀಕ್ಷೆಯಿದೆ.

32 ರನ್ನಿನಿಂದ ದಿನದಾಟ ಮುಂದುವರಿಸಿದ ಜೋಶುವ ಡ ಸಿಲ್ವ ತಂಡ ಆಲೌಟ್‌ ಆಗುವಾಗ 82 ರನ್‌ ಗಳಿಸಿ ಆಡುತ್ತಿದ್ದರು. 122 ಎಸೆತ ಎದುರಿಸಿದ ಅವರು 10 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದ್ದರು. ಅವರು ಶಮರ ಜೊಸೆಫ್ ಜತೆ ಅಂತಿಮ ವಿಕೆಟಿಗೆ 71 ರನ್ನುಗಳ ಜತೆಯಾಟ ನಡೆಸಿದ್ದರಿಂದ ವೆಸ್ಟ್‌ಇಂಡೀಸ್‌ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸುವಂತಾಯಿತು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌ 416; ವೆಸ್ಟ್‌ಇಂಡೀಸ್‌ ಪ್ರಥಮ ಇನ್ನಿಂಗ್ಸ್‌ 457 (ಅಲಿಕ್‌ ಅಥನಾಜ್‌ 82, ಕಾವೆಮ್‌ ಹಾಜ್‌ 120, ಜೋಶುವ ಡ ಸಿಲ್ವ 82 ಔಟಾಗದೆ, ಕ್ರಿಸ್‌ ವೋಕ್ಸ್‌ 84ಕ್ಕೆ 4).

Advertisement

Udayavani is now on Telegram. Click here to join our channel and stay updated with the latest news.

Next