Advertisement
ದ.ಕ. ಹಾಗೂ ಉಡುಪಿ -ಚಿಕ್ಕಮಗಳೂರು ಕ್ಷೇತ್ರದಿಂದ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜ ನಿಕರು ಸಮಾವೇಶದಲ್ಲಿ ಭಾಗವಹಿಸಿದ್ದರು. ಸಭೆಗೆ ವ್ಯಕ್ತವಾದ ಭಾರೀ ಜನಸ್ಪಂದನೆಯು ಕರಾವಳಿಯಲ್ಲಿ ಮೋದಿ ಅಲೆಗೆ ಇನ್ನಷ್ಟು ಅಬ್ಬರ ತಂದುಕೊಡುವುದರ ಜತೆಗೆ ಬಿಜೆಪಿಯ ಚುನಾವಣ ಪ್ರಚಾರಕ್ಕೆ ಮತ್ತಷ್ಟು ಹುರುಪು ತಂದಿದೆ.
ಸಭೆ ಮುಕ್ತಾಯವಾಗಿ ವಿಮಾನ ನಿಲ್ದಾಣಕ್ಕೆ ಹಿಂದಿರುಗುವಾಗ ಹಂಪನ ಕಟ್ಟೆ ಪ್ರದೇಶದಲ್ಲಿ ಮೋದಿಯವರು ಭದ್ರತೆಯ ಕಟ್ಟುಪಾಡು ಲೆಕ್ಕಿಸದೆ ಕಾರಿನಲ್ಲಿ ನಿಂತು ದೇಹವನ್ನು ಹೊರ ಚಾಚಿ ರಸ್ತೆಬದಿಯಲ್ಲಿ ಕಾದಿದ್ದ ಸಾವಿರಾರು ಜನರತ್ತ ಕೈಬೀಸಿ ಹರ್ಷ ವ್ಯಕ್ತಪಡಿಸಿದರು.
Related Articles
Advertisement
ಹೆಚ್ಚಿದ ಹುರುಪು2014ರ ಚುನಾವಣೆಯಲ್ಲಿ ದೇಶಾದ್ಯಂತ ಇದ್ದ ರೀತಿಯಲ್ಲೇ ಕರಾವಳಿಯಲ್ಲೂ ಮೋದಿ ಅಲೆ ಕೆಲಸ ಮಾಡಿತ್ತು ಮತ್ತು ಈ ಭಾಗದ 3 ಕ್ಷೇತ್ರಗಳಲ್ಲೂ ಬಿಜೆಪಿ ಜಯ ಭೇರಿ ಬಾರಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ದೇಶದಲ್ಲಿರುವುದು ಮೋದಿ ಅಲೆ ಅಲ್ಲ; ಸುನಾಮಿ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಅಭ್ಯರ್ಥಿಗಳಿಗಿಂತಲೂ ಹೆಚ್ಚಾಗಿ ಮೋದಿಯವರನ್ನೇ ಮುಂದಿಟ್ಟು ಕೊಂಡು ಮತ ಯಾಚಿಸುತ್ತಿರುವ ಬಿಜೆಪಿಗೆ ಮೋದಿ ಮಂಗಳೂರು ಸಭೆ ಇನ್ನಷ್ಟು ಹುರುಪು ತುಂಬಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಮೋದಿಯವರು ಮೇ 1ರಂದು ಉಡುಪಿಯಲ್ಲಿ ಮತ್ತು ಮೇ 5 ರಂದು ಮಂಗಳೂರಿನಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ್ದರು. ಆ ಸಲ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಕ್ಲೀನ್‌ಸಿÌàಪ್ ಸಾಧನೆ ಮಾಡಿದ್ದರೆ ದಕ್ಷಿಣ ಕನ್ನಡದ 8ರಲ್ಲಿ 7 ಸ್ಥಾನ ಗೆದ್ದುಕೊಂಡಿತ್ತು. ಈ ಚುನಾವಣೆಯಲ್ಲಿ ಇತಿಹಾಸ ಪುನರಾವರ್ತನೆಯಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ. ಮೋದಿ ಅಲೆಯನ್ನು ಮತವಾಗಿ ಪರಿವರ್ತಿಸಲು ಬಿಜೆಪಿ ಮನೆ ಭೇಟಿ ಕಾರ್ಯಕ್ರಮವನ್ನು ಇನ್ನಷ್ಟು ಬಿರುಸುಗೊಳಿಸಲಿದೆ. - ಅಂದು ಚಾಯ್‌ವಾಲಾ; ಇಂದು ಚೌಕಿದಾರ್
2014ರಲ್ಲಿ ಮೋದಿಯವರು ಮಂಗಳೂರಿನಲ್ಲಿ ಚುನಾವಣ ಪ್ರಚಾರ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಸಂದರ್ಭದಲ್ಲಿ ಚಾಯ್‌ವಾಲಾ ಚರ್ಚೆ ಪ್ರಚಲಿತದಲ್ಲಿತ್ತು. ಭಾಷಣದಲ್ಲೂ ಪ್ರಧಾನ ಅಂಶವಾಗಿ ಪ್ರಸ್ತಾವವಾಗಿತ್ತು. ಕ್ಷೇತ್ರದೆಲ್ಲೆಡೆ ಚಾಯ್‌ಪೇ ಚರ್ಚಾ ಆಯೋಜಿಸಲಾಗಿತ್ತು. ಈ ಚುನಾವಣೆಯಲ್ಲಿ ಚೌಕಿದಾರ್ ಚರ್ಚೆ ಪ್ರಚಲಿತದಲ್ಲಿದೆ. ಮೋದಿ ಭಾಷಣದಲ್ಲಿ ಮತ್ತು ಸಭೆಯಲ್ಲಿ ಮೈ ಭೀ ಚೌಕಿದಾರ್ ಘೋಷಣೆ ಮೊಳಗುತ್ತಿತ್ತು. ಬಿಜೆಪಿ ಕಾರ್ಯಕರ್ತರು ಬಹುಸಂಖ್ಯೆಯಲ್ಲಿ ಚೌಕಿದಾರ್ ದಿರಿಸು, ಟೊಪ್ಪಿಗೆ ಧರಿಸಿ ಭಾಗವಹಿಸಿದ್ದರು. - ”ಟೆಲಿ ಪ್ರಾಮrರ್’ಬಳಕೆ!
ಪ್ರಧಾನಿ ಮೋದಿ ಅವರು ಈ ಬಾರಿಯ ಲೋಕಸಭಾ ಚುನಾವಣ ಪ್ರಚಾರದ ಸಂದರ್ಭದಲ್ಲಿ ತಮ್ಮ ಭಾಷಣಕ್ಕೆ ನೆರವಾಗುವ ಉದ್ದೇಶದಿಂದ ಟೆಲಿಪ್ರಾಮrರ್ ಬಳಸುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಿಗೆ ಹೋಗುವ ಸಂದರ್ಭದಲ್ಲಿ ಅಲ್ಲಿನ ಜನರ ಜತೆಗೆ ಕೆಲವೊಮ್ಮೆ ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಸುಲಭವಾಗಲು ಪದಗಳ ಬಳಕೆಗೆ ಟೆಲಿ ಪ್ರಾಮrರ್ ಬಳಸಲಾಗುತ್ತದೆ. ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಮೋದಿ ಅವರು ಟೆಲಿ ಪ್ರಾಮrರ್ ಸಹಾಯದಿಂದ ಕನ್ನಡದಲ್ಲಿ ಭಾಷಣ ಮಾಡಿದರು. ಪ್ರಧಾನಿ ಭಾಷಣ ಮಾಡುವ ಮುಂಭಾಗದಲ್ಲಿ ಇದಕ್ಕಾಗಿ ಎರಡು ಪ್ರಾಮrರ್‌ಗಳನ್ನು ಇಡಲಾಗಿತ್ತು. ಕನ್ನಡದ ಶಬ್ದಗಳು ಪ್ರಧಾನಿ ಅವರಿಗೆ ಅನುಕೂಲವಾಗುವ ಭಾಷೆಯಲ್ಲಿ (ಬಹುತೇಕ ಹಿಂದಿ) ಟೆಲಿ ಪ್ರಾಮrರ್‌ನಲ್ಲಿ ಮೂಡಿಬರುತ್ತವೆ. ಅದನ್ನು ನೋಡಿಕೊಂಡು ಭಾಷಣ ಮಾಡಲು ಸುಲಭವಾಗುತ್ತದೆ. - ಅನುವಾದ ಬೇಡ ಎಂದ ಕಾರ್ಯಕರ್ತರು!
ಮೋದಿ ಅವರ ಭಾಷಣದ ಧಾಟಿ ಮತ್ತು ಗಟ್ಟಿ ಧ್ವನಿಯಲ್ಲಿನ ಹುಮ್ಮಸ್ಸು ಹಾಗೆಯೇ ಕೇಳಿ ಅನುಭವಿಸುವುದೇ ಒಂದು ಸೊಗಸು. ಆ ದನಿಯಲ್ಲಿನ ಏರಿಳಿತ ಎಲ್ಲವೂ. ಹಾಗಾಗಿ ಈ ಬಾರಿ ಮೋದಿಯವರ ಭಾಷಣ ಅನುವಾದ ಬೇಡ ಎಂದುಬಿಟ್ಟರು ಕಾರ್ಯಕರ್ತರು ಮತ್ತು ಸಾರ್ವಜನಿಕರು.