Advertisement

ವಯಸ್ಸು ಒಂದು ಸಂಖ್ಯೆಯಷ್ಟೇ: ಅದ್ಭುತ ಕ್ಯಾಚ್ ನೊಂದಿಗೆ ಗತಕಾಲ ನೆನಪಿಸಿದ ಜಾಂಟಿ ರೋಡ್ಸ್

01:22 PM Sep 15, 2020 | keerthan |

ದುಬೈ: ಕ್ರಿಕೆಟ್ ಲೋಕದ ಬೆಸ್ಟ್ ಫೀಲ್ಡರ್ ಯಾರು ಎಂದು ಕೇಳಿದರೆ ಕ್ರಿಕೆಟ್ ಅಭಿಮಾನಿಗಳು ತಕ್ಷಣ ಹೇಳುವ ಹೆಸರು ಜಾಂಟಿ ರೋಡ್ಸ್. ದಕ್ಷಿಣ ಆಫ್ರಿಕಾದ ಈ ಮಾಜಿ ಆಟಗಾರ ಕೇವಲ ಫೀಲ್ಡಿಂಗ್ ನಲ್ಲಿ ಪಂದ್ಯದ ಸ್ಥಿತಿ ಬದಲಿಸುವ ತಾಕತ್ತು ಹೊಂದಿದ್ದರು. ಸದ್ಯ ಜಾಂಟಿಗೆ 51 ವರ್ಷ ವಯಸ್ಸಾಗಿದ್ದು, ಆದರೆ ಫಿಲ್ಡಿಂಗ್ ನಲ್ಲಿ ಮಾತ್ ಏನೂ ಬದಲಾವಣೆ ಆಗಿಲ್ಲ.

Advertisement

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಫೀಲ್ಡಿಂಗ್ ಕೋಚ್ ಆಗಿರುವ ಜಾಂಟಿ ರೋಡ್ಸ್ ದುಬೈನಲ್ಲಿ ತಂಡದೊಂದಿಗೆ ಕಾಲ ಕಳೆಯುತ್ತಿದ್ದಾರೆ. ರಾಹುಲ್ ಪಡೆಯ ಯುವ ಆಟಗಾರರಿಗೆ ಮೈದಾನದಲ್ಲಿ ತರಬೇತಿ ನೀಡುತ್ತಿರುವ ಜಾಂಟಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ:ಮೂವಿ ಮಾಫಿಯಾಗೆ ಆದಿತ್ಯ ನಂಟು!: ಉದ್ಧವ್‌ ಪುತ್ರನ ವಿರುದ್ಧ ಬಾಲಿವುಡ್‌ ನಟಿ ಕಂಗನಾ ಆರೋಪ

ಜಾಂಟಿ ರೋಡ್ಸ್ ಕ್ಯಾಚಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋ ಒಂದನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದೆ. ತನ್ನಿಂದ ದೂರಕ್ಕೆ ಎಸೆದ ಚೆಂಡಿಗಾಗಿ ಚಿಗರೆಯಂತೆ ಹಾರಿದ ಜಾಂಟಿ ರೋಡ್ಸ್ ಒಂದೇ ಕೈಯಲ್ಲಿ ಚೆಂಡನ್ನು ಹಿಡಿದರು. ವಿಡಿಯೋ ನೋಡಿದ ಅಭಿಮಾನಿಗಳು ಆಶ್ಚರ್ಯಗೊಂಡಿದ್ದು, ಜಾಂಟಿಗೆ ವಯಸ್ಸು ಎನ್ನುವುದು ಕೇವಲ ಒಂದು ಸಂಖ್ಯೆಯಷ್ಟೇ ಎನ್ನುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next