Advertisement

ಕೊನೇ ಕ್ಷಣದ ಮುನ್ನ ಜಾಲಿ ಮೂಡ್ ನಲ್ಲಿದ್ದ ಕುಚುಕುಗಳು;ವಿಡಿಯೋ ವೈರಲ್

10:30 PM Jun 11, 2023 | Team Udayavani |

ರಾಮನಗರ: ಚನ್ನಪಟ್ಟಣ ತಾಲೂಕಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಸಾವಿಗೀಡಾಗಿದ್ದು, ಸಾಯುವ ಕೆಲ‌ ನಿಮಿಷಗಳ ಮೊದಲು ನಾಲ್ಕು ಮಂದಿ ಸ್ನೇಹಿತರು ಕುಚುಕು, ಕುಚುಕು ಹಾಡು ಹಾಕಿಕೊಂಡು ಜಾಲಿ ಮೂಡ್ ನಲ್ಲಿ ಬರುತ್ತಿದ್ದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Advertisement

ರಾಮನಗರದ ವಿನಯ್,ವಿಜಯ್, ಮಂಜೇಶ್ ಮತ್ತು ನಿಖಿಲ್ ಕೆಲಸ‌ನಿಮ್ಮಿತ್ತ ಮದ್ದೂರು ತಾಲೂಕಿನ ಬೆಸಗರಹಳ್ಳಿಗೆ ಹೋಗಿ ರಾಮನಗರಕ್ಕೆ ಹಿಂದಿರುಗುತ್ತಿದ್ದರು. ಹಿಂದಿರುಗುವಾಗ ಕುಚುಕ್ಕೂ ಹಾಡು ಹೇಳಿಕೊಂಡು ಬರುತ್ತಿದ್ದ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾವಿನಲ್ಲಿ ಜೊತೆಯಾದ ಕುಚುಕುಗಳು
ನಾಲ್ಕೂಮಂದಿ ಒಳ್ಳೆಯ ಸ್ನೇಹಿತರಾಗಿದ್ದು ಕುಚುಕು ಹಾಡು ಹಾಡು ಸಂದರ್ಭದಲ್ಲಿ ಚಾಲಕ‌ ಮಂಜೇಶ್ ಭಾವನಾತ್ಮಕ ವಾಗಿದ್ದು ಈತನ ಪಕ್ಕ ಕುಳಿತಿದ್ದ ವಿನಯ್ ಸಮಾಧಾನ ಮಾಡಿದ ದೃಶ್ಯವಿದೆ. ಇನ್ನು ಇಬ್ಬರು ಕುಚುಕುಗಳು ಸಾವಿನಲ್ಲೂ ಜೊತೆಯಾಗಿರುವುದು ವಿಷಾದನೀಯ ವೆನಿದೆ.
ತೀವ್ರಗಾಯಗೊಂಡಿರುವ ವಿಜಯ್ ಮತ್ತು ನಿಖಿಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next