Advertisement
ಬೇಸಿಗೆಯಲ್ಲಿ ಎಳನೀರು ಸೇವನೆ ಉತ್ತಮ. ಅದರ ಜತೆಗೆ ಆರೋಗ್ಯ ಉತ್ತಮವಾಗಿಟ್ಟುಕೊಳ್ಳಲು ಮತ್ತು ದೇಹವನ್ನು ತಂಪಾಗಿಸುವ ಕೆಲವು ಖಾದ್ಯಗಳನ್ನು ಮನೆಯಲ್ಲಿ ತಯಾರಿಸಬಹುದು. ಹಾಗಾದರೆ ನಾವಿಂದು ಜೋಳದ ನುಚ್ಚು (ಸಂಕಟಿ) ಮಾಡುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.
Related Articles
Advertisement
ಒಲೆಯ ಮೇಲೆ ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಬೇಕು.
ನೀರು ಕುದಿಯುತ್ತಿರುವಾಗ ನೆನೆಸಿಟ್ಟ ಜೋಳದ ನುಚ್ಚನ್ನು ಹಾಕುತ್ತಾ ತಿರುವ ಬೇಕು. (ಏಕೆಂದರೆ ಗಟ್ಟಿ ಆಗುವ ಸಾಧ್ಯತೆ ಇರುತ್ತದೆ)
ಸ್ವಲ್ಪ ಗಟ್ಟಿ ಪ್ರಮಾಣವಾಗುವವರೆಗೂ ತಿರುವುತ್ತಿರಬೇಕು. ಒಂದು ಹದಕ್ಕೆ ಬಂದ ನಂತರ ಅದಕ್ಕೆ ಸಣ್ಣಗೆ ಹೆಚ್ಚಿಟ್ಟ ಈರುಳ್ಳಿ, ಬೆಳ್ಳುಳ್ಳಿ, ಕೊತ್ತಂಬರಿ, ಹಸಿ ಶುಂಠಿ, ಜೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು.
ಜೋಳದ ನುಚ್ಚು ತಯಾರಾದ ಮೇಲೆ ಮಜ್ಜಿಗೆ ಅಥವಾ ಟೊಮೆಟೊ ರಸಂನೋದಿಗೆ ಸೇವಿಸಿದರೆ ದೇಹವೂ ತಂಪು, ಹೊಟ್ಟೆಯೂ ತುಂಬುತ್ತದೆ.