ಬೆಂಗಳೂರು: ಬಹಮಾನದ ಆಸೆ, ಬ್ಯಾಂಕ್ ಅಧಿಕಾರಿ ಸೋಗು, ನವೀಕರಣ ಹೀಗೆ ನಾನಾ ಹೆಸರುಗಳಲ್ಲಿ ಕರೆ ಮಾಡಿ ಒಟಿಪಿ ಪಡೆದು ಅಥವಾ ಮೊಬೈಲ್‌ಗೆ ಲಿಂಕ್ ಕಳುಹಿಸಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದ ಸೈಬರ್ ವಂಚಕರು ಈಗ ಹಣ ಮತ್ತು ಡೇಟಾ ಲೂಟಿಗೆ ಹೊಸ ತಂತ್ರ ಕಂಡುಕೊಂಡಿದ್ದಾರೆ.
ಸೈಬರ್ ವಂಚಕರು “ಜೋಕರ್’ ಅಥವಾ “ಟ್ರೋಜನ್’ ಎಂಬ ಹೊಸ ಮಾಲ್ವೇರ್ ಸೃಷ್ಟಿಸಿ ಆ್ಯಂಡ್ರಾಯ್ಡ ಮೊಬೈಲ್‌ಗಳನ್ನು ಹ್ಯಾಕ್ ಮಾಡಿ ಖಾತೆಗೆ ಕನ್ನ ಹಾಕುತ್ತಿದ್ದಾರೆ. ಆ್ಯಂಡ್ರಾಯ್ಡ ಮೊಬೈಲ್ ಬಳಕೆದಾರರ ಬ್ಯಾಂಕಿಂಗ್, ಅಭಿರುಚಿ, ಸಂದೇಶ ಮತ್ತಿತರ ಆಸಕ್ತಿದಾಯಕ ಆ್ಯಪ್‌ಗ್ಳನ್ನು ಗುರಿಯಾಗಿ ಸಿಮಾಲ್ವೇರ್ ಇನ್‌ಸ್ಟಾಲ್ ಮಾಡಿಸಿ ವಂಚಿಸುತ್ತಿದ್ದಾರೆ. ಇವು ಒಮ್ಮೆ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಆದ ಕೂಡಲೇ ಮೊಬೈಲ್‌ಗೆ ಬರುವ ಒಟಿಪಿ ಸಂದೇಶಗಳ ಸಹಿತ ಎಲ್ಲ ಗೌಪ್ಯ ಮಾಹಿತಿ ಸೈಬರ್ ವಂಚಕರ ಕೈ ಸೇರಲಿದೆ.
ಇಂಟರ್‌ನೆಟ್‌ನಲ್ಲೇ ಹೆಚ್ಚು ಸಮಯ ಕಳೆಯುವ ಜನರ ಆಸಕ್ತಿಯ ಬಗ್ಗೆ ಅರಿತುಕೊಳ್ಳುವ ಕಳ್ಳರು, ಅವರಿಗೆ ಅಗತ್ಯವಿರುವ ವಿಷಯಕ್ಕೆ ಸಂಬಂಧಿಸಿದ ಜಾಹಿರಾತುಗಳನ್ನು ಬ್ರೌಸರ್‌ಗಳಲ್ಲಿ ಪ್ರಕಟಿಸುತ್ತಾರೆ. ಅದಕ್ಕೆ ಸಂಬಂಧಿಸಿದ ಆ್ಯಪ್‌ಗ್ಳು, ಸಂದೇಶ, ಇ-ಮೇಲ್ ಮೂಲಕವೂ ವಿವಿಧ ಆಮಿಷಗಳನ್ನೊಡ್ಡಿ ಲಿಂಕ್ ರೂಪದಲ್ಲಿ ಮಾಲ್ವೇರ್ ಕಳುಹಿಸುತ್ತಾರೆ. ಲಿಂಕ್ ಒತ್ತಿದರೆ ಮಾಲ್ವೇರ್ ಮೊಬೈಲ್‌ಗೆ ಇನ್‌ಸ್ಟಾಲ್ ಆಗುತ್ತವೆ. ಬಳಿಕ ಮೊಬೈಲ್ ಬಳಕೆದಾರರಿಗೆ ಅರಿವಿಲ್ಲದೆ ಅವರ ಡೇಟಾ, ಹಣ ಸೇರಿ ಎಲ್ಲವನ್ನು ಕಳವು ಮಾಡುತ್ತಾರೆ.
ಹೇಗೆ ಡೌನ್‌ಲೋಡ್ ಆಗುತ್ತವೆ?
ಜೋಕರ್ ಮಾಲ್ವೇರ್ ಗೂಗಲ್ ಪ್ಲೇಸ್ಟೋರ್ ಗಳ ಮೇಲೆ ದಾಳಿ ನಡೆಸುತ್ತವೆ. ಮುಖ್ಯವಾಗಿ ಚಂದಾದಾರರಾಗುವ ಆ್ಯಪ್‌ಗಳಲ್ಲಿ ಹೆಚ್ಚು ಸಕ್ರಿಯವಾಗಿವೆ. ಡೆಸ್ಟಿನೇಶನ್, ದೃಢಿಕೃತ ನಂಬರ್ ಗಳು ಸೇರಿ ಎಲ್ಲ ಮಾಹಿತಿ ಸಂಗ್ರಹಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಮೂರು ರೀತಿಯಲ್ಲಿ ಮೊಬೈಲ್ ಸೇರುತ್ತವೆ. ನೇರವಾಗಿ ಡೌನ್ ಲೋಡ್, ಆ್ಯಪ್ ಡೌನ್‌ಲೋಡ್ ಮಾಡುವ ಮೊದಲ ಹಂತದ ಮುಕ್ತಾಯಗೊಂಡಿದ್ದರೂ ಅಂತಿಮವಾಗಿ ಸ್ಟೇಜರ್ ಪೇಲೋಡ್ ಕೇಳುವುದು, ಈ ಎರಡು ಹಂತ ಅಂತಿಮವಾಗಿದ್ದರೂ ಪೇಲೋಡ್ ಮೂಲಕ ಡೌನ್‌ಲೋಡ್ ಕೇಳಿ ಮೊಬೈಲ್ ಸೇರಿಕೊಳ್ಳುತ್ತವೆ. ಬಳಿಕ ಹಂತಹಂತವಾಗಿ ಹಣ ಲೂಟಿ ಮಾಡುತ್ತವೆ ಎಂದು ಸೈಬರ್ ತಜ್ಞರು ವಿವರಿಸುತ್ತಾರೆ.
ಬಳಕೆದಾರರು ಕಡ್ಡಾಯವಾಗಿ ಯಾವುದೇ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಮೊದಲು ಅವುಗಳ ವಿಮರ್ಶೆ, ಪ್ರತಿಕ್ರಿಯೆಗಳನ್ನು ಗಮನಿಸ ಬೇಕು. ಸ್ಕ್ಯಾನರ್, ಪಿಡಿಎಫ್ಅ ನಂತರ ಆ್ಯಪ್ ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೊದಲು ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ಸೈಬರ್ ತಜ್ಞೆ ಶುಭ ಮಂಗಳಾ.
ಮಾಲ್ವೇರ್‌ನಿಂದ ಏನಾಗುತ್ತದೆ?
-ಹೊರಹೋಗುವ ಮತ್ತು ಒಳ ಬರುವ ಸಂದೇಶಗಳ ಸೋರಿಕೆ
-ಮೊಬೈಲ್‌ನಲ್ಲಿನ ಕೀಬೋರ್ಡ್ ಇನ್‌ಪುಟ್ ಅಪರಿಚಿತ ವ್ಯಕ್ತಿ ಬಳಸಹುದು.
-ಡಿವೈಸ್‌ನಲ್ಲಿರುವ ಆ್ಯಪ್‌ಗಳ ಪಟ್ಟಿ, ವಿವರ, ಲೋಕೇಶನ್, ಡೇಟಾ ಕಳವು
-ಮೊಬೈಲ್ ಲಾಕ್ ಆಗುವ ಸಾಧ್ಯತೆ.