ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗ ಮದ ಹಣ ವರ್ಗಾ ವಣೆ, ಮುಡಾ ನಿವೇಶನ ಹಂಚಿಕೆ ಪ್ರಕರಣಗಳಲ್ಲಿ ದಾರಿ ತಪ್ಪುತ್ತಿರುವ ಸರಕಾರಕ್ಕೆ ಚಾಟಿ ಬೀಸಿ ಸರಿದಾರಿಗೆ ತರುವ ಕೆಲಸವನ್ನು ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಮಾಡಲಿವೆ ಎಂದು ಜೆಡಿಎಸ್ ಶಾಸಕಾಂಗ ನಾಯಕ ಬಿ. ಸುರೇಶ್‌ಬಾಬು ಹೇಳಿದರು.
ವಿಧಾನಸಭೆಯಲ್ಲಿ ಜೆಡಿಎಸ್ ಸಭಾನಾಯಕರಾದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಅವರು, ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾದ ಬಳಿಕ ಅವರ ಸ್ಥಾನಕ್ಕೆ ನನ್ನನ್ನು ನೇಮಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆಶೀರ್ವಾದ,
18 ಶಾಸಕರ ಬೆಂಬಲದಿಂದ ಈ ಆಯ್ಕೆ ನಡೆದಿದೆ. ಸ್ಥಾನಕ್ಕೆ ಗೌರವ ಬರುವ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದರು.
ಮುಡಾ ಹಗರಣಕ್ಕೆ ಸಂಬಂಧಿಸಿ ಜಿ.ಟಿ. ದೇವೇಗೌಡರ ಬಳಿ ಕಡತ ಇದೆ. ಈ ವಿಚಾರ ಹೆಚ್ಚು ಚರ್ಚೆ ಆಗುತ್ತಿರುವ ಹೊತ್ತಿನಲ್ಲಿ ನಾಯಕ ಹುದ್ದೆ ಸಿಗದ ಕಾರಣ ಅವರು ವಿಧಾನ ಸಭೆ ಕಲಾಪಕ್ಕೇ ಬರುತ್ತಿಲ್ಲ ಎಂಬ ಆರೋಪಕ್ಕೆ ಉತ್ತರಿಸಿದ ಸುರೇಶ್‌ಬಾಬು, ಅವರು ಸದನಕ್ಕೆ ಬರುತ್ತಾರೆ. ಎಲ್ಲ ವಿಚಾರಗಳಲ್ಲೂ ನಾವೆಲ್ಲರೂ ಒಂದಾಗಿ ಹೋರಾಡುತ್ತೇವೆ ಎಂದು ತಿಳಿಸಿದರು.