Advertisement
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಭಾಗದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ- ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುತ್ತಿದ್ದಾರೆ. ಸೇರ್ಪಡೆ ಭರಾಟೆ ನೋಡಿದರೆ ಉತ್ತರ ಕರ್ನಾಟಕದಿಂದಲೇ 40ಕ್ಕೂ ಅಧಿಕ ಸ್ಥಾನಗಳು ಪಕ್ಷಕ್ಕೆ ಬರಲಿವೆ. ಹೀಗಾಗಿ ಸರಳವಾಗಿ 123 ಸ್ಥಾನಗಳು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಏನಿಸುತ್ತಿದೆ ಎಂದು ಹೇಳಿದರು.
Related Articles
Advertisement
ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಸೇರ್ಪಡೆ ವಿಷಯ ಎಚ್.ಡಿ.ದೇವೇಗೌಡರಿಗೆ ಬಿಟ್ಟದ್ದು, ಶಾಸಕರಾಗಿದ್ದಾಗಲೂ ತಮ್ಮ ಜತೆ ಸಂಪರ್ಕದಲ್ಲಿರಲಿಲ್ಲ. ಜನತಾ ಪರಿವಾರ ಬಿಟ್ಟು ಹೋದವರೆಲ್ಲ ಮರಳಿ ಜೆಡಿಎಸ್ ಗೆ ಬರುತ್ತಿದ್ದಾರೆ ಎಂದರು.
2018ರಲ್ಲೇ ಮಾಡಬಹುದಿತ್ತಲ್ಲ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾದರೆ ಕೆಳಗಡೆ ಕೆಲಸ ಮಾಡಲು ಸಿದ್ದ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದ್ದಾರೆ. ಆದರೆ 2018ರಲ್ಲೇ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹೇಳಿದ್ದರು. ಅದನ್ನು ಆಗಲೇ ಜಾರಿ ತರಬೇಕಿತ್ತು. ಈಗ ತೋರಿಕೆಗೆ ಹೇಳಲಾಗುತ್ತಿದೆ ಎಂದು ತಿರುಗೇಟು ನೀಡಿದರು.