Advertisement
ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಹೈದ್ರಾಬಾದ್ ಕರ್ನಾಟಕ ರೈತ ಸಂಘ ರವಿವಾರ ಆಯೋಜಿಸಿದ್ದ ರೈತ ಜಾಗೃತಿ ಬೃಹತ್ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ನವದೆಹಲಿಯರಾಮಲೀಲಾ ಮೈದಾನದಲ್ಲಿ ಸಾಮಾಜಿಕ ಕಾರ್ಯಕರ್ತ, ಭೃಷ್ಟಾಚಾರ ವಿರೋಧಿ ಹೋರಾಟದ ರೂವಾರಿ ಅಣ್ಣಾ ಹಜಾರೆ ಅವರ ನೇತೃತ್ವದಲ್ಲಿ ಮಾರ್ಚ್ 23ರಂದು ಬೃಹತ್ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನಂದಿವನದ ರೂವಾರಿ, ಶ್ರೀಗುರು ವಿದ್ಯಾಪೀಠದ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಡಿಗ್ಗಾವಿ ಮಾತನಾಡಿ, ಎರಡು ವರ್ಷಗಳ ಹಿಂದೆ ಭೀಕರ ಬರಗಾಲ ಎದುರಾದಾಗ, ಪ್ರಮುಖವಾಗಿ ಎತ್ತುಗಳಿಗೆ ಆಶ್ರಯ ಕಲ್ಪಿಸಲು ನಂದಿವನ ಸ್ಥಾಪಿಸಿದಾಗ ರೈತರ ಬವಣೆಗಳು ಅನುಭವಕ್ಕೆ ಬಂದವು. ಬರೀ ಜಾತಿ ಮುಂದಿಟ್ಟುಕೊಂಡು ಬರುವವರು ಏಲ್ಲಿದ್ದಾರೆ ಎಂದು ಪ್ರಶ್ನಿಸಲಾಯಿತ್ತಲ್ಲದೇ ರೈತರಿಗೆ ಯಾವುದೇ ಜಾತಿ ಇಲ್ಲ ಎಂದು ಮನವರಿಕೆ ಮಾಡಿಕೊಡಲಾಯಿತು. ಅಲ್ಲದೇ ಅಂದಿನಿಂದ ರೈತರ ಅಭ್ಯುದಯಕ್ಕಾಗಿ ಶ್ರಮಿಸಬೇಕು ಎಂದು ನಿರ್ಧರಿಸಿ ಅದೇ ಹಾದಿಯಲ್ಲಿ ನಡೆದು ಬರಲಾಗುತ್ತಿದೆ ಎಂದು ಹೇಳಿದರು.
ಜ್ಞಾನಯೋಗಿ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಚಿನ್ಮಯಗಿರಿ-ಮಹಾಂತಪುರ ಗುಡ್ಡದ ಸಿದ್ಧರಾಮ ಶಿವಾಚಾರ್ಯರು, ಮಾದನಹಿಪ್ಪರಗಾ ಅಭಿನವ ಶ್ರೀಗಳು, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್ ಠಾಕೂರ, ಮಹಿಳಾ ಪ್ರಗತಿಪರ ಚಿಂತಕರ ವೇದಿಕೆಯ ಡಾ| ನಾಗರತ್ನಾ ದೇಶಮಾನ್ಯೆ, ಹೈ.ಕ ರೈತ ಸಂಘದ ಬಿ.ಬಿ.ನಾಯಕ, ಆದಿನಾ