Advertisement

ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಿ: ವಿಜಯ ಕುಮಾರ್‌

07:00 AM Jan 02, 2018 | |

ಕುಂದಾಪುರ: ಸೆಕ್ಯುಲರ್‌ ವ್ಯವಸ್ಥೆಯಿಂದಾಗಿ ರಾಜ್ಯದ 27,000  ದೇವಸ್ಥಾನಗಳು ಮುಜರಾಯಿ ಇಲಾಖೆ ಆಡಳಿತಕ್ಕೆ ಒಳಪಟ್ಟಿದೆ. ನಾವು ಶ್ರದ್ಧೆಯಿಂದ ಹುಂಡಿಗೆ ಹಾಕಿದ 826 ಕೋ. ರೂ. ಹಜ್‌ ಯಾತ್ರೆ, ಮಸೀದಿಗೆ ಕೊಡುತ್ತಾರೆ. ನಾವೆಲ್ಲ ಒಗ್ಗಟ್ಟಾಗಿ ಇದನ್ನು ಮಟ್ಟಹಾಕುವ ಮೂಲಕ 2023ರ ವೇಳೆಗೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕಾಗಿದೆ ಎಂದು ಸನಾತನ ಸಂಸ್ಥೆಯ ವಿಜಯ ಕುಮಾರ್‌ ಹೇಳಿದರು.

Advertisement

ಅವರು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮುದೂರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಹಿಂದೂ ಧರ್ಮ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಹಿಂದೂ ಜನಜಾಗೃತಿ ಸಮಿತಿ ದೇಶದಾದ್ಯಂತ 1,400 ಕ್ಕೂ ಅಧಿಕ ಧರ್ಮ ಜಾಗೃತಿ ಸಭೆ ನಡೆಸಿ, 14,60,000 ಮಂದಿಯನ್ನು ಸ್ವಾಭಿಮಾನದಿಂದ ಧರ್ಮಾಚರಣೆ ಮಾಡಿ ಜೀವಿಸಲು ಪ್ರೇರೇಪಿಸಿದೆ ಎಂದರು.

ಸನಾತನ ಸಂಸ್ಥೆಯ ಶೋಭಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಮೆಕಾಲೆ ಶಿಕ್ಷಣ ಪದ್ದತಿಯಿಂದ ನಮ್ಮ ಗುರುಕುಲ ಪದ್ದತಿ ಮರೆತು ಧರ್ಮಾಚರಣೆಯಿಂದ ವಿಮುಖರಾಗಿದ್ದೇವೆ. ನಮ್ಮ ಪೂರ್ವಜರ ಆಚರಣೆಗಳಿಂದ ಆರೋಗ್ಯ, ಮಾನಸಿಕ ಹಾಗೂ ಶಾರೀರಿಕ ಕ್ಷಮತೆ ಹೆಚ್ಚುತಿತ್ತು. ಈ ನಿಟ್ಟಿನಲ್ಲಿ ನಾವೆಲ್ಲ ಧರ್ಮದ ಪ್ರತಿಯೊಂದೂ ಆಚರಣೆಗಳನ್ನು ಅರಿತು, ಪಾಲಿಸಬೇಕಿದೆ ಎಂದರು.  

ಶಿವಾಜಿ ಮಹಾರಾಜರಂತೆ ಕುಲದೇವರ ನಾಮಜಪ ಮಾಡುತ್ತಾ ರಾಷ್ಟ್ರ ಮತ್ತು ಧರ್ಮದ ಕಾರ್ಯದಲ್ಲಿ ಭಾಗಿಯಾಗುವುದು ಇಂದಿನ ಅಗತ್ಯ ಎಂದು ಸನಾತನ ಸಂಸ್ಥೆಯ ಶ್ರೀಕಲಾ ಜೋಷಿ ಹೇಳಿದರು. ವಿಶ್ವನಾಥ್‌ ನಾಯಕ್‌ ಪ್ರಾಸ್ತವಿಕವಾಗಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next