Advertisement

ಮಲೇರಿಯಾ ಮುಕ್ತ ಭಾರತ ನಿರ್ಮಾಣಕ್ಕೆ ಕೈ ಜೋಡಿಸಿ: ಕಾಪ್ಸೆ

05:12 PM Apr 27, 2019 | Naveen |

ವಿಜಯಪುರ: ಭಾರತವನ್ನು ಪೋಲಿಯೊ ಮುಕ್ತ ದೇಶವನ್ನಾಗಿಸಿದಂತೆ ಮಲೇರಿಯಾ ಮುಕ್ತ ದೇಶವನ್ನಾಗಿಸಲು ಆರೋಗ್ಯ ಇಲಾಖೆ ಪಣತೊಟ್ಟಿದ್ದು ಅದರಂತೆ ಎಲ್ಲ ಸರ್ಕಾರಿ ಇಲಾಖೆಗಳು ಕೂಡ ತಮ್ಮೊಂದಿಗೆ ಸಹಕರಿಸಿದರೆ ದೇಶವನ್ನು ಮಲೇರಿಯಾ ಮುಕ್ತ ಭಾರತವನ್ನಾಗಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ| ಮಹೇಂದ್ರ ಕಾಪ್ಸೆ ಅಭಿಪ್ರಾಯಪಟ್ಟರು.

Advertisement

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದಲ್ಲಿ ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಮಾದ್ಯಮ ಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಲೇರಿಯಾ ಮಾರಣಾಂತಿಕ ರೋಗವಾಗಿದ್ದು ಜನರು ಉತ್ತಮ ಆರೋಗ್ಯ ಕಡೆಗೆ ಗಮನ ಹರಿಸಬೇಕಿದೆ. ಅದರಲ್ಲೂ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಜನರು ತೆಂಗಿನ ಚಿಪ್ಪಿನ ವಿಲೇವಾರಿ, ಟೈರ್‌ಗಳು, ಪ್ಲಾಸ್ಟಿಕ್‌, ಕೊಳಚೆ ನೀರು ಮುಂತಾದ ವಸ್ತುಗಳು ಕಂಡು ಬಂದಲ್ಲಿ ಸಂಬಂಧಪಟ್ಟ ಇಲಾಖೆಗೆ ತಿಳಿಸುವುದು ತಮ್ಮ ಕರ್ತವ್ಯವಾಗಿದ್ದು ಉತ್ತಮ ಆರೋಗ್ಯಕ್ಕೆ ಸ್ವಚ್ಛತೆಯೇ ಮೂಲ ಮದ್ದು ಎಂದರು.

ಮಲೇರಿಯಾ ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಸಂಪತ್‌ ಗುನಾರಿ ಮಾತನಾಡಿ, ಮಲೇರಿಯಾ ನಿರ್ಮೂಲನೆಗೆ ಇಲಾಖೆಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ತರಬೇತಿ ನೀಡುತ್ತಿದ್ದು, ಅತಿ ಸೂಕ್ಷ್ಮ ಕೊಳಚೆ ಪ್ರದೇಶಗಳಲ್ಲಿ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಈ ರೋಗ ಮಾರಣಾಂತಿಕವಾಗಿದ್ದು ನೇರವಾಗಿ ಮಿದುಳು ಜ್ವರ ತಂದು ಮನುಷ್ಯ ಮರಣಕ್ಕೆ ತುತ್ತಾಗುವಂತ ಪರಿಸ್ಥಿತಿ ಎದುರಾಗಬುಹುದಾಗಿದೆ. ಅದ್ದರಿಂದ ಜನರು ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.

ಇಲಾಖೆಯ ತಂಡ ಪ್ರತಿ ಗ್ರಾಮಗಳ ಮನೆ ಮನೆಗೂ ತೆರಳಿ ಕುಟುಂದ ಎಲ್ಲ ಸದಸ್ಯರ ರಕ್ತ ಪರಿಶೀಲನೆ ಮಾಡುವುದರ ಮೂಲಕ ಮಲೇರಿಯಾ ಪತ್ತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು. ಕಳೆದ ಬಾರಿ ಮುದ್ದೆಬಿಹಾಳ ತಾಲೂಕಿನಲ್ಲಿ 13 ಸಾವಿರ ಬೆಡ್‌ನೆಟ್ಳನ್ನು ವಿತರಿಸಿದ್ದು, ಆರೋಗ್ಯ ಇಲಾಖೆಯಿಂದ ಎಲ್ಲ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ರೋಗ ನಿರ್ಮೂಲನೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

Advertisement

ಅದರಂತೆ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ನಗರ ನೀರು ಸರಬರಾಜು ಮಂಡಳಿ, ಮೀನುಗಾರಿಕೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನೀರಾವರಿ ಇಲಾಖೆ, ಮುಂತಾದ ಎಲ್ಲ ಸರ್ಕಾರಿ ಇಲಾಖೆಗಳು ಜಿಲ್ಲೆಯಲ್ಲಿ ಮಲೇರಿಯಾ ರೋಗ ನಿರ್ಮೂಲನೆಗೆ ಕೈ ಜೋಡಿಸಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಹಿರಿಯ ಆರೋಗ್ಯ ಸಹಾಯಕ ವಿ.ಎಸ್‌. ಬಂದಿ, ಡಾ| ಎಂ.ಬಿ. ಬಿರಾದಾರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next