Advertisement

ಜಾನಿಯ ವಿಶೇಷ ಸ್ಪರ್ಧೆ!

10:25 AM Aug 06, 2017 | Team Udayavani |

ವಿಜಯ್‌ ರಾಘವೇಂದ್ರ ಅಭಿನಯದ “ಜಾನಿ’ ಚಿತ್ರವು ಇದೇ ವಾರ ರಾಜ್ಯಾದ್ಯಂತ 125ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ ಚಿತ್ರವನ್ನು ವಿಶೇಷ ರೀತಿಯಲ್ಲಿ ಪ್ರಮೋಟ್‌ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದ್ದು, ಅದಕ್ಕಾಗಿಯೇ ಒಂದು ಹೊಸ ಸ್ಪರ್ಧೆಯನ್ನು ಆಯೋಜಿಸಿದೆ.

Advertisement

“ಜಾನಿ’ ಚಿತ್ರದ ವಿಶೇಷವೆಂದರೆ, ಜೋ ಎಂಬ ನಾಯಿ. ನಾಯಕ ಜಾನಿ ಜೊತೆಗಿರುವ ಈ ನಾಯಿ, ಚಿತ್ರದುದ್ದಕ್ಕೂ ಕಾಣಿಸಿಕೊಳ್ಳುತ್ತದಂತೆ. ಅಷ್ಟೇ ಅಲ್ಲ, ನಾಯಕನ ಹಲವು ಸಮಸ್ಯೆಗಳಲ್ಲಿ ಸಾಥ್‌ ಜೊತೆಗಿರುತ್ತದಂತೆ. ಈ ಅಂಶವನ್ನು ಬಳಸಿಕೊಳ್ಳುತ್ತಿರುವ ಚಿತ್ರತಂಡವು, ಒಂದು ಸ್ಪರ್ಧೆಯನ್ನು ಆಯೋಜಿಸಿದೆ.

ಈ ಸ್ಪರ್ಧೆಯ ಪ್ರಕಾರ, ಪ್ರೇಕ್ಷಕರು ತಮ್ಮ ಬಳಿ ಮುದ್ದಾದ ಮತ್ತು ನಿಯತ್ತಿನ ನಾಯಿಗಳಿದ್ದರೆ, ಅದರ ಜೊತೆಗಿನ ವೀಡಿಯೋ ಮಾಡಿ ಕಳುಹಿಸಬೇಕು. ಹಾಗೆ ಬಂದ ವೀಡಿಯೋಗಳಲ್ಲಿ ಅದ್ಭುತವಾದ ವೀಡಿಯೋಗೆ 10 ಸಾವಿರ ರೂಪಾಯಿ ಬಹುಮಾನ ಕೊಡಲಾಗುತ್ತದೆ.

ನಂತರದ ಎರಡು ವೀಡಿಯೋಗಳಿಗೆ ತಲಾ ಐದು ಸಾವಿರ ಮತ್ತು ಮೂರು ಸಾವಿರ ರೂಪಾಯಿ ಬಹುಮಾನ ಕೊಡಲಾಗುತ್ತದಂತೆ. ಜೊತೆಗೆ, ಮೂರೂ ವಿಜೇತರಿಗೆ ಚಿತ್ರ ನೋಡುವುದಕ್ಕೆ ಟಿಕೆಟ್‌ಗಳನ್ನು ನೀಡಲಾಗುತ್ತದಂತೆ. ಅಂದ ಹಾಗೆ, ವೀಡಿಯೋಗಳನ್ನು 8050377768 ನಂಬರ್‌ಗೆ ಆಗಸ್ಟ್‌ 10ನೇ ತಾರೀಖೀನೊಳಗೆ ಕಳುಹಿಸಬೇಕು.

“ಜಾನಿ’ ಚಿತ್ರವನ್ನು ಹಿರಿಯ ಛಾಯಾಗ್ರಾಹಕ ಪಿ.ಕೆೆ.ಎಚ್‌. ದಾಸ್‌ ನಿರ್ದೇಶಿಸಿದ್ದಾರೆ. ಇದು ಅವರ ಮೊದಲ ಚಿತ್ರ. ಇನ್ನು ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದು, ಇದು ಅವರ 25ನೇ ಚಿತ್ರವಾಗಿದೆ. ಜಾನಕಿರಾಮ್‌, ಅರವಿಂದ್‌ ನಿರ್ಮಿಸಿರುವ ಈ ಚಿತ್ರದಲ್ಲಿ ವಿಜಯ್‌ ರಾಘವೇಂದ್ರ ಜೊತೆಗೆ ಮಿಲನ ನಾಗರಾಜ್‌, ಶೋಭರಾಜ್‌, ಸುಮನ್‌, ರಂಗಾಯಣ ರಘು, ಸಾಧು ಕೋಕಿಲ, ಸುಮಿತ್ರಮ್ಮ ಮುಂತಾದವರು ನಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next