Advertisement
ಗ್ರಾ.ಪಂ. ಕಾರ್ಯ (ಟಾಸ್ಕ್ ಫೋರ್ಸ್) ಪಡೆಯು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಿಗೆ ತೆರಳಿ, ಆರೋಗ್ಯ ಇಲಾಖೆ ಸೂಚಿಸಿರುವ ಮುಂಜಾಗೃತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಕುರಿತು ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಸೋಂಕು ಹರಡದಂತೆ ವಿಶೇಷ ಕಾಳಜಿ ವಹಿಸಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜೋಗುಂಡಭಾವಿ, ಕೋಟೆಗುಡ್ಡ, ಅಮ್ಮಾಪುರ, ಹುಲ್ಲಿಕೇರಿ, ರಾಯನಗೊಳ, ತಂಗಡಬಯಲು, ಬಸಿರಿಗಿಡ ತಾಂಡಾ, ಗಡ್ಡದ ತಾಂಡಾ, ಬೆಳ್ಳಿಗುಂಡ ತಾಂಡಾ, ಸಣ್ಣ ಚಾಪಿ ತಾಂಡಾ, ದೊಡ್ಡ ಚಾಪಿ ತಾಂಡಾ ಗ್ರಾಮಗಳಿವೆ.
Related Articles
Advertisement
ಈ ಹಿನ್ನೆಲೆಯಲ್ಲಿ ಗ್ರಾಮೀಣ ಮಟ್ಟದ ಕಾರ್ಯ ಪಡೆಯು ಅತ್ಯಂತ ಮುತುವರ್ಜಿ ವಹಿಸಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೊರೊನಾ ಸರಪಳಿ ತುಂಡರಿಸಿ ಕೊರೊನಾ ಮುಕ್ತ ಗ್ರಾಮವಾಗಿಸುವತ್ತ ದಿಟ್ಟ ಹೆಜ್ಜೆ ಇಡಲಾಗಿದೆ. ಕೊರೊನಾ ಸಂಕಷ್ಟದ ಮಧ್ಯೆಯೂ ನರೆಗಾ ಅಡಿಯಲ್ಲಿ ನೋಂದಾಯಿತ ಕೂಲಿ ಕಾರ್ಮಿಕರಿಗೆ ತಮ್ಮ ಜಮೀನುಗಳಲ್ಲಿ ಬದು, ರಸ್ತೆ ನಿರ್ಮಾಣ ಸೇರಿದಂತೆ ಇತರೆ ಕೃಷಿಗೆ ಪೂರಕವಾಗುವ ಕಾಮಗಾರಿಗಳನ್ನು ಕೈಗೊಂಡು ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗುತ್ತಿದೆ.
ಕೋವಿಡ್ ಮಾರ್ಗಸೂಚಿಯಂತೆ ಕೂಲಿ ಕಾರ್ಮಿಕರು ಕಡ್ಡಾಯ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವದು ಮತ್ತು ಸ್ಯಾನಿಟೈಸರ್ ಬಳಸಿ ಕೆಲಸ ನಿರ್ವಹಿಸುವಂತೆ ನೋಡಿಕೊಂಡು ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ವಾರ್ಡ್ ವ್ಯಾಪ್ತಿಯ ಮನೆಗಳಿಂದ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡಿ ಗ್ರಾಮವನ್ನು ಕಸ ಮುಕ್ತ, ಸ್ವತ್ಛ ಗ್ರಾಮವಾಗಿಸಲು ಶ್ರಮಿಸಲಾಗುತ್ತಿದೆ.
ಕೊರೊನಾ ಸಂಕಷ್ಟದ ಮಧ್ಯೆಯೂ ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಾದ ಗುರುರಾಜ ಜೋಶಿ, ಲೆಕ್ಕಿಗ ಲಕ್ಷ್ಮಣ ನಾಯಕ, ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪ್‌ರೇಟರ್, ವಾಟರ್‌ವೆುನ್, ಸ್ವತ್ಛತಾ ಕರ್ಮಿಗಳು ಇತರೆ ಎಲ್ಲ ಸಿಬ್ಬಂದಿ ಸೋಂಕು ನಿಯಂತ್ರಣಕ್ಕೆ ವಿಶೇಷ ಕಾಳಜಿ ವಹಿಸಿ ಕರ್ತವ್ಯ ನಿರ್ವಹಿಸುತ್ತ ಕೊರೊನಾ ಯೋಧರಾಗಿದ್ದಾರೆ.